2024 ಕ್ಕೆ ನಾನು "ಅಮ್ಮ" : ಹೊಸ ವರ್ಷದಂದು ಸಿಹಿ ಸುದ್ದಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ

ಚಂದನವನದ ಮುದ್ದು ಗೊಂಬೆ ಅದಿತಿ ಪ್ರಭುದೇವ ಹೊಸ ವರ್ಷದ ದಿನವೇ ಸ್ವೀಟ್ ಗುಡ್​ ನ್ಯೂಸ್ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ನಟಿಯರಲ್ಲಿ ಒಬ್ಬರಾಗಿರುವ ಅದಿತಿ ಪ್ರಭುದೇವ ತಾವು ತಾಯಿಯಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವರ್ಷದ ಮೊದಲ ದಿನ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

2024 ಕ್ಕೆ ನಾನು "ಅಮ್ಮ" ಎಂದು ನಟಿ ಅದಿತಿ ಪ್ರಭುದೇವ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬೇಬಿ ಬಂಪ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದು ಯಾವುದೇ ವಿವಾದಗಳಿಗೆ ಸಿಲುಕಿಕೊಳ್ಳದೇ ತಮ್ಮದೆ ಆದ ಒಂದು ವ್ಯಕ್ತಿತ್ವದಿಂದ ಅಭಿಮಾನಿಗಳ ಮನ ಗೆದ್ದಿರುವ ನಟಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Actress Aditi Prabhudeva expecting first child, shared baby bump photos on new year 2024

2024 ಕ್ಕೆ ನಾನು "ಅಮ್ಮ" ಎಂದ ನಟಿ ಅದಿತಿ ಪ್ರಭುದೇವ

ನಟಿ ಅದಿತಿ ಪ್ರಭುದೇವ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವುಗಳಿಗೆ ಶೀರ್ಷಿಕೆಯಾಗಿ "ಸಂಬಂಧಗಳಲ್ಲಿ ಶ್ರೇಷ್ಠವಾದದ್ದು, ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ "ಅಮ್ಮ"... ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ "ಅಮ್ಮ"... ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ "ಅಮ್ಮ"... 2024 ಕ್ಕೆ ನಾನು " ಅಮ್ಮ"" ಎಂದು ಬರೆದುಕೊಂಡಿದ್ದಾರೆ.

ಈ ಫೋಟೋಗಳಲ್ಲಿ ಪತಿ ಪತ್ನಿ ಇಬ್ಬರು ಒಂದೇ ಕಲರ್‌ನ ಬಟ್ಟೆ ತೊಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಜೊತೆಗೆ ನಟಿಯ ಮುದ್ದಾದ ನಾಯಿಮರಿ 'ಚಾಕೋಲೆಟ್' ಕೂಡ ಫೋಟೋಶೂಟ್‌ನಲ್ಲಿ ಭಾಗಿಯಾಗಿದೆ. ನಟಿ ಅದಿತಿ ಅವರ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್‌ ಫಾಲೋ ಮಾಡುವವರಿಗೆ ಈ 'ಚಾಕೋಲೆಟ್' ಬಗ್ಗೆ ತಿಳಿದಿರುತ್ತದೆ.

ರಂಗನಾಯಕಿಗೆ ಶುಭಾಶಯಗಳ ಮಹಾಪೂರ

ತೋತಾಪುರಿ ನಟಿ ಈ ಫೋಟೋಗಳನ್ನು ಹಂಚಿಕೊಂಡ ತಕ್ಷಣ ಅವರಿಗೆ ನೂರಾರು ಮಂದಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ಸೆಲಬ್ರಿಟಿಗಳು ಸೇರಿದಂತೆ ನೆಟ್ಟಿಗರು ಹೊಸ ವರ್ಷದ ದಿನ ಇಂತಹ ಸಿಹಿ ಸುದ್ದಿ ನೀಡಿದಕ್ಕೆ ಧನ್ಯವಾದ ಮತ್ತು ಶುಭಾಶಯ ಎಂದು ಹೇಳುತ್ತಿದ್ದಾರೆ. ನಟಿ ಮೇಘಾಶ್ರಿ, ಆಂಕರ್ ಅನುಶ್ರೀ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.

Actress Aditi Prabhudeva expecting first child, shared baby bump photos on new year 2024

ನಟಿ, ಖ್ಯಾತ ಆಂಕರ್ ಅನುಶ್ರೀ, "ಅದಿತಿ ಪ್ರಭುದೇವ ಅಭಿನಂದನೆಗಳು ಮೈ ಲವ್... ನನಗೆ ಗೊತ್ತು ನೀನು ಬೆಸ್ಟ್ ಅಮ್ಮ ಆಗುತ್ತಿಯಾ ಎಂದು" ಎನ್ನುತ್ತಾ ಶುಭ ಕೋರಿದ್ದಾರೆ. ನೆಟ್ಟಿಗರೊಬ್ಬರು, "ಈ ಸಮಯವನ್ನು ಖುಷಿಯಾಗಿ ಆನಂದಿಸಿ... ನಿಮಗೆ ಹಾಗೂ ನಿಮ್ಮ ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗಲಿ..." ಎಂದಿದ್ದಾರೆ. ಮತ್ತೊಬ್ಬರು, "ಇದು 2024 ರಲ್ಲಿ ನಾನು ಕೇಳಿದ ಮೊದಲ ಒಳ್ಳೆಯ ಸುದ್ದಿ. ಅದು ಕೂಡ ನನ್ನ ನೆಚ್ಚಿನ ವ್ಯಕ್ತಿಯಿಂದ ಇಂತಹ ವಿಷಯ" ಎಂದು ಖುಷಿಪಟ್ಟಿದ್ದಾರೆ.

ಅದಿತಿ ಪ್ರಭುದೇವ ಮತ್ತು ಯಶಸ್

ನಟಿ ಅದಿತಿ ಪ್ರಭುದೇವ ಅವರು 2022ರ ನವೆಂಬರ್ ತಿಂಗಳಲ್ಲಿ ಕೊಡಗಿನ ಹುಡುಗ ಉದ್ಯಮಿ ಯಶಸ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 2022ರ ನವೆಂಬರ್ 28 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್​​ನ ಗಾಯತ್ರಿ ವಿಹಾರ ಗ್ರ್ಯಾಂಡ್​ನಲ್ಲಿ ಈ ಜೋಡಿಯ ವಿವಾಹ ನೆರವೇರಿತ್ತು.

ಅದಿತಿ ಅವರ ಪತಿ ಯಶಸ್‌ ಕೊಡಗಿನ ಕಾಫಿ ಫ್ಲ್ಯಾಂಟರ್‌ ಮತ್ತು ಉದ್ಯಮಿಯಾಗಿದ್ದಾರೆ. ಇನ್ನು, ಜನವರಿ 26 ರಂದು ಅದಿತಿ ಪ್ರಭುದೇವ ನಟನೆಯ 'ಅಲೆಕ್ಸಾ' ಸಿನಿಮಾ ಬಿಡುಗಡೆಗೆ ಸಿದ್ದವಾಗುತ್ತಿದೆ.

More from Filmibeat

English summary
Aditi Prabhudeva expecting first child, shared baby bump photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X