ಯಶ್ ಹೊಸ ಸಿನಿಮಾ ಕೊನೆಗೂ ಪ್ರಕಟ

ನಟ ಯಶ್ ಸತತ ನಾಲ್ಕು ವರ್ಷದಿಂದ ಯಾವ ಹೊಸ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಯಶ್ ತಮ್ಮನ್ನು 'ಕೆಜಿಎಫ್' ಸಿನಿಮಾಕ್ಕೆ ಸಂಪೂರ್ಣ ತೊಡಗಿಸಿಕೊಂಡಿದ್ದರು.

'ಕೆಜಿಎಫ್' ನಂತರ ಏನು ಎಂಬ ಪ್ರಶ್ನೆ ಯಶ್ ಅಭಿಮಾನಿಗಳಿಗೆ ಮಾತ್ರವಲ್ಲ ಚಂದನವನದಲ್ಲೂ ಕುತೂಹಲ ಮೂಡಿಸಿತ್ತು. ಯಶ್ ಸಹ ತಮ್ಮ ಮುಂದಿನ ಸಿನಿಮಾ ಯಾವುದು? ಯಾರು ನಿರ್ದೇಶಕ ಎಂಬ ವಿಷಯವನ್ನು ಗೌಪ್ಯವಾಗಿಟ್ಟಿದ್ದರು. ಆದರೆ ಇದೀಗ ಎಲ್ಲವೂ ಅಧಿಕೃತವಾಗಿ ಬಹಿರಂಗವಾಗಿದೆ.

ಯಶ್ ಹುಟ್ಟುಹಬ್ಬ ದಿನವಾದ ಇಂದು ಯಶ್‌ ಹೊಸ ಸಿನಿಮಾದ ಬಗ್ಗೆ ಘೋಷಣೆ ಹೊರಬಿದ್ದಿದ್ದು, ನಿರ್ದೇಶಕ ನರ್ತನ್, ಯಶ್‌ರ 19ನೇ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಮಾತುಕತೆ, ಒಪ್ಪಂದ ಎಲ್ಲವೂ ಮುಗಿದಿದ್ದು, ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ.

Actor Yashs Next Movie Will Be With Director Narthan

ಈ ಬಗ್ಗೆ ಟ್ವೀಟ್‌ ಮಾಡಿರುವ ನಿರ್ದೇಶಕ ನರ್ತನ್, ''ಹುಟ್ಟುಹಬ್ಬದ ಶುಭಾಶಯ ಯಶ್ ಸರ್, ನಿಮ್ಮನ್ನು ಸೆಟ್‌ನಲ್ಲಿ ನೋಡಲು ಕಾತರನಾಗಿದ್ದೇನೆ. ಯಶ್‌ ನಟನೆಯ 19 ನೇ ಸಿನಿಮಾ 'ಯಶ್19' ಟೀಸರ್ ಮುಂದಿನ ವರ್ಷ ಜನವರಿ 08 (ಯಶ್ ಹುಟ್ಟುಹಬ್ಬ) ದಂದು ಬಿಡುಗಡೆ ಆಗಲಿದೆ'' ಎಂದಿದ್ದಾರೆ.

ಯಶ್, ನರ್ತನ್‌ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಗಾಳಿ ಸುದ್ದಿ ಬಹಳ ದಿನಗಳಿಂದಲೂ ಹರಿದಾಡುತ್ತಲೇ ಇತ್ತು. ಕೊನೆಗೂ ಅದು ಸತ್ಯವಾಗಿದೆ. ನರ್ತನ್ ಜೊತೆಗಿನ ಸಿನಿಮಾ ಆಕ್ಷನ್ ಸಿನಿಮಾ ಆಗಿರಲಿದೆ.

2016 ರಲ್ಲಿ ಬಿಡುಗಡೆ ಆದ 'ಸಂತು ಸ್ಟ್ರೈಟ್ ಫಾರ್ವಡ್' ಸಿನಿಮಾದ ಬಳಿಕ ಈ ವರೆಗೆ ಯಶ್ ತಮ್ಮನ್ನು ಸಂಪೂರ್ಣವಾಗಿ 'ಕೆಜಿಎಫ್‌'ನಲ್ಲಿ ತೊಡಗಿಸಿಕೊಂಡಿದ್ದರು. ಈ ಆರು ವರ್ಷಗಳಲ್ಲಿ ಅವರು ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. 'ಕಿರಾತಕ 2' ಸಿನಿಮಾ ಒಪ್ಪಿಕೊಂಡಿದ್ದರಾದರೂ ಆ ಸಿನಿಮಾ ಸೆಟ್ಟೇರಲಿಲ್ಲ. ಆ ಸಿನಿಮಾಕ್ಕೆ ಪಡೆದಿದ್ದ ಅಡ್ವಾನ್ಸ್ ಹಣವನ್ನು ಸಹ ವಾಪಸ್ ಮಾಡಿದರು.

ಯಶ್ ನಟನೆಯ 'ಕೆಜಿಎಫ್ ' ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣವಾಗಿದ್ದು, ಸಿನಿಮಾವು ಏಪ್ರಿಲ್ 14 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಕೇವಲ ಯಶ್‌ಗೆ ಮಾತ್ರವೇ ಅಲ್ಲ ಇಡೀಯ ದೇಶದ ಸಿನಿಪ್ರೇಮಿಗಳಿಗಿದೆ.

ಕೆಲವು ದಿನಗಳ ಹಿಂದಷ್ಟೆ ತಮ್ಮ ಗೆಳೆಯ ಜಿಮ್ ಕಿಟ್ಟಿಯ ರೆಸ್ಟೊರೆಂಟ್ ಉದ್ಘಾಟನೆಗೆ ಆಗಮಿಸಿದ್ದ ನಟ ಯಶ್, ಮುಂದಿನ ಸಿನಿಮಾ ಬಗ್ಗೆ ಮಾಧ್ಯವಮದವರು ಪ್ರಶ್ನೆ ಮಾಡಿದಾಗ, ''ಸಿನಿಮಾ ಯಾವಾಗ ಮಾಡುತ್ತೀರ? ಏಕೆ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗಳನ್ನು ನಮ್ಮ ಕುಟುಂಬದವರು ಸಹ ನನ್ನನ್ನು ಕೇಳುವುದಿಲ್ಲ. ಈ ವಿಷಯವದಲ್ಲಿ ನಾನು ನನ್ನ ಅಭಿಮಾನಿಗಳಗಷ್ಟೆ ಉತ್ತರದಾಯಿ. ನನ್ನ ಸಿನಿಮಾವನ್ನು ನನ್ನ ಸಿನಿಮಾವೇ ಬೀಟ್ ಮಾಡಬೇಕು ಆಗ ಮಾತ್ರವೇ ನಟನಾಗಿ ನನಗೂ ಸಮಾಧಾನ ಹಾಗಾಗಿ ಒಳ್ಳೆಯ ಕತೆಯಗಾಗಿ ಹುಡುಕಾಟ ನಡೆಸಿದ್ದೇನೆ'' ಎಂದಿದ್ದರು ಯಶ್.

More from Filmibeat

English summary
Actor Yash's next movie will be with director Narthan. Yash is waiting for KGF 2 release. Narthan today tweeted that he will be directing Yash's next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X