»   » ವಾವ್.! ಯಶ್ ಜೊತೆ ಜಗ್ಗೇಶ್ ಸೆಲ್ಫಿ ಹೇಗಿದೆ ನೋಡಿ

ವಾವ್.! ಯಶ್ ಜೊತೆ ಜಗ್ಗೇಶ್ ಸೆಲ್ಫಿ ಹೇಗಿದೆ ನೋಡಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಸಖತ್ ಸೌಂಡ್ ಮಾಡುತ್ತಿರುವ ನಟ ಯಾರಪ್ಪಾ ಅಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅವರು. ಕಳೆದ ವರ್ಷದ ಕ್ರಿಸ್ ಮಸ್ ಹಬ್ಬಕ್ಕೆ ಮತ್ತು ಈ ವರ್ಷದ ಕ್ರಿಸ್ ಮಸ್ ಗೆ ಯಶ್ ಅವರು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟು ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದರು.

ಅಂದಹಾಗೆ ಯಶ್ ಅವರು ಎಲ್ಲರನ್ನೂ ತಮ್ಮ ಅಣ್ತಮ್ಮನ ಥರಾನೇ ಕಾಣುತ್ತಾರೆ ಎಂಬುದಕ್ಕೆ ಒಂದೊಳ್ಳೆ ನಿದರ್ಶನ ಎಂದರೆ ತಮ್ಮ ಜಿಮ್ ಟ್ರೈನರ್ ಆದ ಪಾನಿಪೂರಿ ಕಿಟ್ಟಿ ಅವರನ್ನು ತಮ್ಮ ಅಮ್ಮನ್ನ ಇನ್ನೊಬ್ಬ ಮಗನಾಗಿ ಕಂಡಿದ್ದು. ಅದನ್ನು ಸ್ವತಃ ಯಶ್ ಅವರೇ ಫೇಸ್ ಬುಕ್ಕಿನಲ್ಲಿ ಹೇಳಿಕೊಂಡಿದ್ದರು.['ಅವರು' ನನ್ನ ತಾಯಿಯ ಇನ್ನೊಬ್ಬ ಮಗನಿದ್ದಂತೆ: ಯಶ್ ಯಾರಿಗ್ಹೇಳಿದ್ದು]

Actor Yash's Selfie Pic with Jaggesh goes Viral

ಇನ್ನು ನಿನ್ನೆ (ಫೆಬ್ರವರಿ 24) ಪಾನಿಪೂರಿ ಕಿಟ್ಟಿ ಅವರ 'ಮಸಲ್ ಪ್ಲಾನೆಟ್' ಎಂಬ ಹೊಸದಾದ ಜಿಮ್ ಸೆಂಟರ್ ಓಪನ್ ಆಗಿದ್ದು, ಅಲ್ಲಿಗೆ ಹಲವಾರು ಸ್ಯಾಂಡಲ್ ವುಡ್ ನ ಖ್ಯಾತ ಸ್ಟಾರ್ ನಟರುಗಳು ಆಗಮಿಸಿದ್ದರು.

ಇದಕ್ಕೆ ಸ್ಯಾಂಡಲ್ ವುಡ್ ನ ನವರಸ ನಾಯಕ ಜಗ್ಗೇಶ್ ಅವರು ಹೊರತಾಗಿಲ್ಲ ಅಂತಾನೇ ಹೇಳಬಹುದು. ಹೌದು ನಟ ಜಗ್ಗೇಶ್ ಮತ್ತು ಅವರ ಮಗ ನಟ ಯತೀಶ್ ರಾಜ್ ಅವರು ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.[ಫೇಸ್ ಬುಕ್ ನಲ್ಲಿ ಚರ್ಚೆ ಆಗುತ್ತಿರುವ 'ಪಾನಿ ಪೂರಿ' ಕಿಟ್ಟಿ ಯಾರು?]

Actor Yash's Selfie Pic with Jaggesh goes Viral

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಪಾನಿಪೂರಿ ಕಿಟ್ಟಿ ಅವರ 'ಮಸಲ್ ಪ್ಲಾನೆಟ್' ಉದ್ಗಾಟನೆ ಸಮಾರಂಭಕ್ಕೆ ಆಗಮಿಸಿದ್ದ ನಟ ಜಗ್ಗೇಶ್ ಮತ್ತವರ ಮಗ ಯತಿರಾಜ್ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು.

Actor Yash's Selfie Pic with Jaggesh goes Viral

ಈ ಸೆಲ್ಫಿ ಫೊಟೋವನ್ನು ನವರಸ ನಾಯಕ ಜಗ್ಗೇಶ್ ಅವರು ತಮ್ಮ ಟ್ವಿಟ್ಟರ್ ಪೇಜ್ ನಲ್ಲಿಯೂ ಹಾಕಿಕೊಂಡು ಸಂತಸಪಟ್ಟಿದ್ದಾರೆ.[ಯಶ್, ದುನಿಯಾ ವಿಜಯ್, ಪ್ರೇಮ್...ಎಲ್ಲರಿಗೂ 'ಇವರೇ' ಬೇಕು!]

ಸ್ಯಾಂಡಲ್ ವುಡ್ ನ ಹಲವಾರು ಸ್ಟಾರ್ ನಟರಾದ ಯಶ್, ಲವ್ಲಿ ಸ್ಟಾರ್ ಪ್ರೇಮ್, ದುನಿಯಾ ವಿಜಯ್, ಚೇತನ್ ಚಂದ್ರ ಮುಂತಾದವರಿಗೆ ಪಾನಿಪೂರಿ ಕಿಟ್ಟಿ ಅವರು ಜಿಮ್ ಟ್ರೈನರ್ ಆಗಿದ್ದರು.

Actor Yash's Selfie Pic with Jaggesh goes Viral

ಸದ್ಯಕ್ಕೆ ಯಶ್, ಜಗ್ಗೇಶ್ ಹಾಗೂ ಯತಿರಾಜ್ ಅವರ ಸೆಲ್ಫಿ ಸಮಾಜಿಕ ಜಾಲಾತಾಣಗಳಲ್ಲಿ ಭಯಂಕರ ವೈರಲ್ ಆಗಿದ್ದು, ಈ ಸೆಲ್ಫಿ ಅನ್ನೋ ಹುಚ್ಚಿಗೆ ನಮ್ಮ ಸ್ಯಾಂಡಲ್ ವುಡ್ ನ ತಾರೆಯರು ಹೊರತಾಗಿಲ್ಲ ಅನ್ನೋದಕ್ಕೆ ಇದೊಳ್ಳೆ ಉದಾಹರಣೆ, ನೀವೇನಂತೀರಾ?.

English summary
Yash is that, the actor has recently met Jaggesh. And a selfie of Yash, Jaggesh and Yathish (Jaggesh son) is making huge rounds on the social media. The actors met each other at the gym opening ceremony of renowned physical trainer Puni Puri Kitty.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada