ಅಮ್ಮನ ಬಗ್ಗೆ ನಿಂದನೆ ಬೇಡ: ಮನವಿ ಮಾಡಿದ ಶ್ರುತಿ ಮಗಳು
Recommended Video
ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಮಗಳು ಗೌರಿ ಈಗ ಸಿಕ್ಕಾಪಟ್ಟೆ ಚರ್ಚೆಯಲಿದ್ದಾರೆ. ಗೌರಿ ಇನ್ನು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿಲ್ಲ ಆಗಲೆ ಅವರ ಬಗ್ಗೆ ಏನು ಸುದ್ದಿ ಅಂತ ಅಂದ್ಕೋತ್ತಿದ್ದೀರಾ. ಆದ್ರೆ ಕಳೆದೆರಡು ದಿನಗಳಿಂದ ಶ್ರುತಿ ಅವರ ಪುತ್ರಿ ಗೌರಿ ಸಖತ್ ಸುದ್ದಿಯಲ್ಲಿದ್ದಾರೆ.
ಇದಕ್ಕೆ ಕಾರಣವಾಗಿದ್ದು, ಗೌರಿ ಅವರ ಅಪ್ಪ ಎಸ್.ಮಹೆಂದರ್ ಅವರಿಗೆ ಕಳುಹಿಸಿದ ಭಾವನಾತ್ಮಕ ಸಂದೇಶ. ಮಹೇಂದರ್ ಹುಟ್ಟುಹಬ್ಬಕ್ಕೆ ಮಗಳು ಗೌರಿ ಸಾಮಾಜಿಕ ಜಾಲತಾಣದ ಮೂಲಕ ಅಪ್ಪನ ಪ್ರೀತಿ ಮತ್ತು ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳಿಕೊಂಡಿದ್ದರು.
ಆದ್ರೆ ಈ ಸಂದೇಶ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಯಾಕಂದ್ರೆ ಇದಕ್ಕೆಲ್ಲ ಕಾರಣ ಶ್ರುತಿ ಅವರು, ಮಗಳ ಭಾವನೆ ಶ್ರುತಿ ಅವರಿಗೆ ಅರ್ಥ ಆಗುವುದಿಲ್ಲ ಎಂದು ಶ್ರುತಿ ವಿರುದ್ಧ ತರಹೇವಾರಿ ಕಮೆಂಟ್ಸ್ ಗಳನ್ನು ಹರಿಬಿಟ್ಟಿದ್ದಾರೆ. ಇದನ್ನ ಗಮನಿಸಿದ ಮಗಳು, ಅಮ್ಮನ ಬಗ್ಗೆ ಕೆಟ್ಟದಾಗಿ ಮಾತನಾಡ ಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮುಂದೆ ಓದಿ..

ಶ್ರುತಿ ವಿರುದ್ಧ ನೆಟ್ಟಿಗರ ಅಸಮಾಧಾನ
ಹಿರಿಯ ನಟಿ ಶ್ರುತಿ ವಿರುದ್ಧ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಮಗಳ ಭಾವನೆಗಳು ಶ್ರುತಿ ಅವರಿಗೆ ಅರ್ಥ ಆಗುತ್ತಿಲ್ಲ ಎಂದು ಶ್ರುತಿ ಅವರನ್ನು ಬಾಯಿಗೆ ಬಂದ ಹಾಗೆ ನಿಂದಿಸುತ್ತಿದ್ದಾರೆ. ಮಹೆಂದರ್ ಒಳ್ಳೆಯವರು, ಮಹೇಂದರ್ ದೂರ ಆಗಲು ಕಾರಣ ಶ್ರುತಿ ಅವರೆ ಎಂದು ಶ್ರುತಿ ವಿರುದ್ಧ ಕಮೆಂಟ್ಸ್ ಗಳ ಸುರಿಮಳೆಯೆ ಹರಿಬಿಡುತ್ತಿದ್ದಾರೆ.

ದಯವಿಟ್ಟು ಅಮ್ಮನ ಬಗ್ಗೆ ಮಾತನಾಡಬೇಡಿ
"ಇತ್ತೀಚಿಗೆ ಅಪ್ಪನ ಹುಟ್ಟುಹಬ್ಬದ ಬಗ್ಗೆ ಒಂದು ಪೋಸ್ಟ್ ಹಾಕಿದ್ದೆ. ಆದ್ರೆ ಅದೂ ಸಖತ್ ವೈರಲ್ ಆಗಿದೆ. ಆದ್ರೆ ನಾನು ಕೆಲವು ಕಮೆಂಟ್ಸ್ ಗಳನ್ನು ನೋಡಿದೆ. ಅದನ್ನು ನೋಡಿ ನನಗೆ ತುಂಬಾ ಬೇಸರ ಆಗಿದೆ. ನನ್ನ ಅಮ್ಮನ ಬಗ್ಗೆ ಕಮೆಂಟ್ಸ್ ಮಾಡುವುದನ್ನು ದಯವಿಟ್ಟು ನಿಲ್ಲಿಸಿ. ಅವರೇ ನನ್ನನ್ನು ಅಪ್ಪನ ಭೇಟಿ ಮಾಡಲು ಕಳುಹಿಸುವುದೆ ಅಮ್ಮ. ಅಪ್ಪನಿಗೆ ಕರೆ ಮಾಡಲು ನೆನಪಿಸುವುದೆ ಅಮ್ಮ. ನಾನು ಮಾಡಿರುವ ಪೋಸ್ಟ್ ಅಪ್ಪನ ಬಗ್ಗೆ ಇದ್ದ ಪ್ರೀತಿಯನ್ನು ತಿಳಿಸುತ್ತದ್ದೆಯೋ ಹೊರತು ಅಮ್ಮನ ಬಗ್ಗೆ ಇರುವ ದ್ವೇಷವನ್ನಲ್ಲ" ಎಂದು ಅಮ್ಮನಿಗೆ ನೋವಿನ ಬೇಡಿ ಎಂದು ಹೇಳಿಕೊಂಡಿದ್ದಾರೆ.

ಸತ್ಯ ಗೊತ್ತಿಲ್ಲದೆ ಮಾತನಾಡಬೇಡಿ
"ತಂದೆ ನನ್ನ ಹುಟ್ಟಿಗೆ ಮಾತ್ರ ಕಾರಣರಾಗಿದ್ದಾರೆ. ಆದ್ರೆ ಅಂದಿನಿಂದ ನನ್ನನ್ನು ನೋಡಿಕೊಳ್ಳುತ್ತಿರುವುದು ನನ್ನ ಅಮ್ಮ. ಅಮ್ಮನ ಬಗ್ಗೆ ಗೊತ್ತಿಲ್ಲದೆ ಮಾತನಾಡುವುದು ತಪ್ಪಾಗುತ್ತೆ. ನಾನು ಅವರಿಬ್ಬರನ್ನು ಸಮಾನವಾಗಿ ಪ್ರೀತಿಸುತ್ತೇನೆ. ನಿಮಗೆ ಸತ್ಯ ತಿಳಯದಿದ್ದರೆ, ಇನ್ನೊಬ್ಬರ ಜೀವನದ ಬಗ್ಗೆ ಸುಮ್ಮನೆ ಕಮೆಂಟ್ಸ್ ಗಳನ್ನು ಮಾಡಬೇಡಿ. ಧನ್ಯವಾದಗಳು" ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಪ್ಪನಿಗೆ ಭಾವನಾತ್ಮಕ ಸಂದೇಶ ಕಳುಹಿಸಿದ್ದ ಗೌರಿ
"ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನೀನು ಯಾವಾಗಲು ನನ್ನ ಮೊದಲ ಪ್ರೀತಿ ಮತ್ತು ನನ್ನ ನೆಚ್ಚಿನ ನಾಯಕ. ನನ್ನ ನಿಮ್ಮ ನಡುವೆ ಇರುವ ಪ್ರೀತಿ ಮತ್ತು ಬಾಂಧವ್ಯವನ್ನು ಯಾರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಮತ್ತೆ ನಿನ್ನ ಜೊತೆ ಹೆಚ್ಚು ಕಾಲ ಕಳೆಯುವಂತಹ ಅವಕಾಶವನ್ನು ಈ ಬದುಕು ಒದಗಿಸಿಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ಪದಗಳಲ್ಲಿ ಹೇಳದಷ್ಟು ನಿನ್ನನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅತೀ ಶೀಘ್ರದಲ್ಲೆ ನಿಮ್ಮೊಂದಿಗೆ ಕಾಲ ಕಳೆಯಲು ಕಾಯುತ್ತೀದ್ದೀನಿ" ಎಂದು ಅಪ್ಪನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು ಗೌರಿ.


Click it and Unblock the Notifications











