ಮುಂಬೈನಲ್ಲಿ ರಾಖಿ ಭಾಯ್ ಯಶ್: ಕಾರಣವೇನು?

ನಟ ಯಶ್ ಹಠಾತ್ತನೆ ಮುಂಬೈಗೆ ಹೋಗಿದ್ದಾರೆ. ಮಾಸ್ಕ್ ಧರಿಸಿಕೊಂಡು, ಉದ್ದನೆಯ ಗಡ್ಡ ಬಿಟ್ಟು ಬಲು ಸ್ಟೈಲಿಷ್ ಆಗಿ ಯಶ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.

Recommended Video

ಇದ್ದಕ್ಕಿದ್ದಂತೆ ಮುಂಬೈಗೆ ಹಾರಿದ ಯಶ್, ಮುಂದಿನ ಸಿನಿಮಾ ಯಾವುದು..?

ಅಷ್ಟೆ ಅಲ್ಲದೆ ಮುಂಬೈನಲ್ಲಿ ಅಭಿಮಾನಿಗಳು ಯಶ್‌ಗೆ ಮುತ್ತಿಗೆ ಹಾಕಿದ್ದರು, ಅಭಿಮಾನಿಗಳು ಯಶ್ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಪಟ್ಟ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡುತ್ತಿದೆ. ಆದರೆ ಯಶ್ ಮುಂಬೈಗೆ ಹೋಗಿದ್ದಾದರೂ ಯಾಕೆ?

ಯಶ್‌ ಇದೀಗ ಮುಂಬೈಗೆ ಹೋಗಿರುವುದು ಗಾಂಧಿ ನಗರದಲ್ಲಿ ಕುತೂಹಲ ಮೂಡಿಸಿದೆ. ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ನಿರ್ಮಾಪಕರೊಂದಿಗೆ, ನಿರ್ದೇಶಕರೊಂದಿಗೆ ಚರ್ಚಿಸಲು ಮುಂಬೈಗೆ ಹೋಗಿದ್ದಾರೆ ಎನ್ನುವ ಗಾಳಿ ಸುದ್ದಿಗಳು ಹರಿದಾಡುತ್ತಿವೆ.

Actor Yash Visited Mumbai For An Advertisement Shooting

ಯಶ್‌ಗೆ ಮುಂಬೈಗೆ ಹೋಗಿರುವುದು ಚಿತ್ರೀಕರಣಕ್ಕೆ. ಆದರೆ ಸಿನಿಮಾದ ಚಿತ್ರೀಕರಣಕ್ಕಾಗಿ ಅಲ್ಲ ಬದಲಿಗೆ ಜಾಹಿರಾತು ಚಿತ್ರೀಕರಣಕ್ಕೆ. ಮುಂಬೈನಲ್ಲಿ ದೊಡ್ಡ ಬ್ರ್ಯಾಂಡ್‌ ಒಂದರ ಜಾಹೀರಾತು ಚಿತ್ರೀಕರಣದಲ್ಲಿ ನಟ ಯಶ್ ಪಾಲ್ಗೊಂಡಿದ್ದಾರೆ. ಜೊತೆಗೆ ಯಶ್‌ರ ಮುಂದಿನ ಸಿನಿಮಾದ ನಿರ್ಮಾಪಕರು ಮುಂಬೈ ಮೂಲದವರು ಎಂದು ಹೇಳಲಾಗುತ್ತಿದ್ದು, ಜಾಹೀರಾತು ಚಿತ್ರೀಕರಣದ ಬಳಿಕ ತಮ್ಮ ಮುಂದಿನ ಸಿನಿಮಾದ ನಿರ್ಮಾಪಕರನ್ನು ಭೇಟಿಯಾಗಿ ಅಲ್ಲಿಯೇ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

'ಕೆಜಿಎಫ್ 2' ಬಳಿಕ ಯಶ್ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ ಹಾಗೆಂದು ಯಶ್ ಖಾಲಿ ಸಹ ಕುಳಿತಿಲ್ಲ. ಹಲವು ಜಾಹೀರಾತುಗಳಲ್ಲಿ ಯಶ್ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಪತ್ನಿ ರಾಧಿಕಾ ಜೊತೆಗೆ ಅಡುಗೆ ಎಣ್ಣೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡ ಯಶ್, ಗಡ್ಡಕ್ಕೆ ಹಚ್ಚುವ ತೈಲ, ಕಬ್ಬಿಣ, ಸೆಲ್ಕಾನ್ ಮೊಬೈಲ್, ಫ್ಲಿಪ್‌ಕಾರ್ಟ್ ಇನ್ನೂ ಕೆಲವು ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕಾರಣ ಹಲವು ಬ್ರ್ಯಾಂಡ್‌ಗಳು ಯಶ್ ಅನ್ನು ತಮ್ಮ ರಾಯಭಾರಿಯನ್ನಾಗಿ ನೇಮಿಸಿಕೊಂಡಿದ್ದಾರೆ.

ಯಶ್‌ರ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬುದು ಭಾರಿ ಕುತೂಹಲ ಮೂಡಿಸಿದೆ. 'ಕೆಜಿಎಫ್ 2' ಚಿತ್ರೀಕರಣ ಮುಗಿದು ಬಹುಕಾಲವಾಗಿದೆ. ಆದರೆ ಈ ವರೆಗೆ ಯಾವುದೇ ಹೊಸ ಸಿನಿಮಾವನ್ನು ಯಶ್ ಘೋಷಿಸಿಲ್ಲ. 'ಕೆಜಿಎಫ್' ಅಂಥಹಾ ಅತ್ಯುತ್ತಮ ಸಿನಿಮಾದಲ್ಲಿ ನಟಿಸಿರುವ ಯಶ್, ಇನ್ನು ಮುಂದೆ ಆಯ್ಕೆ ಮಾಡಿಕೊಳ್ಳುವ ಸಿನಿಮಾ ಅದೇ ಮಾದರಿಯಲ್ಲಿರಬೇಕು ಎಂಬ ನಿರೀಕ್ಷೆಯಿಂದಾಗಿ ಅಳೆದು-ತೂಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಯಶ್‌ ನಟಿಸಿರುವ 'ಕೆಜಿಎಫ್ 2' ಈಗಾಗಲೇ ಎರಡು ಬಾರಿ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿದ್ದು, ಸಿನಿಮಾವು 2022ರ ಏಪ್ರಿಲ್ 14ಕ್ಕೆ ಬಿಡುಗಡೆ ಆಗಲಿದೆ. ಪ್ರಶಾಂತ್ ನೀಲ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ವಿಲನ್ ಆಗಿ ಸಂಜಯ್ ದತ್, ರಾಜಕಾರಣಿ ಪಾತ್ರದಲ್ಲಿ ರವೀನಾ ಟಂಡನ್, ನಟ ಪ್ರಕಾಶ್ ರೈ ಇನ್ನೂ ಹಲವು ಪ್ರತಿಭಾವಂತ ನಟ-ನಟಿಯರು ನಟಿಸಿದ್ದಾರೆ. 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಮುನ್ನವೇ ಕೋಟ್ಯಂತರ ರುಪಾಯಿ ವ್ಯವಹಾರ ಮಾಡಿದೆ.

More from Filmibeat

English summary
Actor Yash recently went to Mumbai for an advertisement shooting. Yash's pictures and videos of his Mumbai visit went viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X