For Quick Alerts
  ALLOW NOTIFICATIONS  
  For Daily Alerts

  'KGF-2' ತಮಿಳು ವರ್ಷನ್ ಗೆ ಡಬ್ ಮಾಡಲಿದ್ದಾರೆ ರಾಕಿ ಭಾಯ್

  |

  ಕೆಜಿಎಫ್-2 ಇಡೀ ಭಾರತೀಯ ಚಿತ್ರರಂಗಕ್ಕೆ ಕಾತರದಿಂದ ಕಾಯುತ್ತಿರುವ ಕನ್ನಡದ ಹೆಮ್ಮೆಯ ಸಿನಿಮಾ. ಮೊದಲ ಭಾಗಕ್ಕಿಂತ ಕೆಜಿಎಫ್ ಪಾರ್ಟ್-2 ಮತ್ತಷ್ಟು ರೋಚಕವಾಗಿರಲಿದೆಯಂತೆ. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ಸಿನಿಮಾ ತೆರೆಗೆೆ ಬರುತ್ತಿದೆ. ವಿಶೇಷ ಅಂದರೆ ಕೆಜಿಎಫ್-2 ತಮಿಳು ವರ್ಷನ್ ಗೆ ರಾಕಿ ಭಾಯ್ ಯಶ್ ಅವರೆ ಡಬ್ ಮಾಡಲಿದ್ದಾರೆ.

  ಇತ್ತೀಚಿಗೆ ತಮಿಳು ನಾಡಿನ ಚೆನ್ನೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಯಶ್ ಮಾತನಾಡುತ್ತ ಈ ಮಾತನ್ನು ಹೇಳಿದ್ದಾರೆ. ಕೆಜಿಎಫ್-1ಕ್ಕೆ ಯಶ್ ತಮಿಳಿನಲ್ಲಿ ಡಬ್ ಮಾಡಿರಲಿಲ್ಲ. ಆದರೆ ಕೆಜಿಎಫ್-2 ತಮಿಳು ವರ್ಷನ್ ಗೆ ಧ್ವನಿ ನೀಡುತ್ತಿದ್ದಾರೆ.

  'KGF-2' ಕ್ಲೈಮ್ಯಾಕ್ಸ್ ನಲ್ಲಿ ಯಶ್-ಸಂಜಯ್ ದತ್ ಬೇರ್ ಬಾಡಿ ಫೈಟ್'KGF-2' ಕ್ಲೈಮ್ಯಾಕ್ಸ್ ನಲ್ಲಿ ಯಶ್-ಸಂಜಯ್ ದತ್ ಬೇರ್ ಬಾಡಿ ಫೈಟ್

  ಯಶ್ ಈಗ ತಮಿಳು ಭಾಷೆಯನ್ನು ಅದ್ಭುತವಾಗಿ ಮಾತನಾಡುತ್ತಾರೆೆ. ಹಾಗಾಗಿ ಚಿತ್ರಕ್ಕೂ ಅವರೆ ಧ್ವನಿ ನೀಡುವ ನಿರ್ಧಾರ ಮಾಡಿದ್ದಾರೆ. ಯಶ್ ಅವರೆ ಡಬ್ ಮನಾಡುವುದರಿಂದ ತಮಿಳು ಅಭಿಮಾನಿಗಳು ಮತ್ತಷ್ಟು ಖುಷಿಯಾಗಿದ್ದಾರೆ. ತಮಿಳು ನಾಡಿನಲ್ಲಿಯೂ ಯಶ್ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

  ಹಾಗಾಗಿ ಡಬ್ ಮಾಡುವ ಮೂಲಕ ಸ್ಥಳಿಯ ಅಭಿಮಾನಿಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಂದ್ಹಾಗೆ ಕೆಜಿಎಫ್-2 ಚಿತ್ರೀಕರಣ ಹಂತದಲ್ಲಿದೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಆಕ್ಷನ್ ದೃಶ್ಯಗಳು ಮತ್ತು ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಸೆರೆ ಹಿಡಿಯಬೇಕಿದೆ.

  ಈಗಾಗಲೆ ಸಂಜಯ್ ದತ್ ಮತ್ತು ಯಶ್ ನಡುವಿನ ಆಕ್ಷನ್ ದೃಶ್ಯಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ದೃಶ್ಯ ಚಿತ್ರೀಕರಣ ಮಾಡಲಾಗುತ್ತಿದೆ. ಇಬ್ಬರು ಸ್ಟಾರ್ ನಟರು ಬೇರ್ ಬಾಡಿ ಫೈಟ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆಜಿಎಫ್-2 ಆಕ್ಟೋಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Kannada Actor Yash will dubbed voice in Tamil version for KGF-2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X