»   » ಯಶ್ ಕೈ ತಪ್ಪಿದ ಕನ್ನಡದ ಮೋಸ್ಟ್ ಡಿಸೈರಬಲ್ ಪಟ್ಟ

ಯಶ್ ಕೈ ತಪ್ಪಿದ ಕನ್ನಡದ ಮೋಸ್ಟ್ ಡಿಸೈರಬಲ್ ಪಟ್ಟ

Posted By: ಜೀವನರಸಿಕ
Subscribe to Filmibeat Kannada

ಪ್ರತಿ ವರ್ಷ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್' ಮತ್ತು ವುಮೆನ್ ಪಟ್ಟಿಯನ್ನ ರಿಲೀಸ್ ಮಾಡುತ್ತೆ. ಇದನ್ನ ಪಬ್ಲಿಕ್ ಓಟಿಂಗ್ ಮೂಲಕ ಆಯ್ಕೆ ಮಾಡಲಾಗುತ್ತೆ. ಕಳೆದ ವರ್ಷ ಕನ್ನಡದ ಮೋಸ್ಟ್ ಡಿಸೈರಬಲ್ ಮೆನ್ ಆಗಿದ್ದ ರಾಕಿಂಗ್ ಸ್ಟಾರ್ ಯಶ್ ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಪ್ರತಿ ವರ್ಷದಲ್ಲಿ ಆಯಾ ಸೆಲೆಬ್ರಿಟಿಯ ಯಶಸ್ಸು ಮತ್ತು ಜನರಿಗಿರೋ ಕ್ರೇಜ್ ಇಲ್ಲಿ ಕೌಂಟ್ ಆಗುತ್ತೆ. ಅದಕ್ಕಿಂತ ಹೆಚ್ಚಾಗಿ ಟೈಮ್ಸ್ ಸಂಪರ್ಕಿಸುವ ಜನರೇ ಓಟ್ ಮಾಡಿ ಈ ಟಾಪ್ ಮೋಸ್ಟ್ ಡಿಸೈರಬಲ್ ಫೇಸ್ ಗಳನ್ನ ಆಯ್ಕೆ ಮಾಡ್ತಾರೆ. [2013: ಕಿಚ್ಚ ಸುದೀಪ್ ಹಿಂದಿಕ್ಕಿದ ಯಶ್ ನಂ.1]

ಹಾಗಾದ್ರೆ ಈ ಬಾರಿಯ ಪಟ್ಟಿಯಲ್ಲಿ ಟಾಪರ್ ಗಳ್ಯಾರು. ಟಾಪರ್ ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರೋ ಸಿನಿಮಾ ಸ್ಟಾರ್ ಗಳು ಯಾರ್ಯಾರು? ಪವರ್ ಸ್ಟಾರ್ ಪುನೀತ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಟ್ಟಿಯಲ್ಲಿ ಯಾವ ರ್ಯಾಕಿಂಗ್ ನಲ್ಲಿದ್ದಾರೆ ನೋಡೋಣ ಬನ್ನಿ.

ಕಿಚ್ಚ ಸುದೀಪ್ ನಂಬರ್ 1

2014ರ ವರ್ಷದ ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಕನ್ನಡ ಪಟ್ಟವನ್ನ ಅಲಂಕರಿಸಿರೋದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಕಳೆದಬಾರಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಕಿಚ್ಚ ಈ ಬಾರಿ ನಂಬರ್ 1 ಆಗಿದ್ದಾರೆ.

ಯಶ್ ಮೂರನೇ ಸ್ಥಾನಕ್ಕೆ

ಸತತ ಗೆಲುವುಗಳನ್ನೇ ದಾಖಲಿಸ್ತಿದ್ರೂ ಯಶ್ ಅಚ್ಚರಿ ಅನ್ನಿಸೋ ಹಾಗೆ ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಇನ್ ಕನ್ನಡ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಅಚ್ಚರಿಯ ಎಂಟ್ರಿ ಧನಂಜಯ್

'ರಾಟೆ' ಸಿನಿಮಾ ಸದ್ದಿನ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಲ್ಲಿರೋ ನಟ ಧನಂಜಯ್ ಅಚ್ಚರಿ ಎಂಟ್ರಿ ಜೊತೆಗೆ ಟಾಪ್ 4ನೇ ಸ್ಥಾನದಲ್ಲಿದ್ದಾರೆ. ಮೊದಲ ಸಿನಿಮಾದಿಂದ್ಲೆ ಭರವಸೆ ಮೂಡಿಸಿರೋ ಧನಂಜಯ್ ಗೆ ಟೈಮ್ಸ್ ಓಟರ್ ಗಳು ಜೈ ಅಂದಿದ್ದಾರೆ.

ದಿಗಂತ್ ಮತ್ತೆ ಟಾಪ್ ಫೈವ್ ನಲ್ಲಿ

ಗೆಲ್ಲೋ ಸಿನಿಮಾಗಳನ್ನ ಕೊಡದಿದ್ರೂ ಬೆತ್ತಲ ಚಿತ್ರದಿಂದ ಪರಪಂಚದಾದ್ಯಂತ ಪ್ರಚಾರದಲ್ಲಿದ್ದ ದಿಗಂತ್ ಮೂರನೇ ಸ್ಥಾನದಿಂದ ಐದನೇ ಸ್ಥಾನಕ್ಕಿಳಿದಿದ್ದಾರೆ.

ಪವರ್ಸ್ಟಾರ್ 11 ಉಪ್ಪಿ 13

ಈ ಬಾರಿಯ ಲಿಸ್ಟ್ ನಲ್ಲಿ ಪುನೀತ್ ಟಾಪ್ ಟೆನ್ ನಿಂದಲೂ ಹೊರ ಬಿದ್ದಿದ್ದಾರೆ. 11ನೇ ಸ್ಥಾನದಲ್ಲಿ ಪುನೀತ್ ಇದ್ರೆ ಸ್ಪರ್ಧೆಯಲ್ಲಿ ರಿಯಲ್ ಸ್ಟಾರ್ 13ನೇ ಸ್ಥಾನ ಪಡೆದಿದ್ದಾರೆ.

ದರ್ಶನ್ 19 ಜೆಕೆ 14

ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಶಸ್ವಿ ಸಿನಿಮಾಗಳ ಕೊರತೆಯಿಂದ ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಇನ್ ಕನ್ನಡ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ರೆ, ಸೀರಿಯಲ್ ಸ್ಟಾರ್ ಜೆ ಕೆ 14ನೇ ಸ್ಥಾನದಲ್ಲಿದ್ದಾರೆ.

ಚಿರು,ರಕ್ಷಿತ್ ಶೆಟ್ಟಿ ಇಲ್ಲ

ಕಳೆದ ವರ್ಷ ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಇನ್ ಕನ್ನಡ ಟಾಪ್ 25 ಲಿಸ್ಟ್ ನಲ್ಲಿದ್ದ ರಕ್ಷಿತ್ ಶೆಟ್ಟಿ ಮತ್ತು ಚಿರಂಜೀವಿ ಸರ್ಜಾ ಈ ಬಾರಿ ಕಾಣಿಸ್ತಿಲ್ಲ.

English summary
This time Rocking Star Yash missed 'Times Most Desirable Men 2014' title. Kichcha Sudeep bags number one position in the list. Here is the Bangalore Times 25 Most Desirable Men in 2014.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada