»   » 'ರಣವಿಕ್ರಮ' ನಟಿ ಅದಾ ಶರ್ಮಾಗೆ 'ಕಿಸ್ ಕೊಡು' ಎಂದ ಅಭಿಮಾನಿ!

'ರಣವಿಕ್ರಮ' ನಟಿ ಅದಾ ಶರ್ಮಾಗೆ 'ಕಿಸ್ ಕೊಡು' ಎಂದ ಅಭಿಮಾನಿ!

Posted By:
Subscribe to Filmibeat Kannada
ರಣವಿಕ್ರಮದಲ್ಲಿ ನಟಿಸಿದ ನಟಿ ಅದಾ ಶರ್ಮಾ ಕಿಸ್ ವಿವಾದ | Filmibeat Kannada

ಸಿನಿಮಾ ನಟಿಯರಿಗೆ ಕೆಲವು ಬಾರಿ ಕೆಲವು ಅಭಿಮಾನಿಗಳು ಕಿರಿಕಿರಿ ಉಂಟು ಮಾಡುತ್ತಾರೆ. ಅಭಿಮಾನಿಗಳಿಂದ ಆಗುವ ಕೆಲವು ವರ್ತನೆಗಳು ನಟಿಯರಿಗೆ ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಈಗ ಅದೇ ರೀತಿಯ ಘಟನೆ ನಡೆದಿದೆ.

ನಟಿ ಅದಾ ಶರ್ಮಾ ದಕ್ಷಿಣ ಭಾರತದ ಜನಪ್ರಿಯ ನಟಿ. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ 'ರಣವಿಕ್ರಮ' ಸಿನಿಮಾದಲ್ಲಿಯೂ ಅದಾ ಶರ್ಮಾ ನಟಿಸಿದ್ದರು. ಸಾಮಾನ್ಯವಾಗಿ ಅದಾ ಶರ್ಮ ಯಾವುದೇ ವಿವಾದಗಳನ್ನು ಮಾಡಿಕೊಳ್ಳುವುದಿಲ್ಲ. ಆದರೆ ಈಗ ಈ ನಟಿಗೆ ಅಭಿಮಾನಿಯೊಬ್ಬ ಕಿಸ್ ಕೊಡು ಎಂದು ಕೇಳಿದ್ದಾನೆ. ಅದಕ್ಕೆ ನಿರಾಕರಿಸಿದ ಆದಾ ಶರ್ಮ ಈಗ ಸುದ್ದಿಯಲ್ಲಿ ಇದ್ದಾರೆ. ಮುಂದೆ ಓದಿ...

ಅಭಿಮಾನಿಯ ವರ್ತನೆ

ಇತ್ತೀಚಿಗಷ್ಟೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಅದಾ ಶರ್ಮಾರನ್ನು ಕಂಡ ಅಭಿಮಾನಿ 'ನೀವು ನನಗೆ ಕಿಸ್ ಕೊಡಿ' ಎಂದು ನೇರವಾಗಿ ಕೇಳಿದ್ದಾನೆ.

ನಿರಾಕರಿಸಿದ ಅದಾ ಶರ್ಮಾ

ಅಭಿಮಾನಿಯ ಈ ವರ್ತನೆಯಿಂದ ಅದಾ ಶರ್ಮಾಗೆ ಕಿರಿಕಿರಿ ಉಂಟಾಗಿದೆ. ಕಿಸ್ ಕೊಂಡು ಎಂದ ಅಭಿಮಾನಿಯ ಬಯಕೆಯನ್ನು ಆಕೆ ಕೋಪದಿಂದ ನಿರಾಕರಿಸಿದ್ದಾರೆ.

ಸಿನಿಮಾದಲ್ಲಿ ಕೊಡ್ತೀರಾ

ಮುತ್ತು ಕೊಡಲು ನಿರಾಕರಿಸಿದ ಅದಾ ಶರ್ಮಾ ಅವರನ್ನು ಆ ಅಭಿಮಾನಿ ಪ್ರಶ್ನೆ ಮಾಡಿದ್ದಾನೆ. 'ನೀವು ಸಿನಿಮಾದಲ್ಲಿ ಮಾತ್ರ ನಟರಿಗೆ ಮುತ್ತು ಕೊಡುತ್ತೀರಾ' ಎಂದು ಪ್ರಶ್ನಿಸಿದ್ದಾನೆ.

ಅದಾ ಶರ್ಮಾ ಮೇಲೆ ಟ್ರೋಲ್

ಘಟನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಈಗಾಗಲೇ ಆದಾ ಶರ್ಮಾ ಬಗ್ಗೆ ಅನೇಕರು ಟ್ರೋಲ್ ಮಾಡಿದ್ದಾರೆ. 'ಸಿನಿಮಾದಲ್ಲಿ ನಟರಿಗೆ ಎಷ್ಟೋ ಮುತ್ತು ಕೊಡುವ ನಟಿ ಅಭಿಮಾನಿಗೆ ಮಾತ್ರ ಈ ರೀತಿ ಮಾಡಿದ್ದಾರೆ' ಎಂದು ಅನೇಕರು ಟ್ರೋಲ್ ಮಾಡಿದ್ದಾರೆ.

ಟ್ವಿಟ್ಟರ್ ನಲ್ಲಿ ಸ್ಪಷ್ಟನೆ

ಈ ಘಟನೆ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅದಾ ಶರ್ಮಾ ಸ್ವಷ್ಟನೆ ನೀಡಿದ್ದಾರೆ. ''ಮುತ್ತು ಕೊಡುವುದು ನನ್ನ ವೈಯಕ್ತಿಕ ನಿರ್ಧಾರ. ಕೆಲವರು ಇದೇನು ದೊಡ್ಡ ವಿಷಯವೇ ಎನ್ನುತಾರೆ. ನನ್ನ ವಿಷಯದಲ್ಲಿ ದೊಡ್ಡದು ಚಿಕ್ಕದು ಎಂದು ನಿರ್ಧಾರಿಸಲು ನೀವು ಯಾರು.?'' ಎಂದು ಟ್ರೋಲ್ ಮಾಡುವವರ ಮೇಲೆ ಗರಂ ಆಗಿದ್ದಾರೆ.

ಪುರುಷ ದ್ವೇಷಿ ಅಲ್ಲ

''ನಾನು ಯಾರೊಂದಿಗೆ ಮುತ್ತು ಕೊಡಬೇಕು ಎನ್ನುವುದನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ನನಗೆ ಪುರುಷರ ಮೇಲೆ ಪ್ರೀತಿ ಇದೆ. ನಾನು ಅವರ ವಿರೋಧಿ ಅಲ್ಲ. ನನ್ನ ತಂದೆ, ನನ್ನ ಅಜ್ಜ, ನನ್ನ ಜೊತೆ ಕೆಲಸ ಮಾಡಿದ ನಿರ್ದೇಶಕರು ನಟರು ಎಲ್ಲರೂ ಒಳ್ಳೆಯ ವ್ಯಕ್ತಿಗಳು'' ಎಂದು ಟ್ವಿಟ್ಟರ್ ನಲ್ಲಿ ಅದಾ ಶರ್ಮಾ ಬರೆದುಕೊಂಡಿದ್ದಾರೆ.

English summary
Actress Adah Sharma trolled for refusing to kiss a stranger.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada