ಮಂಡ್ಯದಲ್ಲಿ ಮತ್ತೆ ಜೋಡೆತ್ತುಗಳ ಸದ್ದು: ಗೋಶಾಲೆಯ ನೆರವಿಗೆ ನಿಂತ ಯಶ್-ದರ್ಶನ್
Recommended Video
ರಾಕಿಂಗ್ ಸ್ಟಾರ್ ಯಶ್ 'ಯಶೋಮಾರ್ಗ'ದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಯಶೋಮಾರ್ಗದ ವತಿಯಿಂದ ರಾಕಿ ಭಾಯ್ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಬರಪೀಡಿದ ಜಿಲ್ಲೆಗಳಲ್ಲಿ ನೀರು ಸರಬರಾಜು ಮಾಡುವ ಮೂಲಕ ಜನರು ಮತ್ತು ಪ್ರಾಣಿ ಪಕ್ಷಿಗಳ ಬಾಯಾರಿಕೆ ನೀಗಿಸಿದ್ದರು. ಅಲ್ಲದೆ ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೂ ಯಶೋಮಾರ್ಗ ಸಾಕಷ್ಟು ಸಹಾಯ ಮಾಡಿ ಮಾನವಿಯತೆ ಮೆರೆದಿದ್ದರು.
ಈಗ ಯಶ್ ಅವರ ಯಶೋಮಾರ್ಗ ಮತ್ತೊಂದು ಕೆಲಸಕ್ಕೆ ಕೈ ಹಾಕಿದೆ. ಗೋಶಾಲೆವೊಂದರ ನೆರವಿಗೆ ದಾವಿಸಿರುವ ಯಶೋಮಾರ್ಗ, ಗೋಶಾಲೆಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಮಾಡಿಕೊಡುತ್ತಿದೆ. ಇತ್ತೀಚಿಗೆ ದರ್ಶನ್ ಅದೆ ಗೋಶಾಲೆ ಸಾಲು ಸಾಲು ಟ್ರ್ಯಾಕ್ಟರ್ ಗಳ ಮೂಲಕ ಹುಲ್ಲನ್ನು ಸಾಗಿಸಿದ್ದರು. ಜೋಡೆತ್ತುಗಳ ಸಹಾಯದಗುಣಕ್ಕೆ ಅಭಿಮಾನಿಗಳು ತಲೆಬಾಗುತ್ತಿದ್ದಾರೆ.

ಗೋಶಾಲೆಗೆ ಮೇಲ್ಛಾವಣಿ ನಿರ್ಮಿಸುತ್ತಿರುವ ಯಶೋಮಾರ್ಗ
ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗದ ವತಿಯಿಂದ ಪಾಂಡವಪುರ ತಾಲ್ಲೂಕಿನ ದೊಡ್ಡ ಬ್ಯಾಡರಹಳ್ಳಿ ಗೋಶಾಲೆಯ ಮೇಲ್ಛಾವಣಿ ನಿರ್ಮಿಸುತ್ತಿದ್ದಾರೆ. ಕೊಟ್ಟಿಗೆ ಮತ್ತು ಗೋಶಾಲೆಗೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನು ಮಾಡಲಾಗುತ್ತಿದೆ. ನೀರನ್ನು ಶೇಕರಣೆ ಮಾಡಲು ನೀರು ಕುಡಿಯುವ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಲಕ್ಷಗಟ್ಟಲೆ ಖರ್ಚು ಮಾಡಲಾಗುತ್ತಿದೆ
ಬ್ಯಾಡರಹಳ್ಳಿ ಗೋಶಾಲೆ ನಿರ್ಮಾಣಕ್ಕೆ ಯಶೋಮಾರ್ಗ ಲಕ್ಷಗಟ್ಟಲೆ ಖರ್ಚು ಮಾಡುತ್ತಿದೆ. ಕಳೆದ ಎರಡು ತಿಂಗಳಿನಿಂದ ಈ ಗೋಶಾಲೆಯಲ್ಲಿ ಕೆಲಸಮಾಡಲಾಗುತ್ತಿದ್ದು,ಈಗಾಗಲೆ ಸುಮಾರು 12 ರಿಂದ 13 ಲಕ್ಷಕ್ಕು ಹೆಚ್ಚು ಖರ್ಚು ಮಾಡಲಾಗಿದೆಯಂತೆ. ಇನ್ನು ಕೆಲಸ ಭಾಕಿ ಇದ್ದು ಮತ್ತಷ್ಟು ಹಣ ಬೇಕಾಗುವ ಸಾಧ್ಯತೆ ಇದೆ.

ಟ್ರ್ಯಾಕ್ಟರ್ ಗಳಲ್ಲಿ ಮೇವು ಸಾಗಿಸಿದ ದರ್ಶನ್
ಯಶೋಮಾರ್ಗ ಕಳೆದ ಎರಡು ತಿಂಗಳಿಂದ ಕೆಲಸ ಮಾಡುತ್ತಿರುವ ಗೋಶಾಲೆಗೆ ದರ್ಶನ್ ಇತ್ತೀಚಿಗೆ ಟ್ರ್ಯಾಕ್ಟರ್ ಗಳ ಮೂಲಕ ಮೇವನ್ನು ಸಾಗಿಸಿದ್ದರು. ಸಾಲು ಸಾಲು ಟ್ರ್ಯಾಕ್ಟರ್ ಗಳ ಮೂಲಕ ಹುಲ್ಲನ್ನು ಸಾಗಿಸಿದ ವಿಡಿಯೋ ವೈರಲ್ ಆಗಿದೆ. ಸ್ವತಃ ದರ್ಶನ್ ಅವರಿಗೆ ಗೋಶಾಲೆಗೆ ಭೇಟಿ ನೀಡಿ ಸಂಬಂಧ ಪಟ್ಟವರ ಜೊತೆ ಮಾತುಕತೆ ನಡೆಸಿದ್ದಾರೆ.

ಮತ್ತೆ ಮಂಡ್ಯದಲ್ಲಿ ಜೋಡೆತ್ತುಗಳ ಸದ್ದು
ಲೋಕಸಭೆ ಚುನಾವಣೆಯಲ್ಲಿ, ಸಂಸದೆ ಸುಮಲತಾ ಪರ ಪ್ರಚಾರದ ಅಕಾಡಕ್ಕೆ ಇಳಿದು ಬಾರಿ ಸದ್ದು ಮಾಡಿದ್ದ ಜೋಡೆತ್ತುಗಳು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇಬ್ಬರು ಸೇರಿ ಮಂಡ್ಯ ಗೋಶಾಲೆಯ ಉದ್ದಾರಕ್ಕೆ ನಿಲ್ಲುವ ಮೂಲಕ ಮತ್ತೊಮ್ಮೆ ಮಂಡ್ಯ ಜನರ ಹೃದಯ ಗೆದ್ದಿದ್ದಾರೆ.


Click it and Unblock the Notifications











