For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಯಶ್ 'ಕೆ.ಜಿ.ಎಫ್'ಗೆ ಮುಹೂರ್ತ ಆಯ್ತು

  By Suneetha
  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತೊಂದು ಬಹುನಿರೀಕ್ಷೆಯುಳ್ಳ ಸಿನಿಮಾ 'ಕೆ.ಜಿ.ಎಫ್' ಗೆ ಇಂದು (ಗುರುವಾರ, ಜೂನ್ 9) ಮುಹೂರ್ತ ನೆರವೇರಿದೆ.

  ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಪಂಚಮುಖಿ ಗಣೇಶ ದೇವಾಲಯದಲ್ಲಿ ಸರಳ ಪೂಜೆ ನೆರವೇರಿಸುವ ಮೂಲಕ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ.[ರಾಕಿಂಗ್ ಸ್ಟಾರ್ ಯಶ್ 'ಕೆ.ಜಿ.ಎಫ್'ಗೆ ಗುರುವಾರ ಮುಹೂರ್ತ]

  ಬಹು ಕೋಟಿ ವೆಚ್ಚದ ಕೆ.ಜಿ.ಎಫ್ ಚಿತ್ರ ಇಂದು ಸರಳವಾಗಿ ಮುಹೂರ್ತ ನೆರವೇರಿಸಿಕೊಂಡು ಸೆಟ್ಟೇರಿದೆ. 'ಉಗ್ರಂ' ಚಿತ್ರದ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ್-ಕಟ್ ಹೇಳುತ್ತಿರುವ 'ಕೆ.ಜಿ.ಎಫ್' ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ.

  ಈ ತಿಂಗಳ ಅಂತ್ಯದಲ್ಲಿ ಚಿತ್ರದ ಚಿತ್ರೀಕರಣ ಆರಂಭ ಮಾಡಲಿರುವ ಚಿತ್ರತಂಡ ತಮ್ಮ ಚಿತ್ರದಲ್ಲಿ ಹಲವಾರು ಹೊಸ ಪ್ರತಿಭೆಗಳಲ್ಲಿ ಪರಿಚಯ ಮಾಡಿಕೊಡಲಿದ್ದಾರೆ.['ರವಿ ಸರ್ ಗೆ ಇಷ್ಟವಾಗಿದ್ದನ್ನು ವಿಭಿನ್ನವಾಗಿ ಹೇಳಿದ್ದಾರೆ' ಯಶ್]

  ಕಿರಗಂದೂರು ವಿಜಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ಅವರ ಜೊತೆ ಯಾರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಸದ್ಯಕ್ಕೆ ಎಲ್ಲರಲ್ಲಿರುವ ಕುತೂಹಲ. (ಮುಹೂರ್ತದ ಚಿತ್ರಗಳಲ್ಲಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ..)

  ರಾಕಿಂಗ್ ಯಶ್ 'ಕೆ.ಜಿ.ಎಫ್'ಗೆ ಮುಹೂರ್ತ ಆಯ್ತು

  English summary
  Rocking star Yash starrer Kannada Movie 'KGF' muhoortha was held in Panchamukhi Ganesha Temple Mahalakshmi Layout Bengaluru on June 9th. The movie is directed by 'Ugramm' fame Prashanth Neel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X