ಈ ಫೋಟೊದಲ್ಲಿರುವ ಕನ್ನಡದ ಸ್ಟಾರ್ ನಟ ಯಾರು ಗೊತ್ತೆ?
ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಈಗ ಜಗತ್ತೇ ಮೆಚ್ಚಿದ ರಾಕಿ ಭಾಯ್. ಯಶ್ ಸಿನಿಮಾ ಅಥವಾ ಜೀವನವನ್ನು ನೋಡುವುದಾದರೆ ಕೆಜಿಎಫ್‌ಗೂ ಮೊದಲು ಮತ್ತು ಕೆಜಿಎಫ್ ನಂತರ ಎಂದು ವಿಂಗಡಿಸ ಬಹುದು. ಯಾಕೆಂದರೆ ಯಶ್ ಅಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಆಗುವ ಮೊದಲು ಯಶ್... ಯಶ್ ಆಗುವ ಮೊದಲು ನವೀನ್ ಕುಮಾರ್ ಆಗಿದ್ದರು ಇಂದು ನಾವು, ನೀವು ನೋಡುತ್ತಿರುವ ರಾಕಿ ಭಾಯ್. ಹೌದು, ರಾಕಿಂಗ್ ಸ್ಟಾರ್ ಯಶ್ ತಮ್ಮ ನಾಯಕ ನಟನಾಗುವ ಕನಸು ಕಟ್ಟಿಕೊಂಡೇ ಬಣ್ಣದ ಲೋಕಕ್ಕೆ ಬಂದವರು.
ತೆರೆಯ ಮೇಲೆ ಹತ್ತಾರು ವೇಷಗಳಲ್ಲಿ ಕಾಣಿಸಿಕೊಂಡ ನಟ ಯಶ್, ತೆರೆಗೆ ಬರುವ ಮುನ್ನ ಹೇಗಿದ್ರು ಗೊತ್ತಾ? ಅಂದರೆ ನಟನೆಯನ್ನು ಆರಂಭಿಸುವ ಮುನ್ನ ಯಶ್ ಹೇಗಿದ್ದರು ಎಂದು ಈ ಸ್ಟೋರಿಯಲ್ಲಿ ನೋಡ ಬಹುದು ಮುಂದೆ ಓದಿ...

ಕಿರುತೆರೆಯಿಂದ ಬಂದ ಯಶ್!
ಇಂದು ರಾಕಿಂಗ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಯಶ್, ಅಭಿನಯವನ್ನು ಶುರು ಮಾಡಿದ್ದು ಕಿರುತೆರೆ ಮೂಲಕ. ನಂತರ ಸಿನಿಮಾಗೆ ಬಂದು ಮೊದಲ ಚಿತ್ರದಲ್ಲೇ ಗಮನ ಸೆಳೆದರು. ನಂತರ ಹಲವಾರು ಸಿನಿಮಾಗಳಲ್ಲಿ ಹಲವಾರು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಕೆಜಿಎಫ್' ಬಳಿಕ ರಾಕಿ ಭಾಯ್ ಪಟ್ಟಕ್ಕೇರಿ ಕುಳಿತುಕೊಂಡಿದ್ದಾರೆ. ಈಗ ಯಶ್ ಬಗ್ಗೆ ಇದನ್ನೆಲ್ಲಾ ಹೇಳಲು ಕಾರಣ ಅವರ ಡ್ರಾಮಾ ದಿನಗಳು.

ಯಶ್ ನಾಟಕದ ಫೋಟೊ!
ನಟ ಯಶ್ ಬಣ್ಣದ ಲೋಕಕ್ಕೆ ಬರುವ ಮುನ್ನ ಅಭಿನಯವನ್ನು ಕಲಿತಿದ್ದಾರೆ. ನಾಟಕ ಕಂಪನಿಗಳಲ್ಲಿ ಸೇರಿಕೊಂಡು ಅಭಿನಯವನ್ನು ಕಲಿತಿದ್ದಾರೆ. ಬೆನಕ ಕಂಪನಿಯಲ್ಲಿ ಯಶ್ ನಾಟಕಗಳನ್ನು ಮಾಡಿ ಅಭಿನಯ ಕಲಿತಿದ್ದಾರೆ. ಆ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೊಗಳಲ್ಲಿ ಒಂದು ಫೋಟೊದಲ್ಲಿ ಯಶ್ ಅವರನ್ನು ಸುಲಭವಾಗಿ ಗುರುತಿಸ ಬಹುದು. ಈ ಎರಡು ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಆಗಿದ್ದು ವೈರಲ್ ಆಗಿವೆ.

'ಕೆಜಿಎಫ್' ಬಳಿಕ ಯಶ್ ಯಶಸ್ಸು!
ನಟ ರಾಕಿಂಗ್ ಸ್ಟಾರ್ ಯಶ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಅವರು ಕನ್ನಡಿಗರಿಗೆ ಮಾತ್ರ ಸ್ಟಾರ್ ನಟನಾಗಿದ್ದರು. ಆದರೆ 'ಕೆಜಿಎಫ್' ಸಿನಿಮಾದಿಂದ ಈಗ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಪಟ್ಟಿ ಸೇರಿಕೊಂಡಿದ್ದಾರೆ. 'ಕೆಜಿಎಫ್' ತಂದು ಕೊಟ್ಟ ಅದ್ಭುತ ಯಶಸ್ಸು, ಯಶ್ ಮೌಲ್ಯವನ್ನು ಹೆಚ್ಚು ಮಾಡಿದೆ.

'Y 19' ಬಗ್ಗೆ ಹತ್ತಾರು ಸುದ್ದಿಗಳು!
ನಟ ಯಶ್ 19ನೇ ಸಿನಿಮಾ ಯಾವುದು ಎನ್ನುವುದಕ್ಕೆ 3 ಉತ್ತರಗಳಿದ್ದವು. ಒಂದು ನರ್ತನ್ ನಿರ್ದೇಶನ, ಮತ್ತೊಂದು 'ಕೆಜಿಎಫ್ 3'. ಇನ್ನುಂದು ತಮಿಳು ನಿರ್ದೇಶಕ ಶಂಕರ್. ಈಗ ನರ್ತನ್ ಸಿನಿಮಾ ಮುಂದೂಡಲಾಗಿದೆ. ಇನ್ನು 'ಕೆಜಿಎಫ್ 3' ಮತ್ತು ಶಂಕರ್ ಸಿನಿಮಾಗಳು ಮಾತ್ರ ಲಿಸ್ಟ್‌ನಲ್ಲಿ ಇವೆ. ಈ ಚಿತ್ರಗಳಲ್ಲೇ ಯಾವುದಾದರೂ ಕೈಗೆತ್ತಿಕೊಳ್ಳುತ್ತಾರ ಯಶ್ ಅಥವಾ ಬೇರೆ ಸರ್ಪ್ರೈಸ್ ಕೊಡ್ತಾರಾ ಅಂತ ನೋಡಬೇಕಿದೆ.


Click it and Unblock the Notifications











