twitter
    For Quick Alerts
    ALLOW NOTIFICATIONS  
    For Daily Alerts

    ಭಾರತ ಸುರಕ್ಷಿತವಲ್ಲ ಎಂದ ನಟರು ಅಫ್ಘಾನಿಸ್ತಾನಕ್ಕೆ ಹೋಗಲಿ: ಅನಂತ್‌ನಾಗ್

    |

    ಭಾರತ ಸುರಕ್ಷಿತವಲ್ಲ ಎಂದು ಹೇಳಿದ್ದ ನಟರು ಅಫ್ಘಾನಿಸ್ತಾನಕ್ಕೆ ಹೋಗಲಿ, ಅಲ್ಲಿನ 'ಸ್ವರ್ಗ'ದಲ್ಲಿ ಆರಾಮವಾಗಿ ಜೀವನ ಮಾಡಲಿ ಎಂದಿದ್ದಾರೆ ಹಿರಿಯ ನಟ ಅನಂತ್‌ನಾಗ್.

    Recommended Video

    ಆಫ್ಘಾನಿಸ್ತಾನ ತುಂಬಾ ಚೆನ್ನಾಗಿದೆ ಭಾರತದ ಕೇಲವು ನಟರು ಅಲ್ಲಿಗೆ ಹೋಗಿ

    ಖಾಸಗಿ ಮಾಧ್ಯಮದೊಟ್ಟಿಗೆ ಅಫ್ಘಾನಿಸ್ತಾನ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಕುರಿತು ಅಭಿಪ್ರಾಯ ಹಂಚಿಕೊಳ್ಳುತ್ತಾ ಅನಂತ್‌ನಾಗ್ ಮೇಲಿನಂತೆ ಹೇಳಿದ್ದಾರೆ.

    ಅಫ್ಘಾನಿಸ್ತಾನದ ಜನರ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾ, ''ಆ ಉಗ್ರರಿಂದ ತಪ್ಪಿಸಿಕೊಳ್ಳಲು ಆ ಜನ ತಮ್ಮ ಕುಟುಂಬದವರನ್ನೂ ಹಿಂದೆ ಬಿಟ್ಟು ಹೇಗಾದರೂ ಇಲ್ಲಿಂದ ಪಾರಾಗಬೇಕು ಎಂಬ ಧಾವಂತದಲ್ಲಿ ವಿಮಾನಗಳ ಹಿಂದೆ ಓಡುತ್ತಿದ್ದಾರೆ. ವಿಮಾನಗಳಿಗೆ ತಮ್ಮನ್ನು ಕಟ್ಟಿಕೊಂಡು ಹಾರಲು ಯತ್ನಿಸುತ್ತಿದ್ದಾರೆ. ವಿಮಾನದಿಂದ ಕೆಳಗೆ ಬಿದ್ದು ಜನ ಸತ್ತಿದ್ದಾರೆ'' ಎಂದು ಅನಂತ್‌ನಾಗ್ ತಾವು ಮಾಧ್ಯಮಗಳಲ್ಲಿ ಕಂಡದ್ದನ್ನು ವಿವರಿಸಿದ್ದಾರೆ.

    180 ದಿನದ ವೀಸಾ ಕೊಡುತ್ತಿದ್ದಾರೆ ಮೋದಿ: ಅನಂತ್‌ನಾಗ್

    180 ದಿನದ ವೀಸಾ ಕೊಡುತ್ತಿದ್ದಾರೆ ಮೋದಿ: ಅನಂತ್‌ನಾಗ್

    ''ಇಂಥಹಾ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಕೈಲಾದದನ್ನು ಮಾಡಬೇಕು ಅಂತಲೇ ಮೋದಿ ಅವರು ಎಲ್ಲರಿಗೂ ವೀಸಾ, ಮುಸಲ್ಮಾನರಿಗೆ 180 ದಿನದ ವೀಸಾ ಕೊಡುತ್ತೇವೆ ಎಂದು ಘೋಷಿಸಿದ್ದಾರೆ. ಹಾಗಾಗಿ ನಾವು ಆಶಾದಾಯಕವಾಗಿ ಇರೋಣ. ಇನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಖಂಡಿತ ಇದೆ ಆದರೆ ಈ ವಿಷಯ ನಮ್ಮ ಭದ್ರತಾ ಮುಖ್ಯಸ್ಥರಿಗೂ ತಿಳಿದಿದೆ ಅದಕ್ಕೆ ಸೂಕ್ತಕ್ರಮವನ್ನು ಅವರು ತೆಗೆದುಕೊಳ್ಳುತ್ತಾರೆ. ಹಿಂದೆ ಏನು ಆಗಬೇಕಾದದ್ದು ಆಗಿರಲಿಲ್ಲವೊ ಅದು ಮೋದಿ ಅವರ ನೇತೃತ್ವದಲ್ಲಿ ಆಗುತ್ತದೆ, ಮೋದಿ ಮಾಡಿ ತೋರಿಸುತ್ತಾರೆ ಎಂಬ ನಂಬಿಕೆ ನನ್ನದು ಎಂದಿದ್ದಾರೆ ಅನಂತ್‌ನಾಗ್.

    ಆತುರದಲ್ಲಿ ನೀರು ಸುರಿಯುವ ಅಗತ್ಯವೂ ಇಲ್ಲ: ಅನಂತ್‌ನಾಗ್

    ಆತುರದಲ್ಲಿ ನೀರು ಸುರಿಯುವ ಅಗತ್ಯವೂ ಇಲ್ಲ: ಅನಂತ್‌ನಾಗ್

    ''ತಾಲಿಬಾನಿಗಳು ಹೇಳುತ್ತಿದ್ದಾರೆ ನಾವು ಹಿಂದಿನ ಥರಹ ಇಲ್ಲ, ನಾವು ಬದಲಾಗಿದ್ದೀವಿ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡ್ತೀವಿ. ಹೆಣ್ಣು ಮಕ್ಕಳನ್ನು ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳೋದಿಲ್ಲ ಎಂದು ಆಶ್ವಾಸನೆ ಕೊಟ್ಟಿದ್ದಾರೆ. ಮಿಶ್ರ ಸರ್ಕಾರ ಮಾತುಗಳು ಸಹ ಅಲ್ಲಿ ನಡೆಯುತ್ತಿವೆ. ಜಗತ್ತಿನಿಂದ ತಾಲಿಬಾನಿಗಳಿಗೆ ವ್ಯಕ್ತವಾಗುತ್ತಿರುವ ವಿರೋಧವನ್ನು ಅಳಿಸಲು ಅದು ಸಹಕಾರಿಯಾಗುತ್ತದೆ ಎಂಬ ಸಲಹೆಯನ್ನು ತಾಲಿಬಾನಿಗಳಿಗೆ ನೀಡಿದ್ದಾರೆ. ನಾವೇನೂ ಈ ವಿಷಯದ ಬಗ್ಗೆ ಭಾರಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಪಕ್ಕದಲ್ಲೇ ಬೆಂಕಿ ಬಿದ್ದು ನಾವು ಅದಕ್ಕೆ ನೀರು ಸುರಿಯುವ ಸ್ಥಿತಿ ಈಗೇನಿಲ್ಲ'' ಎಂದು ಅನಂತ್‌ನಾಗ್ ಹೇಳಿದ್ದಾರೆ.

    ಇಲ್ಲಿ ಇರಲಾರದ ನಟರು ಅಫ್ಘಾನಕ್ಕೆ ಹೋಗಲಿ: ಅನಂತ್‌ನಾಗ್

    ಇಲ್ಲಿ ಇರಲಾರದ ನಟರು ಅಫ್ಘಾನಕ್ಕೆ ಹೋಗಲಿ: ಅನಂತ್‌ನಾಗ್

    ''ತಾಲಿಬಾನಿಗಳೇ ಸೃಷ್ಟಿಸಿರುವ ಸ್ವರ್ಗದಲ್ಲಿ ಅವರಷ್ಟೆ ಇದ್ದು ಬಿಡಲಿ'' ಎಂಬ ನಿರೂಪಕನ ಮಾತಿಗೆ ವ್ಯಂಗ್ಯವಾಗಿಯೇ ಪ್ರತಿಕ್ರಿಯಿಸಿದ ನಟ ಅನಂತ್‌ನಾಗ್, ''ಇಲ್ಲಿ ಕೆಲವು ನಟರು ಹೇಳಿದ್ದಾರಲ್ಲ, ಇಲ್ಲಿ ನಮಗೆ ಸೆಕ್ಯುರಿಟಿ ಇಲ್ಲ, ಭಾರತದಲ್ಲಿ ಇರಲು ಭಯವಾಗ್ತಿದೆ ಅಂತ. ಅಂಥಹವರು ಆರಾಮವಾಗಿ ಅಫ್ಘಾನಿಸ್ತಾನಕ್ಕೆ ಹೋಗಿ ಅಲ್ಲಿರಬಹುದು'' ಎಂದಿದ್ದಾರೆ ನಟ ಅನಂತ್‌ನಾಗ್. ಕೆಲ ವರ್ಷಗಳ ಹಿಂದೆ ನಟ ಅಮೀರ್ ಖಾನ್ ''ದೇಶದಲ್ಲಿ ಅಹಿಷ್ಣುತೆ ಇದೆ ಬೇರೆ ದೇಶಕ್ಕೆ ಹೋಗೋಣವೆಂದು ಪತ್ನಿ ಹೇಳಿದ್ದರು. ಆದರೆ ನಾನು ಇಲ್ಲಿಯೇ ಇರೋಣವೆಂದೆ'' ಎಂದಿದ್ದರು. ಅಮೀರ್ ಖಾನ್ ಮಾತಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

    ಮೋದಿಯ ನಾಯಕತ್ವದಲ್ಲಿ ಅನಂತ್‌ನಾಗ್‌ಗೆ ನಂಬಿಕೆ

    ಮೋದಿಯ ನಾಯಕತ್ವದಲ್ಲಿ ಅನಂತ್‌ನಾಗ್‌ಗೆ ನಂಬಿಕೆ

    ನಟ ಅನಂತ್‌ನಾಗ್ ಈ ಹಿಂದೆ ರಾಮ ಮಂದಿರ, ಕಾಶ್ಮೀರ ವಿವಾದ, ಸಿಎಎ-ಎನ್‌ಆರ್‌ಸಿ ಬಗ್ಗೆಯೂ ಮಾತನಾಡಿದ್ದಾರೆ. ಹಿಂದುಗಳನ್ನು ಕಾಶ್ಮೀರದಿಂದ ಓಡಿಸಲಾಗಿತ್ತು, ಪಂಡಿತರಿಂದ ಕಾಶ್ಮೀರವನ್ನು ಕಿತ್ತುಕೊಳ್ಳಲಾಗಿತ್ತು ಎಂದಿದ್ದ ಅನಂತ್‌ನಾಗ್, ನಮ್ಮ ಪೂರ್ವಜರು ಸಹ ಕಾಶ್ಮೀರದವರೇ ಅಲ್ಲಿಯ ಅನಂತ್‌ನಾಗ್ ಪ್ರದೇಶದಲ್ಲಿ ಅವರಿದ್ದರು ಹಾಗಾಗಿಯೇ ನನ್ನ ಹೆಸರು ಅನಂತ್‌ನಾಗ್‌ ಎಂದಿದೆ ಎಂದಿದ್ದರು. ಮೋದಿ ಬಗ್ಗೆ ಅಪಾರ ಗೌರವ ಹೊಂದಿರುವ ನಟ ಅನಂತ್‌ನಾಗ್, ಈ ಏಳು ದಶಕದಲ್ಲಿ ಏನು ನಡೆಯಬೇಕಾಗಿದ್ದಿದ್ದು ನಡೆಯಲಿಲ್ಲವೊ ಅದೆಲ್ಲವೂ ನರೇಂದ್ರ ಮೋದಿ ನಾಯಕತ್ವದಲ್ಲಿ ನಡೆಯುತ್ತದೆ ಎಂಬ ಭರವಸೆ ನನಗೆ ಇದೆ ಎಂದಿದ್ದರು ಅಲ್ಲದೆ ರಾಮಮಂದಿರ ನಿರ್ಮಾಣದ ಶ್ರೇಯ ಮೋದಿಗೆ ಸಲ್ಲಬೇಕು ಎಂದಿದ್ದರು. ತಮಗೆ ಮೋದಿಯಲ್ಲಿ ವಿಶ್ವಾಸವಿದ್ದು ಅವರೊಬ್ಬ ವಿಶ್ವನಾಯಕ ಎಂದು ಮೋದಿಯವನ್ನು ಅನಂತ್‌ನಾಗ್ ಬಣ್ಣಿಸಿದ್ದರು. ನಟ ಅನಂತ್‌ನಾದ್‌ಗೆ ಪದ್ಮ ಪ್ರಶಸ್ತಿ ನೀಡಬೇಕೆಂಬ ಒತ್ತಾಯ ಎಲ್ಲೆಡೆ ಕೇಳಿಬರುತ್ತಿದೆ. ಈ ಬಾರಿ ಸಿಗುವ ಸಾಧ್ಯತೆಯೂ ಇದೆ.

    English summary
    Actor Ananth Nag said actors who think India is not safe they can move to Afghanistan now.
    Wednesday, August 18, 2021, 19:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X