ನಟಿ ಮಾನ್ವಿತಾ ಕಾಮತ್ ತಾಯಿ ಇನ್ನಿಲ್ಲ; ಎಷ್ಟೇ ಖರ್ಚು ಮಾಡಿದ್ರೂ ಉಳಿಯಲಿಲ್ಲ ಸುಜಾತಾ ಕಾಮತ್

Actrees Manvitha Kamath mother Sujatha Kamath passed away

ಕನ್ನಡ ಚಲನಚಿತ್ರರಂಗದ ನಟಿ ಮಾನ್ವಿತಾ ಕಾಮತ್ ಅವರ ತಾಯಿ ಸುಜಾತಾ ಕಾಮತ್ ಅವರು ಇಂದು ( ಏಪ್ರಿಲ್ 15 ) ನಿಧನ ಹೊಂದಿದ್ದಾರೆ. ಉಸಿರಾಟದ ತೊಂದರೆ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಾನ್ವಿತಾ ಅವರ ತಾಯಿ ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ.

ಬದುಕಿದ್ದಾಗಲೇ ಸುಜಾತಾ ಕಾಮತ್ ಅವರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದ ಕಾರಣ ಇದೀಗ ಅಂಗಾಂಗ ದಾನದ ಕಾರ್ಯಗಳು ನಡೆಯುತ್ತಿದ್ದು, ಆ ಬಳಿಕ ಅಂತಿಮ ವಿದಿವಿಧಾನ ಕಾರ್ಯಗಳು ನಡೆಯಲಿವೆ. ಇನ್ನು ಕಳೆದ ವರ್ಷವೂ ಸಹ ಸುಜಾತಾ ಕಾಮತ್ ಅವರು ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಂಡಿದ್ದರು.

ಆ ಸಂದರ್ಭದಲ್ಲಿ ಇನ್ಸೂರೆನ್ಸ್ ಸಮಸ್ಯೆ ಎದುರಿಸಿದ್ದ ಮಾನ್ವಿತಾ ಕಾಮತ್‌ಗೆ ನಟ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಿರ್ಮಾಪಕ ಕೆಪಿ ಶ್ರೀಕಾಂತ್ ಸಹಾಯ ಮಾಡಿದ್ದರು. ಅಲ್ಲದೇ ಬಾಲಿವುಡ್ ನಟ ಸೋನು ಸೂದ್ ಸಹ ತಮ್ಮ ಸೋನು ಸೂದ್ ಫೌಂಡೇಷನ್ ಮೂಲಕ ಮಾನ್ವಿತಾ ಕಾಮತ್ ಅವರ ತಾಯಿಯ ಚಿಕಿತ್ಸೆಗೆ ಸಹಾಯ ಮಾಡಿದ್ದರು.

ಮಾನ್ವಿತಾ ಕಾಮತ್ ತಮ್ಮ ತಾಯಿಗೆ ಇರುವ ಕಿಡ್ನಿ ಸಮಸ್ಯೆಯ ಕುರಿತು ವಾಟ್ಸಪ್ ಸ್ಟೇಟಸ್ ಹಾಕಿ ಉತ್ತಮ ವೈದ್ಯರ ಸಲಹೆ ನೀಡಿ ಎಂದು ಬರೆದುಕೊಂಡಿದ್ದನ್ನು ಕಂಡಿದ್ದ ಸೋನು ಸೂದ್ ಫೌಂಡೇಷನ್‌ನ ಸದಸ್ಯ, ಮಂಗಳೂರು ಮೂಲದ ಓರ್ವ ವ್ಯಕ್ತಿ ಈ ವಿಷಯವನ್ನು ಸೋನು ಸೂದ್ ಅವರಿಗೆ ತಿಳಿಸಿದ್ದರು. ಈ ಮೂಲಕ ಸೋನು ಸೂದ್ ಮಾನ್ವಿತಾ ಕಾಮತ್ ಅವರ ತಾಯಿ ಚಿಕಿತ್ಸೆಗೆ ನೆರವಿನ ಹಸ್ತ ಚಾಚಿದ್ದರು.

ಸೋನು ಸೂದ್ ಫೌಂಡೇಷನ್ ಕಡೆಯಿಂದ ತಮಗೆ ಆದ ಸಹಾಯದ ಬಗ್ಗೆ ಮಾನ್ವಿತಾ ಫಿಲ್ಮೀ ಬೀಟ್ ಜೊತೆ ಮಾತನಾಡಿದ್ದರು. ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯಲ್ಲಿ ಮಾನ್ವಿತಾ ತಾಯಿಗೆ ಚಿಕಿತ್ಸೆಯನ್ನು ಕೊಡಿಸಲಾಯಿತು. ಸೋನು ಸೂದ್ ಫೌಂಡೇಶನ್ ಮಾನ್ವಿತಾ ಸಹಾಯಕ್ಕೆ ಬಂದಿರುವುದು ಬಹಳ ದೊಡ್ಡ ಅನುಕೂಲವಾಯಿತು ಎಂದು ಹೇಳಿಕೊಂಡಿದ್ದರು. ಮಾನ್ವಿತಾ ತಾಯಿಗೆ ಡಯಾಲಿಸಿಸ್ ಕೂಡ ಮಾಡಿಸುವ ಅಗತ್ಯತೆ ಇದೆ. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಅವರ ತಾಯಿ ಅನಾರೋಗ್ಯಕ್ಕೀಡಾಗಿದ್ದು, ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಖರ್ಚು ಬರುತ್ತಿದೆಯಂತೆ. ಹಾಗಾಗಿ ಇದೀಗ ಸೋನು ಸೂದ್ ಫೌಂಡೇಶನ್ ಮಾಡಿರುವ ಸಹಾಯ ಬಹಳ ದೊಡ್ಡದು ಎಂದು ಮಾನ್ವಿತಾ ಹೇಳಿಕೊಂಡಿದ್ದರು.

More from Filmibeat

English summary
Actrees Manvitha Kamath mother Sujatha Kamath passed away
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X