ಸಂಜನಾ ಗಲ್ರಾನಿ ಮಗನ ಹೆಸರು 'ಅಲಾರಿಕ್': ಹೆಸರಿನ ಅರ್ಥವೇನು?

ನಟಿ ಸಂಜನಾ ಗಲ್ರಾನಿ ಸದ್ಯ ಕುಟುಂದಲ್ಲಿ ಸಿಕ್ಕಪಟ್ಟೆ ಬ್ಯುಸಿಯಾಗಿದ್ದಾರೆ. ಸಿನಿಮಾ, ಅಭಿನಯ ಎಲ್ಲವನ್ನೂ ಬಿಟ್ಟು, ಈಗ ಸಂಜನಾ ಗಲ್ರಾನಿ ತಮ್ಮ ಕೌಟುಂಬಿಕ ಜೀವನದಲ್ಲಿ ಮನೆ ಮಕ್ಕಳು ಅಂತ ತುಂಬಾ ಬ್ಯುಸಿಯಾಗಿ ಇದ್ದಾರೆ. ಇನ್ನು ಇತ್ತೀಚೆಗೆ ಗಂಡು ಮಗುವಿಗೆ ಸಂಜನಾ ಗಲ್ರಾನಿ ಜನ್ಮ ನೀಡಿದ್ದರು.

ಸಂಜನಾ ಗಲ್ರಾನಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ತಮ್ಮ ಮಗುನಿನ ವಿಡಿಯೋ, ಫೋಟೊಗಳನ್ನು ಕೂಡ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಮಗು ಆದ ಬಳಿಕ ಸಂಜನಾ ಒಂದಲ್ಲಾ ಒಂದು ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ.

ಸದ್ಯ ಸಂಜನಾ ತಮ್ಮ ಮಗು ನಾಮಕರಣ ಮಾಡಿದ್ದಾರೆ. ಮಗುಗೆ ಹೆಸರನ್ನೂ ಇಟ್ಟಿದ್ದಾರೆ. ಸಂಜನಾ ಮಗುಗೆ ಹೆಸರು ಇಟ್ಟಿರುವ ಬಗ್ಗೆ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಹೆಸರೇನು? ಆ ಹೆಸರಿನ ಅರ್ಥವೇನು? ಎನ್ನುವುದನ್ನು ಮುಂದೆ ಓದಿ....

ಮಗುವಿನ ಮುದ್ದು ವಿಡಿಯೋ ಹಂಚಿಕೆ!

ಸಂಜನಾ ಗಲ್ರಾನಿ ತಮ್ಮ ಮಗನಿಗೆ ಹೆಸರಿಟ್ಟಿರುವ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. ಸಂಜನಾ ಗಲ್ರಾನಿ ತಮ್ಮ ಪತಿ ಮತ್ತು ಮಗು ಇರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಗು ಮುಖವನ್ನು ಬ್ಲರ್ ಮಾಡಲಾಗಿದ್ದು, ಪತಿ ಮಗು ಉಗುರು ಕಟ್ ಮಾಡುತ್ತಿದ್ದಾರೆ. ಇದರ ಜೊತೆಗೆ ಪೋಸ್ಟ್ ಹಂಚಿಕೊಂಡು ಹೆಸರು ರಿವೀಲ್ ಮಾಡಿದ್ದಾರೆ.

ಸಂಜನಾ ಗಲ್ರಾನಿ ಮಗು ಹೆಸರು 'ಅಲಾರಿಕ್'!

ನಟಿ ಸಂಜನಾ ಗಲ್ರಾನಿ ಗಂಡು ಮಗುವಿಗೆ ಜನ್ಮ ನೀಡಿ ತಿಂಗಳು ಕಳೆದಿದೆ. ಒಂದು ತಿಂಗಳ ಬಳಿಕ ಮಗುವಿನ ನಾಮಕರಣ ಮಾಡಲಾಗಿದೆ. ಸಂಜನಾ ಗಲ್ರಾನಿ ಮಗನ ಹೆಸರು 'ಅಲಾರಿಕ್' ಎಂದು ಇಡಲಾಗಿದೆ. ಈ ವಿಚಾರವನ್ನು ಸಂಜನಾ ಗಲ್ರಾನಿ ರಿವೀಲ್ ಮಾಡಿದ್ದಾರೆ. ಮಗನಿಗಾಗಿ ಹೊಸ ಇನ್‌ಸ್ಟಾಗ್ರಾಂ ಖಾತೆಯನ್ನು ತೆರೆಯಲಾಗಿದೆ. ಪ್ರಿನ್ಸ್ ಅಲಾರಿಕ್ ಎಂದು ಈ ಖಾತೆಗೆ ನಾಮಕರಣ ಮಾಡಲಾಗಿದೆ. ಜೊತೆಗೆ ಈ ಪೋಸ್ಟ್‌ ಮೂಲಕ ಮಗು ತನ್ನನ್ನು ತಾನೇ ಪರಿಚಯಿಸಿಕೊಂಡ ಹಾಗೆ ಬರೆಯಲಾಗಿದೆ.

ಅಲಾರಿಕ್ ಅರ್ಥವೇನು?

"ಇಂದು ನನ್ನನ್ನು ನಾನು ಪರಿಚಯಿಸಿಕೊಳ್ಳುತ್ತಿದ್ದೇನೆ. ನನ್ನ ಹೆಸರು 'ಅಲಾರಿಕ್'. ನನಗೆ ಒಂದು ತಿಂಗಳು. ನಾನು ಇನ್‌ಸ್ಟಾಗ್ರಾಂಗೆ ಹೊಸಬ. ನನ್ನ ಈ ಖಾತೆಯನ್ನು ನನ್ನ ಅಮ್ಮ ನೋಡಿಕೊಳ್ಳುತ್ತಾರೆ." ಎಂದು ಬರೆಯಲಾಗಿದೆ. ಇನ್ನು ಅಲಾರಿಕ್ ಎನ್ನುವ ಹೆಸರಿನ ಅರ್ಥ ಹುಡುಕಿದರೆ. ಅಲಾರಿಕ್ ಎಂದರೆ ಒಬ್ಬ ಉದಾತ್ತ ಆಡಳಿತಗಾರ ಎನ್ನುವ ಅರ್ಥ ಬರುತ್ತದೆ.

ಸಂಜನಾ ಗಲ್ರಾನಿ ಕಮ್‌ಬ್ಯಾಕ್ ಯಾವಾಗ?

ಸದ್ಯ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿ ಇರುವ ನಟಿ ಸಂಜನಾ ಗಲ್ರಾನಿ ಮತ್ತೆ ಸಿನಿಮಾ ಮಾಡುತ್ತಾರಾ ಇಲ್ಲವ ಎನ್ನುವ ಬಗ್ಗೆ ಸುಳಿವು ಕೊಟ್ಟಿಲ್ಲ. ಆದರೆ ಸದಾ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಆ್ಯಕ್ಟಿವ್ ಆಗಿ ಇರುತ್ತಾರೆ. ತೆಲುಗು ಚಿತ್ರಗಳಲ್ಲಿ ಅಭಿಯಿಸಿರುವ ಸಂಜನಾ ಬ್ರೇಕ್ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿದರೂ, ಮಾಡ ಬಹುದು.

More from Filmibeat

English summary
Actres Sanjjanaa Galrani Baby Boy Got Name, Its Alarik, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X