'KGF-2': 'ರಮಿಕಾ ಸೇನ್' ಜೊತೆ ಮೊದಲ ಫೋಟೋ ಹಂಚಿಕೊಂಡ ರಾಕಿಭಾಯ್ ಹೇಳಿದ್ದೇನು?

Recommended Video

ರವೀನಾ ಟಂಡನ್ ಕಾಲೆಳೆದ ನಟ ಯಶ್ | Raveena Tandon | Yash | KGF2 | Yash & Raveena tandon

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ಕೆಜಿಎಫ್-2 ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ರಾಕಿ ಭಾಯ್ ಚಿತ್ರದಿಂದ ಇಂಟ್ರಸ್ಟಿಂಗ್ ಫೋಟೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಹೌದು, ಇತ್ತೀಚಿಗಷ್ಟೆ ಬಾಲಿವುಡ್ ನಟಿ ರವೀನಾ ಟಂಡನ್ ಕೆಜಿಎಫ್-2 ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ರಮಿಕಾ ಸೇನ್ ಪಾತ್ರಕ್ಕಾಗಿ ನಟಿ ರವೀನ ಟಂಡನ್ ಕೆಜಿಎಫ್-2 ಅಡ್ಡಾಗೆ ಬಂದಿರುವ ಬಗ್ಗೆ ಫೋಟೋ ಸಮೇತಾ ಬಹಿರಂಗ ಪಡಿಸಿದ್ದರು. ಈಗ ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್ ಸುಂದರಿ ಜೊತೆಗಿನ ಮೊದಲ ಫೋಟೋ ಹಂಚಿಕೊಂಡಿದ್ದಾರೆ.

ಚಿತ್ರದಿಂದ ಯಶ್ ಹಂಚಿಕೊಂಡ ಮೊದಲ ಫೋಟೋ

ರಾಕಿಂಗ್ ಸ್ಟಾರ್ ಯಶ್ ಮೊದಲ ಬಾರಿಗೆ 'ಕೆಜಿಎಫ್-2' ಅಡ್ಡಾದಿಂದ ಮೊದಲ ಫೋಟೋ ಹಂಚಿಕೊಂಡಿದ್ದಾರೆ. ನಟಿ ರವೀನಾ ಟಂಡನ್ ಜೊತೆ ಇರುವ ಫೋಟೋ ಶೇರ್ ಮಾಡಿ ಯಶ್ ಹೋಮ್ ಟೌನ್ ಗೆ ಅದ್ದೂರಿ ಸ್ವಾಗತ ಕೋರಿದ್ದಾರೆ. ಇಬ್ಬರು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಕ ಧರಿಸಿ ಗಂಭೀರ ನೋಟ ಬೀರುತ್ತಿರುವ ಫೋಟೋ ಇದಾಗಿದೆ.

 ಯಶ್ ಹೇಳಿದ್ದೇನು?

ಯಶ್ ಹೇಳಿದ್ದೇನು?

ಯಶ್ ಫೋಟೋ ಜೊತೆಗೆ "ರಮಿಕಾ ಸೇನ್ ಅನ್ನು ರಾಕಿಯ ಅಡ್ಡಾಗಿ ಸ್ವಾಗತಿಸದಿರಬಹುದು. ಆದರೆ ಅದಕ್ಕಿಂತ ಹೆಚ್ಚಾಗಿ ಖಂಡಿತವಾಗಿಯೂ ಯಶ್ ಹೋಮ್ ಟೌನ್ ಗೆ ಸ್ವಾಗತಿಸುತ್ತೇನೆ. ಚಿತ್ರದಲ್ಲಿ ಭಾಗಿಯಾಗಿರುವುದು ತುಂಬ ಸಂತೋಷವಾಗಿದೆ. ಬ್ಲಾಸ್ಟ್ ಮಾಡೋಣ" ಎಂದು ಬರೆದುಕೊಂಡಿದ್ದಾರೆ.

ರವೀನಾ ಟಂಡನ್ ಹೇಳಿದ್ದೇನು?

ಚಿತ್ರೀಕರಣದಲ್ಲಿ ಭಾಗಿಯಾದ ಸಂತಸವನ್ನು ರವೀನಾ ಟಂಡನ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗಿನ ಫೋಟೋ ಶೇರ್ ಮಾಡಿ ಹಂಚಿಕೊಂಡಿದ್ದರು. ಈಗ ರಾಕಿ ಭಾಯ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. "ಡೆತ್ ವಾರೆಂಟ್ ಗೆ ರಾಕಿ ಭಾಯ್ ಸಹಿ ಮಾಡಲಾಗಿದೆ"ಎಂದು ಬರೆದುಕೊಂಡು ಫೋಟೋ ಪೋಸ್ಟ್ ಮಾಡಿದ್ದಾರೆ.

 ರವೀನಾ ಪೋಸ್ಟ್ ಗೆ ಯಶ್ ಕಮೆಂಟ್

ರವೀನಾ ಪೋಸ್ಟ್ ಗೆ ಯಶ್ ಕಮೆಂಟ್

ರವೀನಾ ಟಂಡನ್ ಯಶ್ ಜೊತೆಗಿನ ಫೋಟೋ ಹಂಚಿಕೊಳ್ಳುತ್ತಿದ್ದಂತೆ ನಟ ಯಶ್ ಈ ಪೋಸ್ಟ್ ಗೆ ಪ್ರತಿತ್ರಿಯೆ ನೀಡಿದ್ದಾರೆ "ಯೆ ವಾರಂಟ್ ಚೀಜ್ ಹೈ ಬಡಿ ಮಸ್ತ್ ಮಸ್ತ್. ಇನ್ನು ರಾಕಿಯ ಅನುಮೋದನೆ ಬೇಕು. ಈಗ ನೋಡೋಣ" ಎಂದು ಕಮೆಂಟ್ ಮಾಡಿದ್ದಾರೆ.

 ಎರಡನೆ ಬಾರಿ ಕನ್ನಡದಲ್ಲಿ ರವೀನಾ

ಎರಡನೆ ಬಾರಿ ಕನ್ನಡದಲ್ಲಿ ರವೀನಾ

ಕೆಜಿಎಫ್-2 ಮೂಲಕ ರವೀನಾ ಎರಡನೇ ಬಾರಿಗೆ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೊದಲು ಉಪೇಂದ್ರ ಜೊತೆ ಕಾಣಿಸಿಕೊಂಡಿದ್ದ ರವೀನಾ ದಶಕಗಳ ಬಳಿಕ ಕನ್ನಡಕ್ಕೆ ಮರಳಿದ್ದಾರೆ. ಚಿತ್ರದಲ್ಲಿ ರವೀನಾ, ಎಪ್ಪತ್ತರ ದಶಕದ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada Actor Yash Shared a photo with Actress Raveena Tandon. Yash Shared first photo from KGF-2 film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X