Aditi Prabhudeva Wedding : ಶ್ಯಾನೆ ಟಾಪ್ ಹುಡುಗಿ ಅದಿತಿ- ಯಶಸ್ವಿ ಮದುವೆ ಡೇಟ್ ಫಿಕ್ಸ್! ಇಲ್ಲಿದೆ ಆಮಂತ್ರಣ ಪತ್ರಿಕೆ

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಮದುವೆಗೆ ದಿನಗಣನೆ ಶುರುವಾಗಿದೆ. ಕಳೆದ ವರ್ಷ ಯಶಸ್ವಿ(ಯಶಸ್) ಎಂಬುವವರ ಜೊತೆ ಅದಿತಿ ಮದುವೆ ನಿಶ್ಚಿತಾರ್ಥ ನೆರವೇರಿತ್ತು. ನವೆಂಬರ್​ 27ರಂದು ಈ ಜೋಡಿ ಹೊಸಬಾಳಿಗೆ ಕಾಲಿಡುತ್ತಿದ್ದು, ಇವರಿಬ್ಬರು ಮದುವೆ ಆಮಂತ್ರಣ ಪತ್ರಿಕೆಯ ಫೋಟೋ ಲಭ್ಯವಾಗಿದೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಅದಿತಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. ಆದರೆ ಬಹುಬೇಡಿಕೆ ನಟಿಯಾಗಿ ಗುರ್ತಿಸಿಕೊಂಡಿದ್ದ ಸಮಯದಲ್ಲೇ ನಿಶ್ಚಿತಾರ್ಥದ ಸುದ್ದಿ ಕೊಟ್ಟು ಅಭಿಮಾನಿಗಳಿಗೆ ಸಣ್ಣದಾಗಿ ಶಾಕ್ ಕೊಟ್ಟಿದ್ದರು. ಉದ್ಯಮಿ ಹಾಗೂ ಕಾಫಿ ಪ್ಲಾಂಟರ್ ಆಗಿರುವ ಯಶಸ್ವಿ ಜೊತೆ ಅದಿತಿ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದು, ಗುರು ಹಿರಿಯರು ಸೇರಿ ಮದುವೆ ನಿಶ್ಚಯ ಮಾಡಿದ್ದಾರೆ. ಕೆಲ ದಿನಗಳ ಕಾಲ ನಟನೆಯಿಂದ ಬ್ರೇಕ್ ಪಡೆದು ಮದುವೆ ಕೆಲಸಗಳಲ್ಲಿ ಅದಿತಿ ತೊಡಗಿಸಿಕೊಳ್ಳಲಿದ್ದಾರೆ.

ತಮ್ಮ ಮದುವೆ ಫಿಕ್ಸ್ ಆಗಿದ್ದು ಹೇಗೆ ಎನ್ನುವುದನ್ನು ಈ ಹಿಂದೆ ಅದಿತಿ ಹೇಳಿಕೊಂಡಿದ್ದರು. ಮೊದಲಿಗೆ ಯಶಸ್ವಿ ಅವರೇ ಅದಿತಿಯನ್ನು ಇಷ್ಟಪಟ್ಟರಂತೆ. ನಂತರ ಹಿರಿಯರ ಒಪ್ಪಿಗೆ ಪಡೆದು ಆಕೆಗೆ ವಿಷಯ ತಿಳಿಸಿದ್ದರಂತೆ. ಅದಿತಿ ಕೂಡ ಓಕೆ ಎಂದಿದ್ದು, ಕಳೆದ ವರ್ಷ ನಿಶ್ಚಿತಾರ್ಥ ನೆರವೇರಿತ್ತು.

ಸದ್ದಿಲ್ಲದೇ ಅದಿತಿ- ಯಶಸ್ವಿ ನಿಶ್ಚಿತಾರ್ಥ

ಸದ್ದಿಲ್ಲದೇ ಅದಿತಿ- ಯಶಸ್ವಿ ನಿಶ್ಚಿತಾರ್ಥ

'ಕನಸೊಂದು ಕನಸಿನಂತೆ ನನಸಾಯಿತು' ಎಂದು ಅದಿತಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು. ಜೊತೆಗೆ #engaged ಅಂತಲೂ ಹಾಕಿ ತಮ್ಮ ಹುಡುಗನ ಕೈಹಿಡಿದುಕೊಂಡಿರುವ ಫೋಟೋವನ್ನೂ ನಟಿ ಅದಿತಿ ಪ್ರಭುದೇವ ಶೇರ್ ಮಾಡಿದ್ದರು. ಫೋಟೋದಲ್ಲಿ ನಟಿ ಅದಿತಿ ಪ್ರಭುದೇವ ಅವರ ಕೈ ಬೆರಳಿನಲ್ಲಿರುವ ಉಂಗುರ ಹೈಲೈಟ್ ಆಗಿತ್ತು. ಇದನ್ನ ನೋಡಿ ಅಭಿಮಾನಿಗಳು ಜೋಡಿ ಶುಭ ಹಾರೈಸಿದ್ದರು. ನಂತರ ನಿಧಾನವಾಗಿ ಅದಿತಿ ಮದುವೆ ಆಗುತ್ತಿರುವ ಹುಡುಗನ ಬಗ್ಗೆ ಮಾತನಾಡಿದ್ದರು.

ಶ್ಯಾನೆ ಟಾಪ್ ಅದಿತಿ

ಶ್ಯಾನೆ ಟಾಪ್ ಅದಿತಿ

2017ರಲ್ಲಿ ಬಂದ 'ಧೈರ್ಯಂ' ಚಿತ್ರದ ಮೂಲಕ ಅದಿತಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಧನ್ವೀರ್ ಗೌಡ ನಟನೆಯ 'ಬಜಾರ್' ಚಿತ್ರದಲ್ಲೂ ನಟಿಸಿ ಗೆದ್ದರು. ಚಿರಂಜೀವಿ ಸರ್ಜಾ ನಟನೆಯ 'ಸಿಂಗ' ಚಿತ್ರದಲ್ಲೂ ನಾಯಕಿಯಾಗಿ ಮಿಂಚಿದ್ದರು. ಚಿತ್ರದಲ್ಲಿ 'ಶ್ಯಾನೆ ಟಾಪಾಗವ್ಳೆ' ಸಾಂಗ್ ಸೂಪರ್ ಹಿಟ್ ಆಗಿತ್ತು. ಅಂದಿನಿಂದ ಅಭಿಮಾನಿಗಳು ನೆಚ್ಚಿನ ನಟಿಯನ್ನು ಶ್ಯಾನೆ ಟಾಪ್ ಬೆಡಗಿ ಎಂದೇ ಕರೆಯುತ್ತಿದ್ದಾರೆ.

ವಿಭಿನ್ನ ಪಾತ್ರಗಳಲ್ಲಿ ಅದಿತಿ ಮೋಡಿ

ವಿಭಿನ್ನ ಪಾತ್ರಗಳಲ್ಲಿ ಅದಿತಿ ಮೋಡಿ

ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದು ಮಾತ್ರವಲ್ಲದೇ 'ರಂಗನಾಯಕಿ' ಹಾಗೂ 'ಆನ' ರೀತಿಯ ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡರು. 'ಬ್ರಹ್ಮಚಾರಿ', 'ಒಂಭತ್ತನೇ ದಿಕ್ಕು', 'ಓಲ್ಡ್ ಮಾಂಕ್', 'ತೋತಾಪುರಿ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಅದಿತಿ ನಟಿಸಿ ಗಮನ ಸೆಳೆದಿದ್ದಾರೆ. 'ತೋತಾಪುರಿ' ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಜೋಡಿಯಾಗಿ ನಟಿಸುವ ಅವಕಾಶ ಸಿಕ್ಕಿದ್ದು ವಿಶೇಷ. 'ಬಾಗ್ಲು ತೆಗಿ ಮೇರಿ ಜಾನ್' ಸೂಪರ್ ಹಿಟ್ ಆಯಿತು.

ಸಿನಿಮಾಗಳಿಂದ ಸಣ್ಣ ಬ್ರೇಕ್

ಸಿನಿಮಾಗಳಿಂದ ಸಣ್ಣ ಬ್ರೇಕ್

ಅದಿತಿ- ಯಶಸ್ವಿ ಮದುವೆ ನವೆಂಬರ್ 27ಕ್ಕೆ ನಡೆಯೋದು ಕನ್ಫರ್ಮ್ ಆಗಿದೆ. ಆದರೆ ಎಲ್ಲಿ ನಡೆಯುತ್ತೆ..? ಯಾರೆಲ್ಲಾ ಮದುವೆಗೆ ಹಾಜರಾಗುತ್ತಾರೆ? ಎನ್ನುವುದರ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. 'ಜಮಾಲಿಗುಡ್ಡ' ಶೂಟಿಂಗ್ ಮುಗಿಸಿರುವ ಅದಿತಿ, 'ದಿಲ್‌ಮಾಲ್', 'ತೋತಾಪುರಿ', 'ತ್ರಿಬಲ್ ರೈಡಿಂಗ್', 5D, 'ಅಂದೊಂದಿತ್ತು ಕಾಲ' ಹಾಗೂ 'ಮಾಫಿಯಾ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಒಂದಷ್ಟು ದಿನ ಸಿನಿಮಾಗಳಿಂದ ಬ್ರೇಕ್ ಪಡೆಯುವ ಸುಳಿವು ಸಿಗುತ್ತಿದೆ.

More from Filmibeat

English summary
Actress Aditi Prabhudeva and Yashasvi all set to get married on 27th November invitation card & more. she got engaged to coffee planter and businessman Yashasvi on Last December 26th. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X