ಊಟಕ್ಕಾಗಿ ಪಾಪ ಏನೇನೆಲ್ಲಾ ಮಾಡ್ತಿದ್ದಾರೆ ನಟ ಶ್ರೀಮುರುಳಿ
ಶೂಟಿಂಗು, ಆಡಿಯೋ ಬಿಡುಗಡೆ, ಸಾಮಾಜಿಕ ಕಾರ್ಯಕ್ರಮ ಅದೂ-ಇದೂ ಎಂದು ಬಹು ಸಮಯ ಹೊರಗೇ ಕಳೆಯುವ ಸ್ಟಾರ್ ನಟರಿಗೆ, ಸೆಲೆಬ್ರಿಟಿಗಳಿಗೆ ಮನೆಯೊಳಗಿನ ಕಷ್ಟಗಳು ಅರ್ಥವೇ ಆಗಿರುವುದಿಲ್ಲ.
Recommended Video
ಹೊರಗಿನ ತಮ್ಮ ದುಡಿಮಿಯೇ ಶ್ರಮದಾಯಕ, ಮನೆಯೊಳಗಿರುವವರ ಕೆಲಸ ಸುಲಭದ್ದೆಂಬ ಅಭಿಪ್ರಾಯವಿರುತ್ತದೆ. ಆದರೆ ಈ ಕೊರೊನಾ ಲಾಕ್‌ಡೌನ್ ಈ ಅಭಿಪ್ರಯಾಗಳನ್ನು ಬದಲಿಸಿದೆ.
ಮನೆ ನಡೆಸಲು ಹೆಣ್ಣು ಮಕ್ಕಳು ಪಡುವ ಶ್ರಮ ಅರ್ಥವಾಗುತ್ತಿದೆ. ಬೆಳಿಗ್ಗಿನಿಂದ ಹೆಣ್ಣು ಮಕ್ಕಳು ಎಷ್ಟು ಕಷ್ಟಪಡುತ್ತಾರೆಂಬುದು ಗಮನಕ್ಕೆ ಬರುತ್ತಿದೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಉಳಿದ ನಟರುಗಳು ಈ ಕಷ್ಟದ ಅನುಭೂತಿ ಪಡೆಯುತ್ತಿದ್ದಾರೆ.

ಪಾತ್ರೆ ತೊಳೆಯದಿದ್ದರೆ ಹೆಂಡತಿ ಊಟ ಕೊಡಲ್ಲ: ಶ್ರೀಮುರಳಿ
ನಟ ಶ್ರೀಮುರಳಿ ಪಾತ್ರೆ ತೊಳೆಯುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿ, ಪಾತ್ರೆ ತೊಳೆಯದಿದ್ದರೆ ಹೆಂಡತಿ ಊಟ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ತೊಳೆಯುತ್ತಿದ್ದೇನೆ. ಇದು ಬಹಳ ಕಷ್ಟದ ಕೆಲಸ ನನಗೆ ಬೆವರು ಬಂದುಬಿಟ್ಟಿತು ಎಂದಿದ್ದಾರೆ.

ಹಲವು ಅಡುಗೆ ಪ್ರಯೋಗ ಮಾಡಿರುವ ಪುನೀತ್
ಮನೆಯಲ್ಲೇ ಉಳಿದಿರುವ ಪುನೀತ್ ರಾಜ್‌ಕುಮಾರ್, ಲಾಕ್‌ಡೌನ್ ಅವಧಿಯಲ್ಲಿ ಕೆಲವು ಅಡುಗೆ ಪ್ರಯೋಗಗಳನ್ನು ಮಾಡಿದೆ. ಅಡುಗೆ ಮಾಡುವುದು ಸುಲಭದ ಕೆಲಸವಲ್ಲ, ಮನೆಯಲ್ಲಿ ಕೆಲಸ ಮಾಡಿ, ಹೊರಗೂ ಕೆಲಸ ಮಾಡುವ ಹೆಣ್ಣು ಮಕ್ಕಳ ಕಷ್ಟ ಅರಿವಿಗೆ ಬಂತು ಎಂದಿದ್ದಾರೆ.

ಚಿರಂಜೀವಿ ಸಹ ಮನೆಗೆಲಸದಲ್ಲಿ ಕೈ ಜೋಡಿಸಿದ್ದಾರೆ
ಮೆಗಾಸ್ಟಾರ್ ಚಿರಂಜೀವಿ ಸಹ ಲಾಕ್‌ಡೌನ್ ಸಮಯದಲ್ಲಿ ಮನೆಗೆಲಸಕ್ಕೆ ಕೈಜೋಡಿಸಿ, ಉತ್ತಮ ಪತಿ ಮನೆಗೆಲಸಕ್ಕೆ ಕೈ ಜೋಡಿಸಬೇಕು, ನೀವು ನಿಮ್ಮ ಮನೆಯ ಮಹಿಳೆಯರಿಗೆ ನೆರವಾಗಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಮನೆಗೆಲಸದಲ್ಲಿ ನೆರವಾಗುತ್ತಿರುವ ನಟರು
ಹಲವು ನಟರು ಲಾಕ್‌ಡೌನ್ ನಿಂದಾಗಿ ಮನೆಯಲ್ಲಿಯೇ ಉಳಿದು ಮನೆಗೆಲಸದಲ್ಲಿ ಮಡದಿಗೆ ನೆರವಾಗುತ್ತಿದ್ದಾರೆ. ಕೆಲವರಂತೂ ಅಡುಗೆ ಕಾರ್ಯವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದಾರೆ.


Click it and Unblock the Notifications











