ಯೋಗಿ ಸುದ್ದಿಗೋಷ್ಠಿ: 'ಡ್ರಗ್ಸ್' ಅನುಮಾನುಗಳಿಗೆಲ್ಲಾ ನೇರಾ-ನೇರ ಉತ್ತರ

ನಟ ಯೋಗಿ ಅಲಿಯಾಸ್ ಲೂಸ್ ಮಾದಾ ನಿನ್ನೆಯಷ್ಟ ಡ್ರಗ್ಸ್ ಪ್ರಕರಣದಲ್ಲಿ ಆಂತರಿಕ ಭದ್ರತಾ ಇಲಾಖೆಯಿಂದ ವಿಚಾರಣೆ ಎದುರಿಸಿದ್ದಾರೆ.

ಯೋಗಿ, ಕ್ರಿಕೆಟಿಗ ಎನ್‌.ಸಿ.ಅಯ್ಯಪ್ಪ ಸೇರಿ ಹಲವರು ಈ ಕುರಿತು ವಿಚಾರಣೆ ಎದುರಿಸಿದ್ದಾರೆ. ಮಾಧ್ಯಮಗಳಲ್ಲಿ ಯೋಗಿ ವಿಚಾರಣೆ ಎದುರಿಸಿದ ಕುರಿತು ಕೆಲವು ಸತ್ಯಕ್ಕೆ ಹೊರತಾದ ಸುದ್ದಿಗಳು ಬಿತ್ತರವಾದ ಕಾರಣ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲು ಯೋಗಿ ಇಂದು ಸುದ್ದಿಗೋಷ್ಠಿ ನಡೆಸಿದರು.

ಆಂತರಿಕ ಭದ್ರತಾ ಇಲಾಖೆಯವರು ಶನಿವಾರ ನೊಟೀಸ್ ನೀಡಿದ್ದರು. ನಿನ್ನೆ (ಸೋಮವಾರ) ನಾನು ವಿಚಾರಣೆ ಎದುರಿಸಿದೆ. ಅವರು ಹೆಚ್ಚೇನು ಪ್ರಶ್ನೆಗಳನ್ನು ಕೇಳಲಿಲ್ಲ. ಬಹಳ ಸರಳವಾದ ಹಾಗೂ ಬಹುತೇಕ ನನ್ನ ವೈಯಕ್ತಿಕ ಜೀವನದ ಬಗ್ಗೆಯೇ ಅವರ ಪ್ರಶ್ನೆಗಳಿದ್ದವು. ಅಲ್ಲಿ ಕೇಳಿದ ಪ್ರಶ್ನೆಗಳನ್ನು ಬಹಿರಂಗಗೊಳಿಸದಿರುವಂತೆ ಅವರೇ ಹೇಳಿದ್ದಾರಾದ್ದರಿಂದ ಅದನ್ನು ಇಲ್ಲಿ ಬಹಿರಂಗಪಡಿಸುತ್ತಿಲ್ಲ ಎಂದರು ಯೋಗಿ.

'ರಾಗಿಣಿ ಜೊತೆ ಸಂಪರ್ಕ ಕಡಿದು ಎಂಟು ವರ್ಷವಾಯಿತು'

'ರಾಗಿಣಿ ಜೊತೆ ಸಂಪರ್ಕ ಕಡಿದು ಎಂಟು ವರ್ಷವಾಯಿತು'

ರಾಗಿಣಿಗೂ ತಮಗೂ ನಂಟು ಇದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಯೋಗಿ, 2013 ರಲ್ಲಿ ಒಟ್ಟಿಗೆ ಸಿನಿಮಾ ಮಾಡಿದ್ದೆವು. ಅದಾದ ನಂತರ ಈ ವರೆಗೆ ನಾನು ರಾಗಿಣಿ ಅವರಿಗೆ ಕರೆ ಮಾಡಿಲ್ಲ, ಭೇಟಿ ಮಾಡಿಲ್ಲ. ಅವರೊಂದಿಗೆ ನಂಟು ಇದೆ ಎಂದು ಸುದ್ದಿ ಪ್ರಸಾರ ಮಾಡಬೇಡಿ, ನನಗೂ ಕುಟುಂಬವಿದೆ ಅವರಿಗೆ ಬೇಸರವಾಗುತ್ತದೆ ಎಂದು ಮನವಿ ಮಾಡಿದರು ಯೋಗಿ. ದಿಗಂತ್-ಐಂದ್ರಿತಾ ಬಗ್ಗೆಯೂ ನನಗೆ ಪ್ರಶ್ನೆ ಮಾಡಿಲ್ಲ ಎಂದರು.

ಚಾನೆಲ್‌ಗೆ ನೀಡಿದ ಸಂದರ್ಶನವೇ ಮುಳುವಾಯಿತೆ?

ಚಾನೆಲ್‌ಗೆ ನೀಡಿದ ಸಂದರ್ಶನವೇ ಮುಳುವಾಯಿತೆ?

ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಿಂದಲೇ ನನಗೆ ನೊಟೀಸ್ ಬಂದಿರಬಹುದು ಎಂದು ಊಹಿಸಿದ ಯೋಗಿ, ಆ ಸಂದರ್ಶನದಲ್ಲಿ ನಾನು ಕುಡಿತ, ಸಿಗರೇಟ್ ಚಟಕ್ಕೆ ಅಂಟುಕೊಂಡ ಬಗ್ಗೆ, ಜೀವನದಲ್ಲಿ ಖಿನ್ನತೆಗೆ ಒಳಗಾದ ಬಗ್ಗೆ ಮಾತನಾಡಿದ್ದೆ. ಆ ಕಾರಣದಿಂದಲೇ ನನಗೆ ನೊಟೀಸ್ ನೀಡಿರಬಹುದಾದ ಸಾಧ್ಯತೆಯೂ ಇದೆ ಎಂದರು ಯೋಗಿ.

ಪೊಲೀಸರು ರಾಗಿಣಿ ಕುರಿತು ಪ್ರಶ್ನೆ ಕೇಳಲಿಲ್ಲ: ಯೋಗಿ

ಪೊಲೀಸರು ರಾಗಿಣಿ ಕುರಿತು ಪ್ರಶ್ನೆ ಕೇಳಲಿಲ್ಲ: ಯೋಗಿ

ಪೊಲೀಸರು ರಾಗಿಣಿ ಕುರಿತಾಗಿ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಡ್ರಗ್ಸ್ ವಿಷಯ ಗಮನಕ್ಕೆ ಇದೆಯಾ ಎಂದು ಪ್ರಶ್ನಿಸಿದರು. ನನ್ನ ವೈಯಕ್ತಿಕ ಜೀವನದ ಕೆಲವು ಮಾಹಿತಿಗಳನ್ನು ಕೇಳಿ ಪಡೆದುಕೊಂಡರು. ಕೆಲವರೊಂದಿಗಿನ ಗೆಳೆತನದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು ಅಷ್ಟೆ, ನನ್ನ ಮೊಬೈಲ್ ನನ್ನ ಬಳಿಯೇ ಇದ್ದು, ಅದನ್ನು ಸಹ ಅವರು ವಶಪಡಿಸಿಕೊಳ್ಳಲಿಲ್ಲ ಎಂದರು ಯೋಗಿ.

'ಕುಡಿತ ಹಾಗೂ ಸಿಗರೇಟಿನ ಅಭ್ಯಾಸವಿದೆ, ಡ್ರಗ್ಸ್‌ ಅಭ್ಯಾಸ ಇಲ್ಲ'

'ಕುಡಿತ ಹಾಗೂ ಸಿಗರೇಟಿನ ಅಭ್ಯಾಸವಿದೆ, ಡ್ರಗ್ಸ್‌ ಅಭ್ಯಾಸ ಇಲ್ಲ'

ನಾನು ಬಹಳ ಮೊದಲು ಕೆಲವು ಪಾರ್ಟಿಗಳಿಗೆ ಹೋಗುತ್ತಿದ್ದೆ ಆದರೆ ಪಾರ್ಟಿಗೆ ಹೋಗುವುದು ಬಿಟ್ಟು ಬಹಳ ವರ್ಷಗಳಾದವು. ಕುಡಿತ, ಸಿಗರೇಟಿನ ಅಭ್ಯಾಸ ಇದೆಯಾದರೂ ಅದೂ ಸಹ ವೈಯಕ್ತಿಕ ಮಟ್ಟದಲ್ಲಿವೆ, ಗುಂಪಾಗಿ ಪಾರ್ಟಿ ಮಾಡುವುದಿಲ್ಲ, ಡ್ರಗ್ಸ್ ಅಂತೂ ಎಂದಿಗೂ ಸೇವಿಸಿಲ್ಲ ಎಂದರು ಯೋಗಿ.

'ನಮ್ಮ ಮನೆಯಲ್ಲಿ ಪಾರ್ಟಿ ಮಾಡಿದ್ದೇವೆಂದು ದೂರು ನೀಡಿದ್ದರು'

'ನಮ್ಮ ಮನೆಯಲ್ಲಿ ಪಾರ್ಟಿ ಮಾಡಿದ್ದೇವೆಂದು ದೂರು ನೀಡಿದ್ದರು'

ಮೊನ್ನೆ ಐಪಿಎಲ್ ಮ್ಯಾಚ್ ಪ್ರಾರಂಭವಾದ ದಿನ ಮನೆಯಲ್ಲಿ ಕೆಲವರು ಸೇರಿ ಮ್ಯಾಚ್ ನೋಡುತ್ತಿದ್ದೆವು, ಆಗ ಅಕ್ಕ-ಪಕ್ಕದ ಮನೆಯವರು, ನಮ್ಮ ಮನೆಯಲ್ಲಿ ಪಾರ್ಟಿ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದು ನಿಜ. ಆದರೆ ಅದು ಐಪಿಎಲ್ ಮ್ಯಾಚ್ ನೋಡುವಾಗ ಆಗಿದ್ದ ಶಬ್ದವೇ ಹೊರತು, ಪಾರ್ಟಿ ಮಾಡುತ್ತಿರಲಿಲ್ಲ, ಅದನ್ನು ಪೊಲೀಸರಿಗೆ ಸಹ ತಿಳಿಸಿದೆವು ಎಂದರು ಯೋಗಿ.

Recommended Video

ಸಾಯೋದು ಇದ್ದಿದ್ದೆ ಆದ್ರೆ ಇದ್ದಾಗ ಹೇಗೆ ಬದುಕಿದ್ವಿ ಅನ್ನೋದೇ ಇಲ್ಲಿ ಮುಖ್ಯ | Raami Reddy | Filmibeat Kannada
ನನ್ನ ಕಣ್ಣೆದುರು ನನ್ನ ಸ್ನೇಹಿತರೂ ಸಹ ಡ್ರಗ್ಸ್ ತೆಗೆದುಕೊಂಡಿಲ್ಲ: ಯೋಗಿ

ನನ್ನ ಕಣ್ಣೆದುರು ನನ್ನ ಸ್ನೇಹಿತರೂ ಸಹ ಡ್ರಗ್ಸ್ ತೆಗೆದುಕೊಂಡಿಲ್ಲ: ಯೋಗಿ

ನನಗೆ ದಿಗಂತ್, ಸಂಜನಾ ಸಿನಿಮಾದ ಇನ್ನೂ ಹಲವರೊಂದಿಗೆ ಸ್ನೇಹವಿದೆ ಆದರೆ ಡ್ರಗ್ಸ್ ವ್ಯವಹಾರ ನನ್ನ ಗಮನಕ್ಕೆ ಬಂದಿಲ್ಲ, ನಾನು ನೋಡಿದಂತೆ ನನ್ನ ಗೆಳೆಯರೂ ಸಹ ಅದನ್ನು ಸೇವಿಸಿಲ್ಲ. ಇನ್ನುಳಿದಂತೆ ಪ್ರಸ್ತುತ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಇನ್ನಾರೂ ಸಹ ನನಗೆ ಗೊತ್ತಿಲ್ಲ, ನನ್ನೊಂದಿಗೆ ಸ್ನೇಹವೂ ಇಲ್ಲ. ನನ್ನ ಮೊಬೈಲ್ ಕರೆ ಮಾಹಿತಿ ಪೊಲೀಸರ ಬಳಿ ಇದೆ ಅವರು ಈಗಾಗಲೇ ಆ ಬಗ್ಗೆ ತನಿಖೆ ಮಾಡಿದ್ದಾರೆ ಎಂದರು ಯೋಗಿ.

More from Filmibeat

English summary
Actor Yogi did press meet today and answers questions related to drug case. He said did have friendship with Ragini and other accused.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X