ಅಭಿಮಾನಿಗಳನ್ನು ಭೇಟಿಯಾಗಿ ಆಸೆ ಈಡೇರಿಸಿದ ನಟರಿವರು

By ಶೃತಿ ಹರೀಶ್ ಗೌಡ

ಅಭಿಮಾನಿಗಳ‌ ಆಸೆ ಈಡೇರಿಸುವಲ್ಲಿ ಯಾವತ್ತಿಗೂ ದೊಡ್ಡ ಮನೆಯ ಮಂದಿಯ ಕೈ ಮೊದಲಿರುತ್ತದೆ. ಪುನೀತ್ ರಾಜಕುಮಾರ್ ಹಾಗೂ ಶಿವಣ್ಣರವರು ತಮ್ಮ ಅಭಿಮಾನಿಗಳ ಆಸೆಯನ್ನು ಪೂರೈಸುವಲ್ಲಿ ಮೊದಲಿಗರಾಗಿದ್ದಾರೆ. 2020ರಲ್ಲಿ ಪುನೀತ್ ರಾಜಕುಮಾರ್ ರವರು ತಮ್ಮ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ಬಾಲಕನನ್ನು ಸ್ವತಃ ಮನೆಗೆ ಕರೆಸಿಕೊಂಡು ಮಾತನಾಡಿಸಿ ತಮ್ಮ ಔದರ್ಯತೆಯನ್ನು ತೋರಿದರು. ಪೇಟೆಯ ಆದರ್ಶ್ ಎಂಬ ವ್ಯಕ್ತಿಗೆ ಪುನೀತ್ ರಾಜಕುಮಾರ್ ರವರು ಆತನ ಆಸೆಯನ್ನ ನೆರವೇರಿಸಿದರು. ಕುಟುಂಬ ಸಮೇತರಾಗಿ ಮನೆಗೆ ಕರೆಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಎರಡು ದಿನಗಳ ಹಿಂದೆ ಧ್ರುವ ಸರ್ಜಾ ಸಹ ಅವರ ಅಭಿಮಾನಿಯ ಆಸೆಯನ್ನ ಈಡೇರಿಸಿದ್ದಾರೆ. ಧ್ರುವ ಸರ್ಜಾ ಅಭಿಮಾನಿ ಪೃಥ್ವಿರಾಜ್ ರವರು ಫೆಬ್ರವರಿ 14ರಂದು ಬೈಕ್ ಅಪಘಾತದಿಂದಾಗಿ ಕೋಮಾ ಸ್ಥಿತಿಗೆ ತಲುಪಿದ್ದರು. ಧ್ರುವ ಸರ್ಜಾ ಅವರಿಗೆ ತಮ್ಮ ಅಭಿಮಾನಿಗೆ ಅಪಘಾತವಾಗಿರುವುದು ಗೊತ್ತಾಗಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ಬಂದಂತಹ ಧ್ರುವ ಸರ್ಜಾ ತಮ್ಮ ಅಭಿಮಾನಿಯನ್ನು ನೋಡಿದ್ದಾರೆ.

ಇನ್ನು ಪೃಥ್ವಿರಾಜ್ ತಂದೆ ದೇವರಾಜ್ ಅವರು ನನ್ನ ಮಗನಿಗೆ 19 ವರ್ಷ ಮಾತ್ರ, ಅವನು ಅಪ್ಪಟ ಧ್ರುವ ಸರ್ಜಾ ಅಭಿಮಾನಿ, ಅವನ ಆಸೆ ಧ್ರುವ ಸರ್ಜಾ ಅವರನ್ನು ನೋಡುವುದಾಗಿತ್ತು ಎಂದು ತಿಳಿಸಿದ್ದಾರೆ. ಅಭಿಮಾನಿಯ ಕೊನೆ ಆಸೆಯನ್ನು ತಿಳಿದುಕೊಂಡಂತಹ ಧ್ರುವ ಸರ್ಜಾ ಅವರು ಸ್ವಲ್ಪವೂ ತಡ ಮಾಡದೆ ಅವರ ಅಭಿಮಾನಿಯನ್ನು ನೋಡಿದ್ದಾರೆ.

 ಜಗ್ಗೇಶ್ ರವರ ನಡತೆ ಕಂಡು ಅಭಿಮಾನಿಗಳು ಖುಷ್

ಜಗ್ಗೇಶ್ ರವರ ನಡತೆ ಕಂಡು ಅಭಿಮಾನಿಗಳು ಖುಷ್

ನಟ ಜಗ್ಗೇಶ್ ರವರು ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಈಗ ಅವರು ತಮ್ಮ ಹೊಸ ಚಿತ್ರೀಕರಣದ ಬಿಸಿಯಲ್ಲಿದ್ದಾರೆ ಇನ್ನು ಶೋಷಿಯಲ್ ಮೀಡಿಯಾದಲ್ಲಿ ಸದಾ ಅಭಿಮಾನಿಗಳ ಜೊತೆಗೆ ತಮ್ಮ ಸಂವಾದವನ್ನು ನಡೆಸುತ್ತಾರೆ. ಜಗ್ಗೇಶ್ ರವರು ಪುಟ್ಟ ಅಭಿಮಾನಿಯ ಆಸೆಯನ್ನ ಈಡೇರಿಸಿದ್ದಾರೆ. ಜೊತೆಗೆ ಪುಟ್ಟ ಅಭಿಮಾನಿ ಫೋಟೋವನ್ನು ಇನ್ಸ್ಟಾಗ್ರಾಮ್‌‌ನಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಪೋರಾ ಜಗ್ಗೇಶ್ ರವರನ್ನು ಭೇಟಿಯಾಗಬೇಕು ಎಂಬ ಆಸೆ ಇತ್ತು, ಈ ಆಸೆಯನ್ನು ಜಗ್ಗೇಶ್ ರವರು ಈಡೇರಿಸಿದ್ದಾರೆ. ಈ ಸರಳತೆಯನ್ನು ಮೆಚ್ಚಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

 ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಬಾಲಕನ ಮೀಟ್ ಮಾಡಿದ ರಾಮಚರಣ್

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಬಾಲಕನ ಮೀಟ್ ಮಾಡಿದ ರಾಮಚರಣ್

ಸದ್ಯಕ್ಕೆ ರಾಮಚರಣ್ ರವರು ಆರ್‌ಆರ್‌ಆರ್ ಸಿನಿಮಾದ ಸಕ್ಸಸ್ ನಲ್ಲಿ ಇದ್ದಾರೆ. ಹೊಸ ಸಿನಿಮಾದ ಸಕ್ಸಸ್ ನ ನಂತರ ಹಲವಾರು ಸಿನಿಮಾದಲ್ಲೂ ಸಹ ಬ್ಯುಸಿಯಾಗಿ ಸುದ್ದಿಯಲ್ಲಿದ್ದಾರೆ. ನಡುವೆ ನಾನು ತೆರೆಯ ಮೇಲಷ್ಟೇ ಹೀರೊ ಅಲ್ಲ ತೆರೆಯ ಹಿಂದೆ ಕೂಡ ನಾನು ಹೀರೊನೇ ಎಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಮಣಿ‌ಕುಶಾಲ್ ಎಂಬ ಒಂಬತ್ತು ವರ್ಷದ ಬಾಲಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆತನನ್ನು ರಾಮ್ ಚರಣ್ ರವರು ಹೈದರಾಬಾದ್‌‌ನ ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ. ಇನ್ನು ಬಾಲಕನನ್ನ ಭೇಟಿ ಮಾಡಿ ಅವನ ಯೋಗ ಕ್ಷೇಮವನ್ನ ವಿಚಾರಿಸಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ಅವು ಸಾಕಷ್ಟು ವೈರಲ್ ಆಗಿದ್ದವು.

 ನನ್ನ ಸೆಲೆಬ್ರಿಟೀಸ್ ಹಚ್ಚೆ

ನನ್ನ ಸೆಲೆಬ್ರಿಟೀಸ್ ಹಚ್ಚೆ

ಇನ್ನು ದರ್ಶನ್ ಸಹ ತಮ್ಮ ಅಭಿಮಾನಿಯ ಆಸೆಯನ್ನ ಈಡೇರಿಸಿದ್ದಾರೆ. ಹಲವಾರು ಸಂದರ್ಭದಲ್ಲಿ ಅಭಿಮಾನಿಗಳು ನನಗೆ ದರ್ಶನನ್ನು ನೋಡಬೇಕು ಎಂಬ ಕೊನೆಯ ಆಸೆ ಇದೆ ಎಂದಾಗ ದರ್ಶನ್ ರವರು ಹೇಗೆ ವಿಷಯವನ್ನು ತಿಳಿದುಕೊಂಡು ಖುದ್ದಾಗಿ ಹೋಗಿ ಅಭಿಮಾನಿಗೆ ಸಂತೈಸಿ ಬರುವ ದೃಶ್ಯ ಎಲ್ಲರಿಗೂ ಅಚ್ಚು ಮೆಚ್ಚು ಆಗಿದೆ. ಅವರ ಹುಟ್ಟುಹಬ್ಬಕ್ಕೆ ಬರುವಂತಹ ವಿಶೇಷಚೇತನ ಅಭಿಮಾನಿಗಳನ್ನು ಸಹ ಅವರ ಮನೆಯೊಳಗೆ ಕೂರಿಸಿ ಉಪಚರಿಸಿ ಕಳುಹಿಸುತ್ತಾರೆ. ಇದು ದರ್ಶನ್ ರವರ ನಡತೆಗೆ ಬಹಳ ಮೆಚ್ಚುಗೆಯನ್ನು ಸೂಚಿಸುತ್ತದೆ.‌ ಇಲ್ಲಿ ನನ್ನ ಸೆಲೆಬ್ರಿಟಿಸ್ ಎಂದು ದರ್ಶನ್ ರವರು ಅಚ್ಚೆ ಹಾಕಿರುವುದನ್ನು ನೆನಪಿಸಿಕೊಳ್ಳಬೇಕಾಗಿದೆ. ಅವರು ಯಾವ ರೀತಿ ತಮ್ಮ ಅಭಿಮಾನಿಗಳನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಸಹ ಆ ವಿಶೇಷ ಚೇತನ ಅಭಿಮಾನಿಯನ್ನು ಭೇಟಿ ಮಾಡಿ ಆತನ ಆಸೆಯನ್ನ ಈಡೇರಿಸಿದ್ದರು. ಇದರ ಜೊತೆಗೆ ರಜನಿಕಾಂತ್, ದೇವರಕೊಂಡ, ರಾಯ್ ಕಪೂರ್ ಸೇರಿದಂತೆ ಹಲವಾರು ಜನರು ತಮ್ಮ ತಮ್ಮ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ.

More from Filmibeat

English summary
Actors fulfilled fans whishes, ram charan, darshan, ganesh, rajinikanth, appu, jaggesh, kamal hassan, ray kapur, vijay devara konda, druva sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X