For Quick Alerts
  ALLOW NOTIFICATIONS  
  For Daily Alerts

  ಕಲಾವಿದರಿಗೆ ಜಾತಿ ಇಲ್ಲ..ನಾವೆಲ್ಲರೂ ಒಂದೇ- ಝೈದ್‌ ಖಾನ್‌

  |

  ಶಾಸಕ ಜಮೀರ್‌ ಅಹ್ಮದ್‌ ಪುತ್ರ ಝೈದ್‌ ಖಾನ್‌ ಅಭಿನಯದ ಮೊದ ಚಿತ್ರ ಬನಾರಸ್‌ ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಬನರಾಸ್‌ ಚಿತ್ರದ ಮೂಲಕವೇ ಝೈದ್‌ ಖಾನ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಝೈದ್‌ ಖಾನ್‌ ಮೊದಲ ಚಿತ್ರವೆ ಪ್ಯಾನ್‌ ಇಂಡಿಯಾ ಸಿನಿಮಾವಾಗಲಿದೆ. ಬೆಲ್‌ ಬಾಟಮ್‌ ಚಿತ್ರದ ನಿರ್ದೇಶಕ ಜಯತೀರ್ಥ ಚಿತ್ರವನ್ನು ನಿರ್ದೇಶಿಸಿದ್ದು, ರಾಬರ್ಟ್ ಚಿತ್ರದಲ್ಲಿ ಮಿಂಚಿದ್ದ ಸೋನಲ್‌ ಮೊಂಟೆರೋ ಚಿತ್ರದ ನಾಯಕಿಯಾಗಿದ್ದಾರೆ. ನಿನ್ನೆ (ಸಪ್ಟೆಂಬರ್ 26) ಬನರಾಸ್‌ ಚಿತ್ರದ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ.

  ಝೈದ್‌ ಖಾನ್‌ ಅಭಿನಯದ ಬನರಾಸ್‌ ಚಿತ್ರದ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ಕ್ರೇಜಿ ಸ್ಟಾರ್‌ ರವಿ ಚಂದ್ರನ್‌ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಇನ್ನೂ ಪ್ರಮುಖವಾಗಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ ಮುಖ್ಯ ಅತಿಥಿಯಾಗಿದ್ದರು. ಬನರಾಸ್‌ ಚಿತ್ರದ ನಟರು ಸೇರಿದಂತೆ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.

  ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಇಬ್ಬರಲ್ಲಿ ತಾನು ಯಾರಿಗೆ ಫ್ಯಾನ್ ಎಂದು ಬಿಚ್ಚಿಟ್ಟ ಝೈದ್ ಖಾನ್ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಇಬ್ಬರಲ್ಲಿ ತಾನು ಯಾರಿಗೆ ಫ್ಯಾನ್ ಎಂದು ಬಿಚ್ಚಿಟ್ಟ ಝೈದ್ ಖಾನ್

  ಟ್ರೈಲರ್‌ ಬಿಡುಗಡೆ ಬಳಿಕ ನಟ ಝೈದ್‌ ಖಾನ್‌ ಮಾಧ್ಯಮ ಮಿತ್ರರ ಜೊತೆ ಸಂವಾದ ನಡೆಸಿದರು. ಈ ವೇಳೆ ಬನರಾಸ್‌ ಚಿತ್ರದ ಚಿತ್ರೀಕರಣದ ವೇಳೆ ಮಣಿಕಾರ್ಣಿಕ ಘಾಟ್‌ನಲ್ಲಿ ಅಗೋರಿಗಳು ಎದುರಿಗೆ ಸಿಕ್ಕವರಿಗೆ ಧೂಪಗಳನ್ನು ಇಡುತ್ತಾರೆ. ಈ ಪ್ರದೇಶದಲ್ಲಿ ಹಿಂದೂಗಳ ಸಂಸ್ಕೃತಿಯನ್ನು ಒಬ್ಬ ಮುಸ್ಲಿಂ ಆಗಿ ನೀವು ಹೇಗೆ ಗೌರವಿಸಿದ್ದೀರಾ ಎನ್ನುವ ಪ್ರಶ್ನೆಗೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಝೈದ್‌ ಖಾನ್‌ ಕಲಾವಿದರಿಗೆ ಜಾತಿ ಇಲ್ಲ. ನನಗೆ ಆ ರೀತಿ ಅನಿಸೋದು ಇಲ್ಲ. ನಾನೊಬ್ಬ ಮುಸ್ಲಿಂ ನನ್ನ ಹಿಂದೂ ಸ್ನೇಹಿತರು ಪೂಜೆ ಮಾಡುವಾಗ ನನ್ನ ಕೈಲಿ ಮಾಡಲು ಆಗದೇ ಇದ್ದಾಗ ಸುಮ್ಮನೆ ಪಕ್ಕದಲ್ಲೇ ನಿಲ್ಲುತ್ತೇನೆ. ಇಲ್ಲ ಗೌರವ ಕೊಡಬೇಕು. ಅದನ್ನು ಬಿಟ್ಟು ನನಗಾಗಲ್ಲ ಎನ್ನಬಾರದು ಎಂದಿದ್ದಾರೆ.

  ಮಾತು ಮುಂದುವರಿಸಿದ ಝೈದ್‌ ಖಾನ್‌, ಈ ಜಾತಿ ಬಗ್ಗೆ ಆಲೋಚನೆಗಳೆಲ್ಲಾ ಯಾಕೆ ಬೇಕು. ನೀವು ಕೃಷ್ಣ ದೇವರು ಗಣೇಶ ಅಂತಿರಾ, ನಾನು ಅಲ್ಲಾ ಅಂತೀನಿ. ದೇವರು ಒಬ್ಬನೇ. ನೀವೇ ಬೇರೆ ಹೆಸರಿನಿಂದ ಕರೆಯುತ್ತೀರಾ ನಾವೇ ಬೇರೆ ಹೆಸರಿನಿಂದ ಕರೆಯುತ್ತೇವೆ. ಆದರೆ ಎಲ್ಲವೂ ಒಂದೇ. ನಾವೆಲ್ಲರೂ ಒಂದೇ. ಎಲ್ಲದಕ್ಕಿಂತ ಮೊದಲು ನಾವು ಮನುಷ್ಯರು. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸಿದ್ಧಾರ್ಥ ಪಾತ್ರವನ್ನು ನಿರ್ವಹಿಸಿದ್ದೇನೆ ಎಂದಿದ್ದಾರೆ.

  ಆಲಿಯಾ ಜೊತೆ ಹಾಸಿಗೆ ಹಂಚಿಕೊಳ್ಳುವುದು ಕಷ್ಟ: ರಣಬೀರ್‌ಗೆ ಇಂದೆಥಾ ಸಂಕಷ್ಟ..ಆಲಿಯಾ ಜೊತೆ ಹಾಸಿಗೆ ಹಂಚಿಕೊಳ್ಳುವುದು ಕಷ್ಟ: ರಣಬೀರ್‌ಗೆ ಇಂದೆಥಾ ಸಂಕಷ್ಟ..

  ಬಾಲಿವುಡ್‌ನಲ್ಲಿ ವ್ಯಾಪಕ ಟ್ರೆಂಡ್ ಆಗಿದ್ದ ಬಾಯ್ಕಾಟ್‌ ಅಭಿಯಾನ ಬನರಾಸ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದು, ಬನಾರಸ್ ಚಿತ್ರಕ್ಕ ವಿರೋಧ ವ್ಯಕ್ತವಾಗಿತ್ತು. ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಎನ್ನುವ ಕಾರಣಕ್ಕೆ ಝೈದ್‌ ಖಾನ್‌ ಚಿತ್ರವನ್ನು ಅನೇಕರು ವಿರೋಧಿಸಿದ್ದರು. ಬನಾರಸ್ ಚಿತ್ರದ ವಿರುದ್ಧ ಹಿಂದೂಪರ ಸಂಘಟನೆಗಳು ಬಾಯ್ಕಾಟ್‌ ಬನರಾಸ್‌ ಟ್ರೆಂಡ್ ಆರಂಭಿಸಿದ್ದರು. ಚಿತ್ರ ಹಿಂದೂ ವಿರೋಧಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಬನಾರಸ್ ಚಿತ್ರತಂಡ ಬಿಡುಗಡೆ ಮಾಡಿದ್ದ ಪೋಸ್ಟರ್ ಮತ್ತು ಚಿತ್ರಗಳಲ್ಲೂ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದರು. ಸದ್ಯ ಈ ಎಲ್ಲಾ ಚಾಲೆಂಜ್‌ಗಳನ್ನು ಮೀರಿ ಚಿತ್ರ ತೆರೆ ಕಾಣುತ್ತಿದೆ.

  English summary
  Sandalwood actor Zaid Khan react on religion discrimination in Banaras pressmeet,
  Tuesday, September 27, 2022, 22:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X