ಅದ್ಧೂರಿಯಾಗಿ ವರಮಹಾಲಕ್ಷ್ಮಿ ಪೂಜೆ ಮಾಡಿದ ರಾಕಿಂಗ್ ಜೋಡಿ, ರಾಧಿಕಾ ಕುಮಾರಸ್ವಾಮಿ

'ಕೆಜಿಎಫ್' ಚಿತ್ರಗಳಿಂದ ಪ್ಯಾನ್ ಇಂಡಿಯ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ಮನೆಯಲ್ಲಿಯೇ ಮಕ್ಕಳಾದ ಐರಾ ಮತ್ತು ಯಥರ್ವ್ ಜೊತೆಗೆ ವ್ರತ ಮಾಡಿದ್ದು, ಮುದ್ದಾದ ಕುಟುಂಬದ ಚಿತ್ರಗಳನ್ನು ನಟಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಶುಕ್ರವಾರ (ಆಗಸ್ಟ್ 25) ರಂದು ದೇಶದ ಹಲವೆಡೆ ವರಮಹಾಲಕ್ಷಿ ಹಬ್ಬ ಆಚರಿಸಲಾಗಿದ್ದು, ಚಂದನವನದ ನಟ ನಟಿಯರು ಕೂಡ ವೈಭವಯುತವಾಗಿ ಲಕ್ಷ್ಮೀಯನ್ನು ಕೂರಿಸಿ ಪೂಜೆ ಮಾಡಿದ್ದರು. ಇದರ ಚಿತ್ರಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದರು. ರಾಧಿಕಾ ಪಂಡಿತ್ ಕೂಡ ತಮ್ಮ ಮನೆಯಲ್ಲಿ ನಡೆದ ಹಬ್ಬದ ಮುದ್ದಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Actor Yash, Radhika Pandit, Radhika Kumaraswamy celebrate Varamahalakshmi festival

ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೂಜೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ತಮ್ಮ ಮನೆಯ ಲಿವಿಂಗ್ ರೂಮ್‌ನಲ್ಲಿ ಲಕ್ಷ್ಮಿ ದೇವಿಯನ್ನು ಕೂರಿಸಿದ್ದಾರೆ. ಇಡೀ ಆವರಣವನ್ನು ಹೂಗಳಿಂದ ಅಲಂಕರಿಸಿದ್ದಾರೆ. ಲಕ್ಷ್ಮೀ ದೇವಿಯ ವಿಗ್ರಹಕ್ಕೆ ಸೀರೆ ಉಡಿಸಿ, ಆಭರಣಗಳಿಂದ ಸಿಂಗರಿಸಲಾಗಿದೆ.

ರಾಧಿಕಾ ಪಂಡಿತ್, ಯಶ್, ಐರಾ ಮತ್ತು ಯಥರ್ವ್ ಸಾಂಪ್ರದಾಯಿಕ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದಾರೆ. ನಟ ಯಶ್ ಲೈಟ್ ಗೋಲ್ಡನ್ ಕಲರ್‌ ಪಂಚೆ, ಶಲ್ಯದಲ್ಲಿ ಇದ್ದರೇ, ನಟಿ ರಾಧಿಕಾ ಪಂಡಿತ್ ಪರ್ಪಲ್ ಬಾರ್ಡರ್ ಇರುವ ಹಳದಿ ಸೀರೆಗೆ ಚಂದನೆಯ ನೆಕ್‌ಲೆಸ್ ಮ್ಯಾಚ್ ಮಾಡಿದ್ದಾರೆ. ಮಗ ಯಥರ್ವ್ ಬಿಳಿ ಪಂಚೆ, ಮೆರೂನ್ ಶರ್ಟ್‌ನಲ್ಲಿ, ಮಗಳು ಮೆರೂನ್ ಡ್ರೆಸ್‌ನಲ್ಲಿ ಮುಂದಾಗಿ ಕಾಣುತ್ತಿದ್ದಾರೆ.

ಚಿತ್ರಗಳನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಮತ್ತು ಯಶ್, ನೀವೆಲ್ಲರೂ ವರಮಹಾಲಕ್ಷ್ಮಿಯ ಆಶೀರ್ವಾದ ಪಡೆದಿದ್ದೀರಿ ಎಂದು ಭಾವಿಸುತ್ತೇವೆ. ಈ ದೈವಿಕ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಆರೋಗ್ಯ ಮತ್ತು ಅಂತ್ಯವಿಲ್ಲದ ಸಮೃದ್ಧಿ ಸುರಿಸಲಿ. ಈ ಶುಭ ದಿನದ ಕೆಲವು ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

Actor Yash, Radhika Pandit, Radhika Kumaraswamy celebrate Varamahalakshmi festival

ಈ ರಾಕಿಂಗ್ ಜೋಡಿಯ ಫೋಟೋಗಳಿಗೆ ಕೇವಲ ಎರಡು ಗಂಟೆಯಲ್ಲಿ 9.5 ಲಕ್ಷ ಜನ ಲೈಕ್ ಮಾಡಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ನಟಿ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 3.1 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ನಟನೆಯಿಂದ ದೂರವಿರುವ ಅವರು ಆಗ್ಗಾಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕ ಹೊಂದಿದ್ದಾರೆ.

ವರಮಹಾಲಕ್ಷ್ಮಿ ವ್ರತ ಆಚರಿಸಿದ ರಾಧಿಕಾ ಕುಮಾರಸ್ವಾಮಿ

ಚಂದನವನದಲ್ಲಿ ತಮ್ಮ ನಟನೆಯಿಂದ ಛಾಪು ಮೂಡಿಸಿರುವ ನಟಿ ರಾಧಿಕಾ ಕುಮಾರಸ್ವಾಮಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ಮನೆಯಲ್ಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿ, ಮುತ್ತೈದೆಯರನ್ನು ಕರೆದು ಅರಿಶಿಣ ಕುಂಕುಮ ನೀಡಿ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಜೊತೆಗೆ "ಲಕ್ಷ್ಮಿ ದೇವಿಯು ನಿಮಗೆ ಸಂತೋಷದ ಸಮೃದ್ಧಿಯನ್ನು ಅನುಗ್ರಹಿಸಲಿ ಮತ್ತು ಅಷ್ಟಲಕ್ಷ್ಮಿಗಳು ನಿಮ್ಮ ಜೀವನವನ್ನು ಆರೋಗ್ಯ, ಸಂಪತ್ತು ಮತ್ತು ಸ್ವಾತಂತ್ರ್ಯದಿಂದ ತುಂಬಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು" ಎಂದು ನಾಡಿನ ಸಮಸ್ತ ಜನರಿಗೆ ಹಬ್ಬದ ಶುಭಾಶಯ ಕೋರಿದ್ದಾರೆ.

ನಟಿ ರಾಧಿಕಾ ಕುಮಾರಸ್ವಾಮಿ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಅವರು, ಸದ್ಯ ಪೂರ್ಣ ಪ್ರಮಾಣದಲ್ಲಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಶ್ರೇಯಸ್ ತಲ್ಪಾಡೆ ನಟಿಸಿರುವ ಮತ್ತು ಎಂ ಶಶಿಧರ್ ನಿರ್ದೇಶನದ ಅಜಾಗ್ರತಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Actor Yash, Radhika Pandit, Radhika Kumaraswamy celebrate Varamahalakshmi festival

ಅಜಾಗ್ರತ ಪ್ಯಾನ್-ಇಂಡಿಯನ್ ಪ್ರಾಜೆಕ್ಟ್ ಆಗಿದ್ದು, ಕನ್ನಡ, ತೆಲುಗು, ತಮಿಳು, ತೆಲುಗು, ಮಲಯಾಳಂ, ಹಿಂದಿ, ಕೊಂಕಣಿ ಮತ್ತು ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸಮುದ್ರಕಣಿ, ವಿನಯ್ ಪ್ರಸಾದ್, ಸ್ಪರ್ಶ ರೇಖಾ, ಜಯಪ್ರಕಾಶ್, ಸುಚೇಂದ್ರ ಪ್ರಸಾದ್, ಮತ್ತು ದೇವರಾಜ್ ಸಹ ನಟಿಸಿದ್ದಾರೆ.

More from Filmibeat

English summary
Yash, Radhika Pandit celebrate Varamahalakshmi festival with kids.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X