ಯಶ್ ಜೊತೆ ರೋಮ್ಯಾನ್ಸ್ ಮಾಡೋ ಅವಕಾಶ, ಯಾರಿಗುಂಟು ಯಾರಿಗಿಲ್ಲ
ಹಲವು ಹುಡುಗಿಯರಿಗೆ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಮಿಂಚಬೇಕು, ಅದೂ ದೊಡ್ಡ ಸ್ಟಾರ್ ನಟನ ಜೊತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಅಂತ ಭಾರಿ ಆಸೆ-ಆಕಾಂಕ್ಷೆ ಇರುತ್ತದೆ.
ಕೆಲವರಿಗೆ ಟ್ಯಾಲೆಂಟ್ ಇದ್ದರೆ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಗುತ್ತೆ, ಇನ್ನೂ ಕೆಲವರಿಗೆ ಅದೃಷ್ಟ ನೆಟ್ಟಗಿದ್ದರೆ ತೆರೆಯ ಮೇಲೆ ಮಿಂಚುತ್ತಾರೆ. ಅಂದಹಾಗೆ ಇದೀಗ ನಾವು ಈ ವಿಚಾರದ ಬಗ್ಗೆ ಪೀಠಿಕೆ ಹಾಕಲು ಮುಖ್ಯ ಕಾರಣ, ಸಿನಿಮಾದಲ್ಲಿ ನಟಿಸಲು ಆಸೆ ಪಡುತ್ತಿರುವ ಹುಡುಗಿಯರಿಗೆ ಒಂದೊಳ್ಳೆ ಅವಕಾಶ ಬಂದೊದಗಿದೆ.[ರಿಕ್ಕಿ ಅಲಿಯಾಸ್ ರಕ್ಷಿತ್ ಶೆಟ್ಟಿಗೆ ಹುಡುಗಿ ಬೇಕಂತೆ..!]

ಅದು ಕೂಡ ಸ್ಟಾರ್ ನಟನ ಜೊತೆ ಮಿಂಚುವ ಅವಕಾಶ ಇದೆ. ನಾವೀಗ ಮಾತನಾಡುತ್ತಿರೋದು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರದ ಬಗ್ಗೆ. ಹೌದು ಯಶ್ ಅವರ ಜೊತೆ ಡ್ಯುಯೆಟ್ ಹಾಡಲು ಸೂಕ್ತ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ಬಿಜಿಯಾಗಿದೆ.
ಬರೋಬ್ಬರಿ 40 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರೋ ಈ ಚಿತ್ರದ ನಾಯಕಿ ಆಗೋ ಅಪೂರ್ವ ಅವಕಾಶ-ಅದೃಷ್ಟ ಇದೀಗ ಕನ್ನಡಿಗ ಹೆಣ್ಣುಮಕ್ಕಳಿಗೆ ಸಿಕ್ಕಿದೆ. ಆಸೆ ಇಟ್ಟುಕೊಂಡಿರುವವರು ಆದಷ್ಟು ಬೇಗನೇ ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಿ.[ಫೋಟೋ ಆಲ್ಬಂ: ರಾಜ-ರಾಣಿಯ ನಿಶ್ಚಿತಾರ್ಥದ ಅದ್ಭುತ ಕ್ಷಣಗಳು]

ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ 'ಉಗ್ರಂ' ಚಿತ್ರದ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನ ನಾಯಕಿಯ ಹುಡುಕಾಟದಲ್ಲಿರುವ ಚಿತ್ರತಂಡ '18 ರಿಂದ 25' ವರ್ಷ ವಯಸ್ಸಿನ ಹುಡುಗಿಯರಿಗೆ ಆದ್ಯತೆ ನೀಡಿದ್ದಾರೆ.[ರಾಕಿಂಗ್ ಯಶ್ 'ಕೆ.ಜಿ.ಎಫ್'ಗೆ ಮುಹೂರ್ತ ಆಯ್ತು]

ಕಿರಗಂದೂರು ವಿಜಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಮುಹೂರ್ತ ನೆರವೇರಿಸಿಕೊಂಡು ಶೂಟಿಂಗ್ ಗೆ ಅಣಿಯಾಗುತ್ತಿದೆ. ಸದ್ಯಕ್ಕೆ ಯಶ್ ಅವರು 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದ ಕೊನೆಯ ಹಂತದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.[ರಾಕಿಂಗ್ ಸ್ಟಾರ್ ಯಶ್ 'ಕೆ.ಜಿ.ಎಫ್'ಗೆ ಗುರುವಾರ ಮುಹೂರ್ತ]


Click it and Unblock the Notifications











