Don't Miss!
- News
Breaking: ರಾಜಸ್ಥಾನದ ಭರತ್ಪುರದಲ್ಲಿ ಚಾರ್ಟರ್ಡ್ ವಿಮಾನ ಪತನ!
- Finance
ಅದಾನಿ ಆಘಾತ: 2 ದಿನಗಳಲ್ಲಿ ₹18,000 ಕೋಟಿ ಕಳೆದುಕೊಂಡ LIC- ಗ್ರಾಹಕರೇ, ಎಚ್ಚರಿಕೆಯಿಂದ ಈ ವರದಿ ನೋಡಿ
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Radhika Pandit : 'ಕೆಜಿಎಫ್ 2' ಟ್ರೈಲರ್ ಲಾಂಚ್‌ನಲ್ಲಿ ರಾಧಿಕಾ ಧರಿಸಿದ ಡ್ರೆಸ್ ಬೆಲೆಯೆಷ್ಟು?
ಕಿರುತೆರೆ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದು ದೊಡ್ಡ ಸ್ಟಾರ್‌ಗಳಾಗಿ ಮಿಂಚಿದವರು ಹಲವರು. ಅದರಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ಒಬ್ಬರು. ಕನ್ನಡ ಚಿತ್ರರಂಗಕ್ಕೆ ನಾಯಕಿ ಆಗಿ ಎಂಟ್ರಿ ಕೊಟ್ಟ ಕಡಿಮೆ ಸಮಯದಲ್ಲಿಯೇ ರಾಧಿಕಾ ಪಂಡಿತ್ ಸ್ಟಾರ್ ನಟಿ ಎನಿಸಿಕೊಂಡರು. ಸದ್ಯ ಬಿಗ್ ಸ್ಕ್ರೀನ್‌ನಿಂದ ದೂರ ಉಳಿದಿರುವ ನಟಿ ರಾಧಿಕಾ ಪಂಡಿತ್‌ಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ.
ರಾಧಿಕಾ ಪಂಡಿತ್ ಮದುವೆ ಬಳಿಕ ತಮ್ಮ ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದಾರೆ. ಮನೆ, ಮಕ್ಕಳು ಅಂತಾ ಸದಾ ಬ್ಯೂಸಿ ಆಗಿ ಇರ್ತಾರೆ. ಅವರು ತಮ್ಮ ನಿತ್ಯ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಯಶ್-ರಾಧಿಕಾಗೆ
ಇಂದು
ವಿಶೇಷ:
ಪತಿಗಾಗಿ
ರಾಧಿಕಾ
ಬರೆದರು
ವಿಶೇಷ
ಸಂದೇಶ!
ಸದ್ಯಕ್ಕೆ ಅಭಿನಯದಿಂದ ದೂರ ಉಳಿದಿರುವ ರಾಧಿಕಾ ಪಂಡಿತ್ ಮತ್ತೆ ಯಾವಾಗ ಚಿತ್ರರಂಗಕ್ಕೆ ಬರುತ್ತಾರೆ ಎಂದು ಅಭಿಮಾನಿ ಬಳಗ ಕಾಯುತ್ತಿದೆ. ಈ ಬಗ್ಗೆ ಸುಳಿವು ಕೂಡ ಸಿಕ್ಕಿದೆ. ನಟಿ ರಾಧಿಕಾ ಮತ್ತೆ ಚಿತ್ರರಂಗಕ್ಕೆ ಬರುವ ಸೂಚನೆ ಕೊಟ್ಟಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ಓದಿ...
ಯಶ್-
ರಾಧಿಕಾ
ಮಕ್ಕಳ
ತುಂಟಾಟ:
ವೈರಲ್
ವೀಡಿಯೋಗಳಲ್ಲಿ
ಏನಿದೆ?

ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡ ರಾಧಿಕಾ ಪಂಡಿತ್!
ನಟಿ ರಾಧಿಕಾ ಪಂಡಿತ್ ಸಿನಿಮಾಗಳಲ್ಲಿ ಅಭಿನಯ ನಿಲ್ಲಿಸಿದ ಮೇಲೆ ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿ ಇರುತ್ತಾರೆ. ಆದರೆ ಇತ್ತೀಚೆಗೆ ನಡೆದ 'ಕೆಜಿಎಫ್ 2' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ ಭಾಗಿ ಆಗಿದ್ದರು. ಈ ವೇಳೆ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಂತ ಇದಕ್ಕೂ ಮೊದಲು ಅವರು ಗ್ಲಾಮರಸ್ ಆಗಿ ಕಾಣಲಿಲ್ಲ ಅಂತಲ್ಲ. ಮಕ್ಕಳಾದ ಬಳಿಕ ರಾಧಿಕ ಕೊಂಚ ದಪ್ಪಾ ಆಗಿದ್ದರು. ಆದರೆ ಈಗ ಸಣ್ಣ ಆಗಿದ್ದು, ಮೊದಲು ಸಿನಿಮಾಗಳಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾ ಇದ್ದರೋ, ಹಾಗೆ ಕಂಗೊಳಿಸಿದ್ದಾರೆ.

ರಾಧಿಕಾ ಕಮ್ ಬ್ಯಾಕ್ ಬಗ್ಗೆ ಅಭಿಮಾನಿಗಳ ಪ್ರಶ್ನೆ!
ನಟಿ ರಾಧಿಕಾ ಪಂಡಿತ್ ತಮ್ಮ ನ್ಯೂ ಲುಕ್ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಫೋಟೊ ಹಾಕುತ್ತಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಎಲ್ಲರೂ ಕೇಳುತ್ತಿರುವುದು ಒಂದೇ ಪ್ರಶ್ನೆ. ನೀವೂ ಮತ್ತೆ ಚಿತ್ರರಂಗಕ್ಕೆ ಯಾವಾಗ ಬರುತ್ತೀರ? ಯಾವಾಗ ಅಭಿನಯ ಆರಂಭ ಮಾಡುತ್ತೀರ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಜೊತೆಗೆ ರಾಧಿಕಾ ಪಂಡಿರತ್ ಲುಕ್‌ಗೆ ಎಲ್ಲರೂ ಬೋಲ್ಡ್ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Recommended Video


31 ಸಾವಿರ ರೂ.ಬೆಲೆಯ ಉಡುಪು ಧರಿಸಿದ ರಾಧಿಕಾ ಪಂಡಿತ್!
'ಕೆಜಿಎಫ್ 2' ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ಹೈಲೈಟ್ ಆಗಿದ್ದರು. ರಾಧಿಕಾಳ ನ್ಯೂ ಲುಕ್ ಎಲ್ಲರ ಗಮನ ಸೆಳೆದಿತ್ತು. ರಾಧಿಕಾ ತೊಟ್ಟಿದ್ದ ಕಾಸ್ಟ್ಯೂಮ್ ಕೂಡ ಗಮನ ಸೆಳೆದಿತ್ತು. ಈ ಡ್ರೆಸ್ ಬೆಲೆ ಬರೋಬ್ಬರಿ 31 ಸಾವಿರ ರೂಪಾಯಿ. ಇದು ಡಿಸೈನರ್ ರಿತುಕುಮಾರ್ ಕಸೂತಿ ಮಾಡಿದ ಡೆಸ್. ಈ ಲುಕ್‌ನಲ್ಲಿ ರಾಧಿಕಾ ಎರಡು ಮಕ್ಕಳ ತಾಯಿ ಆಗಿದ್ದರೂ, ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ರಾಧಿಕಾ ಕಮ್ ಬ್ಯಾಕ್ ಯಾವಾಗ?
ರಾಧಿಕಾ ಪಂಡಿತ್ ಸದ್ಯಕ್ಕೆ ಅಭಿನಯದಿಂದ ದೂರ ಉಳಿದಿದ್ದಾರೆ. ಆದರೆ ಸಿನಿಮಾ ಕ್ಷೇತ್ರದಿಂದ ದೂರ ಆಗಿಲ್ಲ. ಪತಿ ಯಶ್ ಕೂಡ ಚಿತ್ರರಂಗದಲ್ಲಿ ಇದ್ದಾರೆ. ಹಾಗಾಗಿ ಸಿನಿಮಾರಂಗಕ್ಕೆ ಸಂಬಂಧ ಪಟ್ಟ ಹಲವು ವಿಚಾರಗಳಲ್ಲಿ ರಾಧಿಕಾ ಇರುತ್ತಾರೆ. ಇನ್ನು ರಾಧಿಕಾ ತಮ್ಮ ಅಭಿಮಾನಿಗಳಿಂದಲೂ ಕೂಡ ದೂರ ಉಳಿದಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಸದಾ ಅಭಿಮಾನಿಗಳಿಗೆ ಕನೆಕ್ಟ್ ಆಗಿರುತ್ತಾರೆ. ತಮ್ಮ ಮಕ್ಕಳ ವಿಡಿಯೋಗಳನ್ನು, ವಿಶೇಷವಾದ ಸಂದರ್ಭದ ಫೋಟೊಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.