For Quick Alerts
  ALLOW NOTIFICATIONS  
  For Daily Alerts

  ಕೊನೆಯ ಹಂತಕ್ಕೆ ತಲುಪಿದ 'ಕೆಜಿಎಫ್-2' ಚಿತ್ರೀಕರಣ: ಹೈದರಾಬಾದ್ ಗೆ ಹೊರಡಲಿದೆ ಚಿತ್ರತಂಡ

  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ 'ಕೆಜಿಎಫ್-2' ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಕೆಜಿಎಫ್-2 ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಇದೆ.

  ಕೆಜಿಎಫ್ ಟೀಸರ್ ಬಂದಿಲ್ಲ, ಆದರೆ ಭರ್ಜರಿ ಡೈಲಾಗ್ ಇಲ್ಲಿದೆ ನೋಡಿಕೆಜಿಎಫ್ ಟೀಸರ್ ಬಂದಿಲ್ಲ, ಆದರೆ ಭರ್ಜರಿ ಡೈಲಾಗ್ ಇಲ್ಲಿದೆ ನೋಡಿ

  'ಕೆಜಿಎಫ್-2' ಚಿತ್ರದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ ಅಂದ್ಮೇಲೆ ಬೇಗ ಮುಗಿಯಲಿದೆ. ಬೇಗ ಶೂಟಿಂಗ್ ಮುಗಿದರೆ ಸಿನಿಮಾ ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ತರುವ ಯೋಜನೆ ಚಿತ್ರತಂಡಕ್ಕೆ ಇದೆ. ಹಾಗಾಗಿ ಅಭಿಮಾನಿಗಳು ಭಾರಿ ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ಬೇಗವೆ ತೆರೆಗೆ ಬರುವ ಸಾಧ್ಯತೆಯು ಇದೆ. 2020ನೇ ಬಹುನಿರೀಕ್ಷೆಯ ಸಿನಿಮಾವಾಗಿರುವ ಕೆಜಿಎಫ್-2 ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇಡೀ ದೇಶವೆ ಕಾತರದಿಂದ ಕಾಯುತ್ತಿದ್ದಾರೆ..

  ಮೈಸೂರಿನಲ್ಲಿ ಚಿತ್ರೀಕರಣ

  ಮೈಸೂರಿನಲ್ಲಿ ಚಿತ್ರೀಕರಣ

  ಅಂದ್ಹಾಗೆ ಕೆಜಿಎಫ್-2 ಚಿತ್ರೀಕರಣ ಸದ್ಯ ಮೈಸೂರಿನಲ್ಲಿ ನಡೆಯುತ್ತಿದೆ. ಮೈಸೂರಿನ ಲಲಿತ ಮಹಲ್ ನಲ್ಲಿ ಶೂಟಿಂಗ್ ನಡೆಯುತ್ತಿದೆ. ರಾಕಿ ಭಾಯ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ನಡುವಿನ ಪ್ರಮುಖ ದೃಶ್ಯವನ್ನು ಸೆರೆಹಿಡಿಯಲಾಗುತ್ತಿದೆ. ಮೈಸೂರಿನಲ್ಲಿ ಚಿತ್ರೀಕರಣ ಮುಗಿಯುತ್ತಿದ್ದಂತೆ ಚಿತ್ರತಂಡ ಹೈದರಾಬಾದ್ ಕಡೆ ಹೊರಡಲಿದೆ.

  ಒಂದು ವರ್ಷದ ರಾಕಿ ಭಾಯ್ ಜೀವನದಲ್ಲಿ ನಡೆದ 10 ಪ್ರಮುಖ ಘಟನೆಗಳುಒಂದು ವರ್ಷದ ರಾಕಿ ಭಾಯ್ ಜೀವನದಲ್ಲಿ ನಡೆದ 10 ಪ್ರಮುಖ ಘಟನೆಗಳು

  ಹೈದರಾಬಾದ್ ನಲ್ಲಿ ಪ್ರಮುಖ ದೃಶ್ಯದ ಚಿತ್ರೀಕರಣ

  ಹೈದರಾಬಾದ್ ನಲ್ಲಿ ಪ್ರಮುಖ ದೃಶ್ಯದ ಚಿತ್ರೀಕರಣ

  ಈಗಾಗಲೆ 80 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣಕ್ಕೆಂದು ಹೈದರಾಬಾದ್ ಗೆ ತೆರಳಲಿದೆ. ಚಿತ್ರದ ಬಹುಮುಖ್ಯ ದೃಶ್ಯದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಲಿದೆ. ನಂತರ ಬೆಂಗಳೂರು ಮತ್ತು ಕೋಲಾರದಲ್ಲಿ ಚಿತ್ರೀಕರಣ ಮಾಡುವ ಮೂಲಕ ಕೆಜಿಎಫ್-2 ಚಿತ್ರೀಕರಣಕ್ಕೆ ತೆರೆಬೀಳಲಿದೆ.

  ರಮೇಕಾ ಸೇನ್ ಪಾತ್ರದಲ್ಲಿ ರವೀನಾ ಎಂಟ್ರಿ

  ರಮೇಕಾ ಸೇನ್ ಪಾತ್ರದಲ್ಲಿ ರವೀನಾ ಎಂಟ್ರಿ

  ಕೆಜಿಎಪ್-2 ಚಿತ್ರೀಕರಣದಲ್ಲಿ ಈಗಾಗಲೆ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಭಾಗಿಯಾಗಿದ್ದಾರೆ. ಇನ್ನು ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಭಾಗಿಯಾಗಲಿದ್ದಾರೆ. ಸಂಜಯ್ ದತ್ ಅಧೀರ ಪಾತ್ರದಲ್ಲಿ ಮಿಂಚಲಿದ್ದಾರೆ. ನಟಿ ರವೀನಾ ಟಂಡನ್ ರಮೇಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಇದಕ್ಕಿದ್ದಂತೆ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಕ್ಷಮೆ ಕೇಳಿದ್ದು ಯಾಕೆ.?ಇದಕ್ಕಿದ್ದಂತೆ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಕ್ಷಮೆ ಕೇಳಿದ್ದು ಯಾಕೆ.?

  ಚಿತ್ರೀಕರಣ ಮುಗಿದ ಮೇಲೆ ರಿಲೀಸ್ ಡೇಟ್ ಫಿಕ್ಸ್ ಸಾಧ್ಯತೆ

  ಚಿತ್ರೀಕರಣ ಮುಗಿದ ಮೇಲೆ ರಿಲೀಸ್ ಡೇಟ್ ಫಿಕ್ಸ್ ಸಾಧ್ಯತೆ

  ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಚಿತ್ರದಲ್ಲಿ ಮಾಳವಿಕಾ ಅವಿನಾಶ್, ಅನಂತ್ ನಾಗ್, ವಸಿಷ್ಟ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಸಿನಿಮಾ ಚಿತ್ರೀಕರಣ ಬೇಗ ಮುಗಿದರೆ ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ತರುವ ಪ್ಲಾನ್ ಇತ್ತು. ಆದರೀಗ ಯಾವಾಗ ಚಿತ್ರೀಕರಣ ಮುಗಿಯುತ್ತೆ ಎನ್ನುವದನ್ನು ನೋಡಿ ರಿಲೀಸ್ ಡೇಟ್ ಪ್ಲಾನ್ ಮಾಡಲಿದೆ ಚಿತ್ರತಂಡ.

  English summary
  Kannada Actor Yash starrer most expected KGF-2 Shooting enters to last stage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X