ವಿಡಿಯೋ ವೈರಲ್; ಆಟೋ ಓಡಿಸಿದ ನಟಿ ಅದಿತಿ ಪ್ರಭುದೇವ
ಸ್ಯಾಂಡಲ್ ವುಡ್ ನಲ್ಲಿ ಸಖತ್ ಬ್ಯುಸಿ ಇರುವ ನಟಿಯರಲ್ಲಿ ಅದಿತಿ ಪ್ರಭುದೇವ ಕೂಡ ಒಬ್ಬರು. ಶಾನೆ ಟಾಪ್ ಆಗಿ ಇರುವ ನಟಿ ಅದಿತಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ನಡುವೆ ಅದಿತಿ ಆಟೋ ಓಡಿಸಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ನಟಿಮಣಿಯರು ಟ್ರ್ಯಾಕ್ಟರ್ ಓಡಿಸುವುದು, ಬಸ್ ಓಡಿಸುವುದನ್ನು ನೋಡಿದ್ದೀರಿ, ಇದೀಗ ಕನ್ನಡದ ನಟಿ ಅದಿತಿ ಆಟೋ ಏರಿ ಹೊರಟಿದ್ದಾರೆ. ಬೆಂಗಳೂರಿನಲ್ಲಿ ರಸ್ತೆಯಲ್ಲಿ ಆಟೋ ಓಡಿಸುತ್ತಿರುವ ವಿಡಿಯೋವನ್ನು ಅದಿತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅದಿತಿ ಶೇರ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ ಡಿ ಬಾಸ್ ದರ್ಶನ್ ಅಭಿನಯದ ಸಾರಥಿ ಸಿನಿಮಾದ ಹಾಡನ್ನು ಹಾಕಲಾಗಿದೆ. ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ಸ್ ಹರಿದುಬರುತ್ತಿದ್ದು, ನೆಟ್ಟಿಗರು ಜೈ ಡಿ ಬಾಸ್ ಎನ್ನುತ್ತಿದ್ದಾರೆ.
ಅಂದಹಾಗೆ ಇತ್ತೀಚಿಗಷ್ಟೆ ನಟಿ ತಮನ್ನಾ ಚಿತ್ರೀಕರಣ ಸೆಟ್ ನಲ್ಲಿ ಬಸ್ ಓಡಿಸಿ ಅಚ್ಚರಿ ಮೂಡಿಸಿದ್ದರು. ಬಸ್ ಚಲಾಯಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತಮನ್ನಾ ವಿಡಿಯೋ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಇದೀಗ ಅದಿತಿ ಆಟೋ ಓಡಿಸಿದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅದಿತಿ ಬಳಿ ಸದ್ಯ 10ಕ್ಕು ಹೆಚ್ಚು ಸಿನಿಮಾಗಳಿವೆ. ಕೊನೆಯದಾಗಿ ಅದಿತಿ ಬ್ರಹ್ಮಾಚಾರಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸತೀಶ್ ನೀನಾಸಂಗೆ ನಾಯಕಿಯಾಗಿ ನಟಿಸಿದ್ದರು. ಸದ್ಯ ಅದಿತಿ ಬಳಿ ತೋತಾಪುರಿ, ದಿಲ್ ಮಾರ್, ಓಲ್ಡ್ ಮಾಂಕ್, ಆನ, ತ್ರಿಬಲ್ ರೈಡಿಂಗ್, ಸೇರಿದಂತೆ 10ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











