For Quick Alerts
  ALLOW NOTIFICATIONS  
  For Daily Alerts

  2020ರ ಬಹು ನಿರೀಕ್ಷೆಯ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ 'KGF-2'

  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಚಿತ್ರದ ಕ್ರೇಜ್ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಾದ್ಯಂತ ಇದೆ. ಕೆಜಿಎಫ್ ಮೊದಲ ಭಾಗ ನೋಡಿದ ಅಭಿಮಾನಿಗಳು ಪಾರ್ಟ್-2ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕನ್ನಡ ಸಿನಿಮಾ ಕೆಜಿಎಫ್-2 ಕ್ರೇಜ್ ಗೆ ಇಡೀ ಭಾರತೀಯ ಚಿತ್ರರಂಗವೆ ಬೆರಗಾಗಿದೆ.

  ಇಬ್ಬರ ಮನಸ್ಸಿಗೆ ಇಷ್ಟೊಂದು ನೋವು ಕೊಟ್ಟಿದ್ದು ಯಾರು..? | Srii Murali | Mahesh Kumar Director

  ಮೊದಲ ಭಾಗಕ್ಕಿಂತ ಕೆಜಿಎಫ್ ಎರಡನೆ ಭಾಗ ಮತ್ತಷ್ಟು ರೋಚಕವಾಗಿರಲಿದೆ. ರಾಕಿ ಭಾಯ್ ಜೊತೆ ದೊಡ್ಡ ದೊಡ್ಡ ಕಲಾವಿದರು ಸಾಥ್ ನೀಡಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಮತ್ತೊಂದು ಲೆವೆಲ್ ಗೆ ಹೋಗಿದೆ. ಈಗಾಗಲೆ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಇದರ ಜೊತೆಗೀಗ ಕೆಜಿಎಫ್-2 ಚಿತ್ರದ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಹೊರಬಿದ್ದಿದೆ. ಭಾರತ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್-2 ಮೊದಲ ಸ್ಥಾನದಲ್ಲಿದೆ.ಮುಂದೆ ಓದಿ..

  'KGF-2' ಚಿತ್ರದ 10 ನಿಮಿಷದ ದೃಶ್ಯಕ್ಕೆ ರಾಕಿ ಭಾಯ್ 6 ತಿಂಗಳ ತಯಾರಿ'KGF-2' ಚಿತ್ರದ 10 ನಿಮಿಷದ ದೃಶ್ಯಕ್ಕೆ ರಾಕಿ ಭಾಯ್ 6 ತಿಂಗಳ ತಯಾರಿ

  ಒರ್ಮಾಕ್ಸ್ ಮಿಡಿಯಾ ಪಟ್ಟಿಯಲ್ಲಿ KGF-2

  ಒರ್ಮಾಕ್ಸ್ ಮಿಡಿಯಾ ಪಟ್ಟಿಯಲ್ಲಿ KGF-2

  ಇತ್ತೀಚಿಗೆ ಒರ್ಮಾಕ್ಸ್ ಮಿಡಿಯಾ ರಿಲೀಸ್ ಮಾಡಿರುವ 2020ರ ಬಹುನಿರೀಕ್ಷೆಯ ಹಿಂದಿ ಸಿನಿಮಾಗಳ ಲಿಸ್ಟ್ ನಲ್ಲಿ ಕನ್ನಡದ ಸಿನಿಮಾ ಮೊದಲ ಸ್ಥಾನದಲ್ಲಿದೆ. ಕನ್ನಡದ ಸಿನಿಮಾವೊಂದು ಬಾಲಿವುಡ್ ನ ಸ್ಟಾರ್ ನಟರ ಸಿನಿಮಾಗಳನ್ನು ಹಿಂದಿಕ್ಕಿ ವರ್ಷದ ನಿರೀಕ್ಷೆಯ ಸಿನಿಮಾವಾಗಿರುವುದು ಇಡೀ ಭಾರತೀಯ ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿದೆ.

  ಹಿಂದಿ ಡಬ್ಬಿಂಗ್ ಸಿನಿಮಾ

  ಹಿಂದಿ ಡಬ್ಬಿಂಗ್ ಸಿನಿಮಾ

  ಕೆಜಿಎಫ್-2 ಕನ್ನಡದ ಸಿನಿಮಾ. ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಹಿಂದಿಗೆ ಡಬ್ ಆಗಿ ರಿಲೀಸ್ ಆಗುವ ಕನ್ನಡ ಸಿನಿಮಾಗೆ ಈ ಪರಿ ಬೇಡಿಕೆ ಇರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಕೆಜಿಎಫ್-2 ಸಿನಿಮಾ ದಕ್ಷಿಣ ಭಾರತೀಯ ಭಾಷೆಗಳ ಜೊತೆಗೆ ಉತ್ತರ ಭಾರತದ ಸಾಕಷ್ಟು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ.

  'KGF-2' ತಮಿಳು ವರ್ಷನ್ ಗೆ ಡಬ್ ಮಾಡಲಿದ್ದಾರೆ ರಾಕಿ ಭಾಯ್'KGF-2' ತಮಿಳು ವರ್ಷನ್ ಗೆ ಡಬ್ ಮಾಡಲಿದ್ದಾರೆ ರಾಕಿ ಭಾಯ್

  ಒರ್ಮಾಕ್ಸ್ ಮಿಡಿಯಾ ಪಟ್ಟಿಯಲ್ಲಿರುವ ಸಿನಿಮಾಗಳು

  ಒರ್ಮಾಕ್ಸ್ ಮಿಡಿಯಾ ಪಟ್ಟಿಯಲ್ಲಿರುವ ಸಿನಿಮಾಗಳು

  ಒರ್ಮಾಕ್ಸ್ ಮಿಡಿಯಾ ರಿಲೀಸ್ ಮಾಡಿರುವ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್-2 ಮೊದಲ ಸ್ಥಾನದಲ್ಲಿ ಇದ್ದರೆ, ಎರಡನೆ ಸ್ಥಾನದಲ್ಲಿ ಗೋಲ್ ಮಾಲ್-5, 3ನೇ ಸ್ಥಾನದಲ್ಲಿ ಬ್ರಹ್ಮಾಸ್ತ್ರ, 4ನೇ ಸ್ಥಾನದಲ್ಲಿ ಸೂರ್ಯವಂಶಿ ಮತ್ತು 5ನೇ ಸ್ಥಾನದಲ್ಲಿ 83 ಸಿನಿಮಾವಿದೆ.

  'KGF-2' ಕ್ಲೈಮ್ಯಾಕ್ಸ್ ನಲ್ಲಿ ಯಶ್-ಸಂಜಯ್ ದತ್ ಬೇರ್ ಬಾಡಿ ಫೈಟ್'KGF-2' ಕ್ಲೈಮ್ಯಾಕ್ಸ್ ನಲ್ಲಿ ಯಶ್-ಸಂಜಯ್ ದತ್ ಬೇರ್ ಬಾಡಿ ಫೈಟ್

  ಯಾವಾಗ ಬಿಡುಗಡೆ?

  ಯಾವಾಗ ಬಿಡುಗಡೆ?

  ಕೆಜಿಎಫ್-2 ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಇಡೀ ದೇಶವೆ ಕಾತರದಿಂದ ಕಾಯುತ್ತಿದೆ. ಈ ಮೊದಲು ಚಿತ್ರವನ್ನು ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ತರುವ ಪ್ಲಾನ್ ಮಾಡಿತ್ತು ಚಿತ್ರತಂಡ. ಆದರೆ ಚಿತ್ರೀಕರಣ ಇನ್ನು ತಡವಾದ ಕಾರಣ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಚಿತ್ರ ಅಕ್ಟೋಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Kannada Actor Yash starrer KGF-2 film is most Awaiting Hindi film 2020. This movie is directed by Prashanth Neel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X