ಕನ್ನಡ ಚಿತ್ರರಂಗಕ್ಕೆ ರಾಕಿಂಗ್ ಸ್ಟಾರ್ ತಾಯಿ ಪುಷ್ಪಾ ಗ್ರ್ಯಾಂಡ್ ಎಂಟ್ರಿ

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಇಬ್ಬರೂ ಮದುವೆ ಆಗುವ ಮುನ್ನವೇ ಚಿತ್ರರಂಗದಲ್ಲಿ ಬಂದಿದ್ದರು. ಮದುವೆ ಬಳಿಕ ಕೂಡ ರಾಧಿಕಾ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಯಶ್ ಅವರ ತಾಯಿ ಕೂಡ ಸಿನಿರಸಿಕರಿಗೆ ಚಿರಪರಿಚಿತ ಹೆಸರು. ಡಾ. ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಮಗನನ್ನು ಸಿನಿಮಾ ಹೀರೊ ಆಗಿ ನೋಡಬೇಕು ಎಂದು ಚಿಕ್ಕಂದಿನಿಂದ ಬಹಳ ಕನಸು ಕಂಡಿದ್ದರು. ಕೊನೆಗೂ ಆ ಕನಸು ನನಸಾಗಿದೆ. ಬರೀ ಹೀರೊ ಅಲ್ಲ ಯಶ್ ಈಗ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಪ್ಯಾನ್ ಇಂಡಿಯಾ ಮೀರಿ ಪ್ಯಾನ್ ವರ್ಲ್ಡ್ ಸಿನಿಮಾ ನಿರ್ಮಿಸಿ ನಟಿಸುತ್ತಿದ್ದಾರೆ. 'KGF' ಸರಣಿ ಬಳಿಕ 'ಟಾಕ್ಸಿಕ್' ಚಿತ್ರದಲ್ಲಿ ರಾಕಿಭಾಯ್ ದರ್ಬಾರ್ ನಡೀತಿದೆ.

Actor Yash s mother Pushpa debuts as producer under her new banner PA Productions

ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಂಬ ಬ್ಯಾನರ್ ಹುಟ್ಟುಹಾಕಿ 'ಟಾಕ್ಸಿಕ್' ಚಿತ್ರಕ್ಕೆ ಸಹ ನಿರ್ಮಾಪಕರು ಆಗಿದ್ದಾರೆ. ಬಾಲಿವುಡ್‌ನಲ್ಲಿ ರಾಮಾಯಣ ಚಿತ್ರವನ್ನು ನಿರ್ಮಿಸಲು ಕೈ ಜೋಡಿಸಿದ್ದಾರೆ. ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 200, 300 ಕೋಟಿ ಸುರಿದು ಸಿನಿಮಾಗಳನ್ನು ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇದೀಗ ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಕೂಡ ಇದೇ ಹಾದಿಯಲ್ಲಿದ್ದಾರೆ.

ಪುಷ್ಪಾ ಅರುಣ್‌ಕುಮಾರ್ ಚಿತ್ರರಂಗಕ್ಕೆ ಬರುತ್ತಿರುವುದು ನಿಜ. ಆದರೆ ನಟಿಯಾಗಿ ಅಲ್ಲ ಬದಲಿಗೆ ನಿರ್ಮಾಪಕಿಯಾಗಿ. PA ಪ್ರೊಡಕ್ಷನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದಾರೆ. ಈಗಾಗಲೇ ಒಂದು ಸಿನಿಮಾ ಘೋಷಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಹಸೊ ಪ್ರತಿಭೆಗಳಿಗೆ ಈ ಚಿತ್ರದಲ್ಲಿ ಅವಕಾಶ ನೀಡಲು ಮನಸ್ಸು ಮಾಡಿದ್ದಾರೆ. ನಾಳೆ(ಏಪ್ರಿಲ್ 29) ಬೆಳಗ್ಗೆ 11 ಗಂಟೆಗೆ ಸಿನಿಮಾ ಘೋಷಣೆ ಆಗಿದೆ.

PA ಪ್ರೊಡಕ್ಷನ್ಸ್ ಸಂಸ್ಥೆಯ ಮೊದಲ ಚಿತ್ರಕ್ಕೆ ನಟ, ನಟಿ ಹಾಗೂ ಕಲಾವಿದರ ಜೊತೆಗೆ ತಂತ್ರಜ್ಞರು ಆಯ್ಕೆ ಆಗಿದ್ದಾರೆ. ಶ್ರೀ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಹಾಗೂ ಕಾವ್ಯಾ ಶೈವಾ ನಾಯಕ-ನಾಯಕಿಯರಾಗಿ ನಟಿಸಲಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ, ರಾಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿರಲಿದೆ. ಗೋಪಾಲ ಕೃಷ್ಣ ದೇಶಪಾಂಡೆ ಹಾಗೂ ರಾಜೇಶ್ ನಟರಂಗ ಕೂಡ ತಾರಾಗಣದಲ್ಲಿ ಇದ್ದಾರೆ.

ಪುಷ್ಪಾ ಅರುಣ್‌ಕುಮಾರ್ ಮೊದಲಿನಿಂದಲೂ ಕನ್ನಡ ಸಿನಿಮಾಗಳ ಅಭಿಮಾನಿ. ಅದರಲ್ಲೂ ಅಣ್ಣಾವ್ರು ಅಂದ್ರೆ ದೇವರ ಸಮಾನ. ಚಿಕ್ಕಂದಿನಿಂದಲೂ ಸಾಕಷ್ಟು ಸಿನಿಮಾಗಳನ್ನು ನೋಡಿ ಬೆಳೆದವರು. ಚಿತ್ರರಂಗದಿಂದ ಇಷ್ಟೆಲ್ಲಾ ಗಳಿಸಿದ ನಾವು ಮರಳಿ ಚಿತ್ರರಂಗಕ್ಕೆ ಏನಾದರೂ ಕೊಡಬೇಕು ಎನ್ನುವುದು ಪುಷ್ಪಾ ಅವರ ಆಸೆ ಆಗಿತ್ತು. ಹಾಗಾಗಿ ಬಹಳ ದಿನಗಳಿಂದ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಅಂತಿಮವಾಗಿ ಇದೀಗ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.

ಫೆಬ್ರವರಿ 10ರಂದು ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. ಇದೀಗ ಸಣ್ಣ ಟೀಸರ್ ಅಥವಾ ಪೋಸ್ಟರ್ ಸಮೇತ ಸಿನಿಮಾ ಘೋಷಣೆಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಯಶ್ 'ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್' ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿದ್ದರೂ ಮತ್ತೊಂದು ಸಂಸ್ಥೆ ಯಾಕೆ ಎನ್ನುವ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಕೆಲ ವರ್ಷಗಳಿಂದ ಯಶ್ ಅವರ ತಂದೆ ತಾಯಿ ಹಾಸನದಲ್ಲಿದ್ದಾರೆ.

ಯಶ್ ಹಾಸನದಲ್ಲಿ ತೋಟ ಮಾಡುತ್ತಿದ್ದಾರೆ. ಖುದ್ದು ಅವರ ತಂದೆ-ತಾಯಿ ಅಲ್ಲಿದ್ದುಕೊಂಡು ಅದನ್ನು ನೋಡಿಕೊಳ್ಳುತ್ತಿದ್ದಾರೆ. ವಿವಿಧ ಬಗೆಯ ಗಿಡಮರಗಳನ್ನು ಅಲ್ಲಿ ಬೆಳೆಸಲಾಗಿದೆ. ಇದೀಗ ಯಶ್ ಅವರ ತಾಯಿ ಪುಷ್ಪ ಚಿತ್ರರಂಗಕ್ಕೆ ಬರ್ತಿದ್ದಾರೆ. PA ಅಂದರೆ ಪುಷ್ಪಾ ಹಾಗೂ ಅರುಣ್‌ಕುಮಾರ್ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ಸಂಸ್ಥೆಗೆ ಹೆಸರು ಫಿಕ್ಸ್ ಮಾಡಲಾಗಿದೆ.

More from Filmibeat

English summary
Yash's mother Pushpa Arunkumar Big Debut as Producer new film announcement drops tomorrow
Read more about: yash sandalwood producer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X