ಪತಿಯ ಪ್ರೀತಿಯನ್ನು ಬಣ್ಣಿಸಿದ 'ಪೈಲ್ವಾನ್' ನಾಯಕಿ ಆಕಾಂಕ್ಷ

ಆಕಾಂಕ್ಷ ಸಿಂಗ್ ಈಗ ತಾನೇ ಕನ್ನಡ ಚಿತ್ರರಂಗಕ್ಕೆ ಬಂದಿರುವ ಮುದ್ದು ಚೆಲುವೆ. 'ಕಣ್ಣು ಮಣಿಯೇ.. ಕಣ್ಣು ಹೊಡೆಯೇ..' ಹಾಡಿನ ಮೂಲಕ ಗಮನ ಸೆಳೆದಿರುವ ಈಕೆ, ಕಣ್ಮಣಿ ಅಂತಲೇ ಫೇಮಸ್ ಆಗಿದ್ದಾರೆ.

'ಪೈಲ್ವಾನ್' ನಾಯಕಿ ಆಕಾಂಕ್ಷ ಸಿಂಗ್ ಕನ್ನಡಿಗರಿಗೆ ಹೊಸಬರು. ಹಾಗಾಗಿ ಅವರ ಬಗ್ಗೆ ಹೆಚ್ಚು ವಿಷಯಗಳು ಅನೇಕರಿಗೆ ತಿಳಿದಿಲ್ಲ. ಅವರಿಗೆ ಮದುವೆ ಆಗಿರುವ ಸಂಗತಿ ಕೂಡ ಸಾಕಷ್ಟು ಅಭಿಮಾನಿಗಳಿಗೆ ಗೊತ್ತಿಲ್ಲ. ಆಕಾಂಕ್ಷ ಸಿಂಗ್ ಇನ್ ಸ್ಟಾಗ್ರಾಮ್ ಖಾತೆಯನ್ನು ಫಾಲೋ ಮಾಡುತ್ತಿರುವವರಿಗೆ ಮಾತ್ರ ಈ ವಿಷಯ ಕಂಡಿರಬಹುದು.

ಅಂದಹಾಗೆ, ತಮ್ಮ ಪತಿಯ ಪ್ರೀತಿಯನ್ನು ನಟಿ ಆಕಾಂಕ್ಷ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಪದಗಳ ಮೂಲಕ ವರ್ಣಿಸಿದ್ದಾರೆ.

ಪತಿ ಬಗ್ಗೆ ಪ್ರೀತಿಯ ಮಾತುಗಳು

ಪತಿ ಬಗ್ಗೆ ಪ್ರೀತಿಯ ಮಾತುಗಳು

ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಪತಿ ಬಗ್ಗೆ ಬರೆದುಕೊಂಡಿರುವ ನಟಿ ಆಕಾಂಕ್ಷ ಸಿಂಗ್ ತಮ್ಮ ಸಾಲುಗಳ ಮೂಲಕ ಪ್ರೀತಿ ತೋರಿದ್ದಾರೆ. ''ಇವನಲ್ಲಿ ಏನು ವಿಶೇಷತೆ ಇದೆ ?, ಏನು ಇಲ್ಲ... ಆದರೆ, ಇವನಿಲ್ಲದೆ ಯಾವ ವಿಶೇಷತೆಯೂ ಇರುವುದಿಲ್ಲ'' ಎಂದು ತಮ್ಮ ಸಂಭ್ರಮದ ಕ್ಷಣದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸ್ಕೂಲ್ ನಲ್ಲಿಯೇ ಲವ್ ಆಗಿತ್ತು

ಸ್ಕೂಲ್ ನಲ್ಲಿಯೇ ಲವ್ ಆಗಿತ್ತು

ಆಕಾಂಕ್ಷ ಸಿಂಗ್ ಗೆ 10 ಕ್ಲಾಸ್ ಓದುವಾಗಲೇ ಪ್ರೀತಿ ಶುರು ಆಗಿತ್ತು. ತಮ್ಮ ಪತಿ ಕುನಾಲ್ ಸೈನ್ ರನ್ನು ಮೊದಲ ಬಾರಿಗೆ ಒಂದು ಪಾರ್ಟಿಯಲ್ಲಿ ಭೇಟಿ ಮಾಡಿದ್ದರು. ಆ ಪಾರ್ಟಿಯಲ್ಲಿ ಕುನಾಲ್ ಹಾಗೂ ಆಕಾಂಕ್ಷ ಸಹೋದರಿ ಆಂಕರ್ ಆಗಿದ್ದರು. ಪಾರ್ಟಿಯಲ್ಲಿ ಪರಿಚಯ ಆದ ಈ ಜೋಡಿ ನಂತರ ಒಬ್ಬರನ್ನಾದರು ಬಿಟ್ಟರದ ಮಟ್ಟಿಗೆ ಹತ್ತಿರ ಆದರು.

2014 ರಲ್ಲಿ ಲವ್ ಮ್ಯಾರೇಜ್

2014 ರಲ್ಲಿ ಲವ್ ಮ್ಯಾರೇಜ್

2007ರಲ್ಲಿ ಪರಿಚಯ ಆದ ಆಕಾಂಕ್ಷ ಸಿಂಗ್ ಹಾಗೂ ಕುನಾಲ್ ಸೈನ್ 2014 ರಲ್ಲಿ ಮದುವೆ ಆಗುವ ನಿರ್ಧಾರ ಮಾಡಿದರು. ಭೇಟಿ ಮಾಡಿದ ಮೊದಲ ವರ್ಷದ ಪ್ರೇಮಿಗಳ ದಿನದಂದು ಕುನಾಲ್ ಪ್ರಮೋಸ್ ಮಾಡಿದ್ದರು, ಆದರೆ, ಆಕಾಂಕ್ಷ ಮೌನವಾಗಿ ಇದ್ದರು. ಆದರೆ, ಮುಂದಿನ ವರ್ಷದ ಪ್ರೇಮಿಗಳ ದಿನಕ್ಕೆ ಕುನಾಲ್ ಪ್ರೀತಿಯನ್ನು ಆಕಾಂಕ್ಷ ಒಪ್ಪಿದರು. ಅಲ್ಲಿಂದ ಇಲ್ಲಿಗೆ ಇವರಿಬ್ಬರು ಮದುವೆಯಾಗಿ ನಾಲ್ಕು ವರ್ಷ ತುಂಬಿದೆ.

ಮದುವೆಯ ಬಳಿಕ ಸಿನಿಮಾ ಜರ್ನಿ ಶುರು

ಮದುವೆಯ ಬಳಿಕ ಸಿನಿಮಾ ಜರ್ನಿ ಶುರು

ನಟಿಯರಿಗೆ ಮದುವೆಯ ಬಳಿಕ ಸಿನಿಮಾ ಆಫರ್ ಗಳು ಸಿಗುವುದು ಕಷ್ಟ ಎಂಬ ಮಾತು ಇಂಡಸ್ಟ್ರಿಯಲ್ಲಿ ಇದೆ. ವಿಶೇಷ ಅಂದರೆ, ಆಕಾಂಕ್ಷ ತಮ್ಮ ಸಿನಿ ಕೆರಿಯರ್ ಶುರು ಮಾಡಿದ್ದೇ ಮದುವೆಯ ನಂತರ. ಆ ವರೆಗೆ ಹಿಂದಿ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಆಕಾಂಕ್ಷ, ಮದುವೆಯ ಬಳಿಕ 'ಬದ್ರಿನಾಥ್ ಕಿ ದುಲ್ಹನಿಯ' ಚಿತ್ರದಲ್ಲಿ ಪೋಷಕ ಪಾತ್ರ ಮಾಡಿದರು. ಈ ಮೂಲಕ ಚಿತ್ರರಂಗ ಪ್ರವೇಶಿಸಿದರು.

ಆಕಾಂಕ್ಷ ಈಗ ಕನ್ನಡದ ಕಣ್ಮಣಿ

ಆಕಾಂಕ್ಷ ಈಗ ಕನ್ನಡದ ಕಣ್ಮಣಿ

ಈವರೆಗೆ ಹಿಂದಿಯಲ್ಲಿ ಒಂದು ಸಿನಿಮಾ ಹಾಗೂ ಎರಡು ತೆಲುಗು ಸಿನಿಮಾ ಮಾಡಿರುವ ಆಕಾಂಕ್ಷ ಸಿಂಗ್ ಈಗ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ 'ಪೈಲ್ವಾನ್' ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖಾತೆ ತೆರೆದಿದ್ದಾರೆ. ಚಿತ್ರದ ಹಾಡಿನ ಮೂಲಕ 'ಕಣ್ಮಣಿ' ಎಂದೇ ಜನಪ್ರಿಯತೆ ಪಡೆದಿದ್ದಾರೆ.

More from Filmibeat

English summary
Pailwan kannada movie heroine Aakanksha Singh shared her husband photo in instagram account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X