India
  For Quick Alerts
  ALLOW NOTIFICATIONS  
  For Daily Alerts

  ದುಡ್ಡಿದ್ದರಷ್ಟೆ ನಟರು ಬೆಳೆಯಲು ಸಾಧ್ಯ: 'ನ್ಯಾಷನಲ್ ಕ್ರಷ್ಷು' ಹಣ ಕೊಟ್ಟು ಪಡೆದ ಬಿರುದು: ಸಂಯುಕ್ತಾ ಹೆಗ್ಡೆ

  |

  ನಟಿ ಸಂಯುಕ್ತಾ ಹೆಗ್ಡೆ ಧೈರ್ಯಗಾತಿ, ಅನಿಸಿದ್ದು ಮಾಡುವುದು, ಅನಿಸುದ್ದು ಹೇಳುವುದು ಅವರ ಜಾಯಮಾನ, ಮುಚ್ಚು-ಮರೆ ಇಲ್ಲ.

  ಇತ್ತೀಚೆಗೆ ತಾವು ನಟಿಸಿರುವ 'ತುರ್ತು ನಿರ್ಗಮನ' ಸಿನಿಮಾದ ಪ್ರಚಾರ ಸಂದರ್ಭದಲ್ಲಿ 'ಫಿಲ್ಮ್‌ ಕಂಪಾನಿಯನ್ ಸೌಥ್'ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಸಿನಿಮಾ ಜರ್ನಿ, ಸಿನಿಮಾ ರಂಗದಲ್ಲಿ ಏಳು-ಬೀಳು, ಕೆಲವು ನಟ-ನಟಿಯರೇಕೆ ಬೇಗ ಖ್ಯಾತಿ ಗಳಿಸುತ್ತಾರೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

   RCB ಹೊಸ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಕಿರಿಕ್ ಪಾರ್ಟಿ ಸಂಯುಕ್ತಾ ಹೆಗ್ಡೆ ಸೆಲ್ಫಿ: ಇನ್ನೂ ಬರುತ್ತೆ ಫೋಟೊಗಳು RCB ಹೊಸ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಕಿರಿಕ್ ಪಾರ್ಟಿ ಸಂಯುಕ್ತಾ ಹೆಗ್ಡೆ ಸೆಲ್ಫಿ: ಇನ್ನೂ ಬರುತ್ತೆ ಫೋಟೊಗಳು

  ನಟ-ನಟಿಯರ ಬಗ್ಗೆ ಸಾಮಾನ್ಯರು ಅರಿಯದ ಸಂಗತಿಗಳನ್ನು ಹಂಚಿಕೊಂಡಿರುವ ಸಂಯುಕ್ತಾ ಹೆಗ್ಡೆ, ಹಣವಿದ್ದರೆ ಯಾವ ನಟ-ನಟಿಯರು ಬೇಕಾದರೂ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಗಳಿಸಬಹುದು, ಹೆಚ್ಚು ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು ಎಂಬ ಬಗ್ಗೆಯೂ ಸಂಯುಕ್ತಾ ಮಾತನಾಡಿದ್ದಾರೆ, ಜೊತೆಗೆ 'ನ್ಯಾಷನಲ್ ಕ್ರಷ್ಷು, ರಾಜ್ಯ ಕ್ರಷ್ಷುಗಳೆಲ್ಲ ಹಣ ಕೊಟ್ಟು ಖರೀದಿಸಿದ ಬಿರುದುಗಳು' ಎಂದಿದ್ದಾರೆ. ಅಂದಹಾಗೆ ನ್ಯಾಷನಲ್ ಕ್ರಷ್ ಎಂದು ರಶ್ಮಿಕಾ ಮಂದಣ್ಣಾಗೆ ಕರೆಯುತ್ತಾರೆ.

  ''ಹಣ ಇದ್ದರೆ ನಟ-ನಟಿಯರು ಅಂದುಕೊಂಡಿದ್ದು ಮಾಡಬಹುದು''

  ''ಹಣ ಇದ್ದರೆ ನಟ-ನಟಿಯರು ಅಂದುಕೊಂಡಿದ್ದು ಮಾಡಬಹುದು''

  ಯಾಕೆ ಕೆಲವು ನಟ-ನಟಿಯರ ವೃತ್ತಿ ಗ್ರಾಫು ಹಠಾತ್ತನೆ ಮೇಲೆ ಹೋಗುತ್ತದೆ? ಹೀಗೆ ಹಠಾತ್ತನೆ ಫೇಮು ಹೆಚ್ಚಾಗುವಂತೆ ಮಾಡಿಕೊಳ್ಳಬಹುದಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಸಂಯುಕ್ತಾ ಹೆಗ್ಡೆ, ''ಹೌದು, ಗಾಢ್‌ಫಾದರ್ ಅಥವಾ ಹಣ ಇದ್ದರೆ ನಟ-ನಟಿಯರು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಬಹುದು. ಪಿಆರ್‌ (ಪಬ್ಲಿಕ್ ರಿಲೇಷನ್) ಗೆ ಹಣ ನೀಡಿದರೆ, ನೀವು ಏನಾಗಬೇಕು ಎಂದುಕೊಂಡಿದ್ದೀರೊ ಅವರು ನಿಮ್ಮನ್ನು ಹಾಗೆಯೇ ಮಾಡಿಬಿಡುತ್ತಾರೆ. ಒಬ್ಬ ನಟ ನನಗೆ ಚಾಕ್ಲೆಟ್ ಬಾಯ್ ಇಮೇಜ್ ಬೇಕು ಎಂದರೆ ಪಿಆರ್‌ಗಳು ಆತನ ಇಮೇಜನ್ನು ಹಾಗೆಯೇ ಮಾಡುತ್ತಾರೆ'' ಎಂದಿದ್ದಾರೆ ಸಂಯುಕ್ತಾ ಹೆಗ್ಡೆ.

  ''ಅಭಿಪ್ರಾಯ ಮೂಡಿಸುವ ಕಾರ್ಯ ಮಾಡಲಾಗುತ್ತದೆ''

  ''ಅಭಿಪ್ರಾಯ ಮೂಡಿಸುವ ಕಾರ್ಯ ಮಾಡಲಾಗುತ್ತದೆ''

  ''ನಟ-ನಟಿಯರ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಅಭಿಪ್ರಾಯ ಮೂಡಿಸುವ ಕಾರ್ಯವನ್ನು ಪಿಆರ್‌ಗಳು ಮಾಡುತ್ತಾರೆ. ಅವರು ಮಾರ್ಕೆಟ್‌ಗೆ ಹೋದರು ಸುದ್ದಿ ಆಗುವಂತೆ ಮಾಡುತ್ತಾರೆ, ಏರ್‌ಪೋರ್ಟ್‌ಗೆ ಹೋದರೂ ಸುದ್ದಿ, ಲವ್ ಮಾಡಿದರೆ, ಬ್ರೇಕ್ ಅಪ್ ಆದರೆ ಎಲ್ಲದರ ಬಗ್ಗೆಯೂ ನಿಗದಿತ ರೀತಿಯಲ್ಲಿ, ನಟ-ನಟಿಯ ಬಗ್ಗೆ ಒಟ್ಟಾರೆ ಅಭಿಪ್ರಾಯ ಮೂಡುವಂಥಹಾ ಸುದ್ದಿಯನ್ನು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತಾರೆ'' ಎಂದಿದ್ದಾರೆ ನಟಿ ಸಂಯುಕ್ತಾ.

  ನಮ್ಮ ಚಿತ್ರೋದ್ಯಮದಲ್ಲೂ ಪಿಆರ್‌ ಕಲ್ಚರ್ ಇದೆ

  ನಮ್ಮ ಚಿತ್ರೋದ್ಯಮದಲ್ಲೂ ಪಿಆರ್‌ ಕಲ್ಚರ್ ಇದೆ

  ನಟ-ನಟಿಯರ ಬಗ್ಗೆ ಜನರಿಗೆ, ಉದ್ಯಮದವರಿಗೆ ಅಭಿಪ್ರಾಯ ಹುಟ್ಟುಹಾಕಲೆಂದೇ ಪಿಆರ್‌ ತಂತ್ರಗಾರರಿದ್ದಾರೆ. ನಮ್ಮಲ್ಲೂ ಇಂಥಹಾ ಪಿಆರ್‌ ಸೇವೆಗಳಿವೆ. ಆದರೆ ನಮಗಿಂತಲೂ ಹೊರಗಿನ ಚಿತ್ರೋದ್ಯಮದಲ್ಲಿ ಹೆಚ್ಚಾಗಿದೆ. ನಮ್ಮಲ್ಲೂ ಇಂಥಹಾ ದೊಡ್ಡ ಮಟ್ಟಿನ ಪಿಆರ್‌ ನೆಟ್‌ವರ್ಕ್‌ ಬಿಲ್ಡ್ ಆಗುತ್ತಿದೆ. ಅವರ ನೆಟ್‌ವರ್ಕ್‌ಗೆ ಸಿಕ್ಕಿಬಿಟ್ಟರೆ ಮುಗಿಯಿತು, ನಿಮ್ಮ ಜೀವನವೇ ಬದಲಾಗಿಬಿಡುತ್ತದೆ'' ಎಂದಿದ್ದಾರೆ ಸಂಯುಕ್ತಾ.

  ''ನ್ಯಾಷನಲ್ ಕ್ರಷ್ಷು-ಸ್ಟೇಟ್ ಕ್ರಷ್ಷು ಬಿರುದುಗಳು ಹಣ ಕೊಟ್ಟು ಖರೀದಿಸಿದ್ದು''

  ''ನ್ಯಾಷನಲ್ ಕ್ರಷ್ಷು-ಸ್ಟೇಟ್ ಕ್ರಷ್ಷು ಬಿರುದುಗಳು ಹಣ ಕೊಟ್ಟು ಖರೀದಿಸಿದ್ದು''

  ''ಒಂದು ವರ್ಷದಲ್ಲಿ ನನಗೆ ಚಾಕ್ಲೆಟ್ ಬಾಯ್ ಇಮೇಜ್ ಬೇಕು, ಬಬ್ಲಿ ಗರ್ಲ್ ಇಮೇಜ್ ಬೇಕು ಎಂದು ನಟರು ಪಿಆರ್‌ಗಳನ್ನು ಡಿಮ್ಯಾಂಡ್ ಮಾಡುತ್ತದೆ. ಪಿಆರ್‌ಗಳು ಅವರ ಫೋಟೊಶೂಟ್ ಮಾಡಿಸಿ, ಅವರ ಕುರಿತು ಅದೇ ಮಾದರಿಯ ಸುದ್ದಿಗಳು, ವಿಡಿಯೋಗಳು, ಚಿತ್ರಗಳು ಪ್ರಕಟವಾಗುವಂತೆ ಮಾಡುತ್ತಾರೆ. ಈ ನ್ಯಾಷನಲ್ ಕ್ರಷ್ಷು, ಸ್ಟೇಟ್‌ ಕ್ರಷ್ಷು ಎಂದೆಲ್ಲ ಇರುತ್ತದಲ್ಲ, ಅದೂ ಸಹ ಮೀಮ್‌ ಪೇಜ್‌ಗಳಿಗೆ ಹಣ ಕೊಟ್ಟು ಹಾಕಿಸಿಕೊಳ್ಳುವುದು. ಸತತವಾಗಿ ಹೀಗೆ ಒಂದು ಅಭಿಪ್ರಾಯ ಮೂಡಿಸುವ ಸುದ್ದಿಗಳನ್ನು ಜನರಿಗೆ ತಲುಪಿಸುತ್ತಿದ್ದರೆ, ಜನರ ಅಭಿಪ್ರಾಯ ತನ್ನಂತಾನೇ ಬದಲಾಗುತ್ತದೆ'' ಎಂದಿದ್ದಾರೆ ಸಂಯುಕ್ತಾ ಹೆಗ್ಡೆ.

  ಖಾಸಗಿ ಜೀವನ ಇಲ್ಲದೇ ಆಗುತ್ತದೆ

  ಖಾಸಗಿ ಜೀವನ ಇಲ್ಲದೇ ಆಗುತ್ತದೆ

  ಇದರ ಹಿಂದೆ ತ್ಯಾಗ ಸಹ ಇದೆ. ಪಿಆರ್‌ ಮಾಡಿಸಿಕೊಳ್ಳುವ ನಟ-ನಟಿಯರಿಗೆ ಸ್ವಂತ ಜೀವನ ಇಲ್ಲದೇ ಹೋಗುತ್ತದೆ. ಅಥವಾ ತಮ್ಮದಲ್ಲದ ತನವನ್ನು ಅವರು ಜನರಿಗೆ ತಲುಪಿಸುತ್ತಿರುತ್ತಾರೆ. ಖಾಸಗಿತನ ಕಾಣೆಯಾಗುತ್ತದೆ. ಅವರು ತಮ್ಮ ಜೀವನದಲ್ಲಿ ತಮಗಾಗಿ ಅಲ್ಲದೆ ಎಲ್ಲವನ್ನೂ ನೋಡುಗರಿಗಾಗಿ, ಜನಪ್ರಿಯತೆಗಾಗಿ ಮಾಡುತ್ತಿರುತ್ತಾರೆ. ಇದರಿಂದ ಅವರಿಗೆ ಹೆಚ್ಚು ಅವಕಾಶಗಳು ಸಿಗಬಹುದು ಆದರೆ ಖಾಸಗಿತನ ಹೊರಟುಹೋಗಿರುತ್ತದೆ. ನನಗೆ ಇಂಥಹಾ ಜೀವನ ಬೇಕಿಲ್ಲ. ಹಾಗಾಗಿ ನಾನು ಯಾವ ಪಿಆರ್‌ಗಳ ಜೊತೆಗೂ ಒಪ್ಪಂದ ಮಾಡಿಕೊಂಡಿಲ್ಲ. ನನಗೆ ವೃತ್ತಿ ಹಾಗೂ ಖಾಸಗಿ ಜೀವನದ ನಡುವೆ ಅಂತರ ಬೇಕು ಅದನ್ನು ಕಾಯ್ದುಕೊಂಡಿದ್ದೇನೆ'' ಎಂದಿದ್ದಾರೆ ಸಂಯುಕ್ತಾ ಹೆಗ್ಡೆ.

  ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗ್ಡೆ

  ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗ್ಡೆ

  ಸಂಯುಕ್ತಾ ಹೆಗ್ಡೆ ಹಾಗೂ ನಟಿ ರಶ್ಮಿಕಾ ಮಂದಣ್ಣ ಇಬ್ಬರು 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಒಟ್ಟಿಗೆ ಚಿತ್ರರಂಗಕ್ಕೆ ಕಾಲಿಟ್ಟರು ಆದರೆ ರಶ್ಮಿಕಾ ಮಂದಣ್ಣ ತೀವ್ರವಾಗಿ ಜನಪ್ರಿಯತೆ ಗಳಿಸಿ ತೆಲುಗು, ತಮಿಳು ಈಗ ಬಾಲಿವುಡ್‌ಗೆ ಹಾರಿದರು. ಆದರೆ ಸಂಯುಕ್ತ ಹೆಗ್ಡೆ ದೊಡ್ಡ ಯಶಸ್ಸು ಗಳಿಸಲಿಲ್ಲ. ರಶ್ಮಿಕಾ ಮಂದಣ್ಣ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು, ಹೆಚ್ಚು ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಪಿಆರ್‌ಗಳ ನೆರವು ಪಡೆದರು ಎಂಬುದು ದೊಡ್ಡ ಗುಟ್ಟೇನೂ ಅಲ್ಲ ಈಗ ಅದೇ ವಿಷಯವನ್ನು ಈಗ ಸಂಯುಕ್ತಾ ಹೆಗ್ಡೆ ಬಹಿರಂಗವಾಗಿ ಹೇಳಿದ್ದಾರೆ.

  English summary
  Actress Samyukta Hegde said actors if they want to survive or grow big they should have money. Many actors hiring PRs to grow big in the industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X