'ಪೈಲ್ವಾನ್' ಹಾಡಿನೊಂದಿಗೆ ಜಾಲಿ ರೈಡ್ ಮಾಡಿದ ಆಕಾಂಕ್ಷ
'ಪೈಲ್ವಾನ್' ಸಿನಿಮಾದ 'ಕಣ್ಣು ಮಣಿಯೇ... ಕಣ್ಣು ಹೊಡಿಯೇ..' ಹಾಡು ಹಿಟ್ ಆಗಿದೆ. ಈ ಹಾಡು ಒಂದು ಮಿಲಿಯನ್ ಗೂ ಅಧಿಕ ಹಿಟ್ಸ್ ಪಡೆದುಕೊಂಡಿದೆ.
ಈ ಹಾಡಿನಲ್ಲಿ ನಟಿ ಆಕಾಂಕ್ಷ ಸಿಂಗ್ ರನ್ನು ಕಣ್ಮಣಿ ಎಂದು ಹೊಗಳಲಾಗಿದೆ. ಹಾಡಿನ ಮೂಲಕ ತಮ್ಮನ್ನು ಈ ರೀತಿ ವರ್ಣಿಸಿದರೆ ಯಾವ ಹುಡುಗಿಗೆ ತಾನೇ ಇಷ್ಟ ಆಗಲ್ಲ. ಅದೇ ರೀತಿ ನಟಿ ಆಕಾಂಕ್ಷ ಸಿಂಗ್ ಗೆ ಕೂಡ ಹಾಡು ಬಲು ಇಷ್ಟ ಆಗಿದೆ.
ತಮ್ಮ ಹೊಸ ಹಾಡಿನ ಮೇಲೆ ಆಕಾಂಕ್ಷಗೆ ಲವ್ ಆಗಿದೆ. ಹಾಡಿನ ಜೊತೆಗೆ ಕಾರ್ ನಲ್ಲಿ ಜಾಲಿ ರೈಡ್ ಹೋಗಿದ್ದಾರೆ. 'ಕಣ್ಣು ಮಣಿಯೇ... ಕಣ್ಣು ಹೊಡಿಯೇ..' ಅಂತ ಕಾರ್ ನಲ್ಲಿಯೇ ತಳ ಹಾಕುತ್ತಿದ್ದಾರೆ. ಈ ವಿಡಿಯೋವನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅರ್ಜುನ್ ಜನ್ಯ ಈ ಹಾಡಿಗೆ ಸಂಗೀತ ನೀಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. 'ಪೈಲ್ವಾನ್' ಕಿಚ್ಚ ಸುದೀಪ್ ಅಭಿನಯ ಸಿನಿಮಾವಾಗಿದೆ.
ಈಗಾಗಲೇ, ಹಿಂದಿ ಶೋ ಹಾಗೂ ತೆಲುಗು ಸಿನಿಮಾ ಮಾಡಿರುವ ಆಕಾಂಕ್ಷಗೆ ಇದು ಮೊದಲ ಕನ್ನಡ ಸಿನಿಮಾ ಆಗಿದೆ.
ವಿಡಿಯೋ ನೋಡಲು ಕ್ಲಿಕ್ ಮಾಡಿ
English summary
Pailwan kannada movie heroine Aakanksha Singh loved kannmaniye song.


Click it and Unblock the Notifications