ಮುದ್ದು ಮಗಳ ಮೊದಲ ಫೋಟೋ ಹಂಚಿಕೊಂಡ ರಾಕಿಂಗ್ ಸ್ಟಾರ್
Recommended Video
ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬಕ್ಕೆ ಮಹಾ ರಾಣಿಯ ಆಗಮನ ಆಗಿತ್ತು. ಕೆಲ ತಿಂಗಳುಗಳ ಹಿಂದೆ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿನ ಮೊದಲ ಫೋಟೋ ಈಗ ಅಭಿಮಾನಿಗಳ ಮುಂದೆ ಬಂದಿದೆ.
ಅಕ್ಷಯ ತೃತೀಯ ವಿಶೇಷವಾಗಿ ಮಗಳ ಫೋಟೋ ಹಂಚಿಕೊಳ್ಳುವುದಾಗಿ ರಾಧಿಕಾ ಪಂಡಿತ್ ಕೆಲ ದಿನಗಳ ಹಿಂದೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಿಳಿಸಿದ್ದರು. ಅದೇ ರೀತಿ ಈಗ ಯಶ್ ತಮ್ಮ ಪ್ರೀತಿಯ ಕಂದನ ಚಿತ್ರವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
''ನೀವು ಹೇಳಿದ್ದೇ ಸರಿ..ಇವಳು ಬರೋವರ್ಗು ಮಾತ್ರ ನನ್ನ ಹವಾ.. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR ಅಂತಾನೇ ಕರೆಯೋಣ. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ'' ಎಂದು ಯಶ್ ನಾಲ್ಕು ಸಾಲು ಬರೆದಿದ್ದಾರೆ.

ಅಕ್ಷಯ ತೃತೀಯ ದಿನ ಚಿನ್ನವನ್ನು ಕೊಂಡರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಅದೇ ರೀತಿ ಈ ದಿನ ತಮ್ಮ ಮನೆಯ ಚಿನ್ನವನ್ನು ಅಭಿಮಾನಿಗಳಿಗೆ ರಾಕಿಂಗ್ ದಂಪತಿ ತೋರಿಸುತ್ತಿದ್ದಾರೆ.
ಅಂದಹಾಗೆ, ಡಿಸೆಂಬರ್ 2 ರಂದು ಬೆಳಗ್ಗೆ 6.20ರ ಸುಮಾರಿಗೆ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಮಗುವಿನ ಜನನ ಆಗಿತ್ತು.


Click it and Unblock the Notifications











