ಅದಿತಿ ಪ್ರಭುದೇವ ಆಗ್ತಿದ್ದಾರೆ ಅರೇಂಜ್ ಮ್ಯಾರೇಜ್: ಹುಡುಗ ಯಾರು ಗೊತ್ತಾ?

ಕನ್ನಡದ ನಟಿ ಅದಿತಿ ಪ್ರಭುದೇವ ಸದ್ಯ ತಮ್ಮ ಮದುವೆ ವಿಚಾರಕ್ಕಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಹುಡುಗನ ಫೊಟೋವನ್ನು ಅದಿತಿ ಹಂಚಿಕೊಂಡಿದ್ದಾರೆ. ಆದರೆ ಆ ಹುಡುಗ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅದಕ್ಕೆ ಉತ್ತರ ಇಲ್ಲಿದೆ. ಮುಂದೆ ಓದಿ..

ಅದಿತಿ ಪ್ರಭುದೇವ ಡಿಸೆಂಬರ್ 27ರಂದು ಫೋಟೊ ಒಂದನ್ನು ಹಂಚಿಕೊಂಡು ಕನಸಿನಂತೆಯೇ ಕನಸು ನನಸಾಯಿತು ಎಂದು ಅವರು ಬರೆದುಕೊಂಡಿದ್ದರು. ಆ ಬಳಿಕ ಅದಿತಿ ಮತ್ತು ಆ ಹುಡುಗನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದವು. ಅಷ್ಟಕ್ಕೂ ಆತನ ಹೆಸರೇನು, ಏನು ಮಾಡ್ತಿದ್ದಾರೆ, ಅವರು ಅದಿತಿಗೆ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಸೃಷ್ಟಿ ಆಗಿವೆ.

ಆ ಕುತೂಹಲಗಳಿಗೆ ಅದಿತಿ ಉತ್ತರ ನೀಡಿದ್ದಾರೆ. ಅದಿತಿ ಈ ಹಿಂದೆ ಸಾಕಷ್ಟು ಬಾರಿ ತಾವು ಲವ್‌ನಲ್ಲಿ ಇಲ್ಲ. ಯಾರನ್ನೂ ಪ್ರೀತಿ ಮಾಡುತ್ತಿಲ್ಲ. ಮನೆಯಲ್ಲಿ ನೋಡಿದ ಹುಡುಗನನ್ನು ಮದುವೆ ಆಗುತ್ತೇನೆ ಎಂದು ಹೇಳಿಕೊಂಡಿದ್ದರು. ಅಂತೆಯೇ ಅದಿತಿ ಈಗ ಅರೇಂಜ್ ಮ್ಯಾರೇಜ್ ಆಗುತ್ತಿದ್ದಾರೆ.

ಅದಿತಿಗೆ ಮನೆಯವರೇ ನೋಡಿದ ಹುಡುಗ ಯಶಸ್!

ಅದಿತಿಗೆ ಮನೆಯವರೇ ನೋಡಿದ ಹುಡುಗ ಯಶಸ್!

ಹುಡುಗನ ಹೆಸರು ಈಗ ಬಹಿರಂಗ ಆಗಿದೆ. ಇವರ ಹೆಸರು ಯಶಸ್. ನಟಿ ಅದಿತಿ ಪ್ರಭುದೇವ ಲವ್‌ ಮಾಡಿ ಮದುವೆ ಆಗುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಅದಿತಿ ಮಾತ್ರ ಈ ವಿಚಾರದಲ್ಲಿ ತಾವು, ಮದುವೆ ಆದರೆ ಅರೇಂಜ್‌ ಮ್ಯಾರೇಜ್‌ ಆಗುವುದು ಎನ್ನುತ್ತಿದ್ದರು. ಅಂತೆಯೇ ಈಗ ಮದುವೆಗೆ ಅಣಿಯಾಗಿದ್ದಾರೆ. ಮನೆಯವರು ನೋಡಿದ ಹುಡುಗ ಯಶಸ್‌ ಜೊತೆಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.

ಅದಿತಿ ಆಸೆಯಂತೆ ರೈತ ಯಶಸ್‌ರನ್ನು ವರಿಸುತ್ತಿದ್ದಾರೆ!

ಅದಿತಿ ಆಸೆಯಂತೆ ರೈತ ಯಶಸ್‌ರನ್ನು ವರಿಸುತ್ತಿದ್ದಾರೆ!

ಅದಿತಿ ಪ್ರಭುದೇವ ಚಿತ್ರಗಳಲ್ಲಿ ನಾಯಕ ನಟಿಯಾಗಿ ಗುರುತಿಸಿ ಕೊಂಡಿದ್ದಾರೆ. ಆದರೆ ಕೃಷಿಯಲ್ಲಿ ಆಸಕ್ತಿ ಇರುವ, ರೈತರನ್ನು ಮದುವೆ ಆಗಬೇಕು ಎನ್ನುವ ಆಸೆ ಅದಿತಿಗೆ ಮೊದಲಿಂದಲೂ ಇತ್ತು. ಹಾಗೆಯೇ ಮನೆಯಲ್ಲಿ ಅಂತಹ ಹುಡುಗನನ್ನೇ ಹುಡುಕಿದ್ದಾರೆ. ಯಶಸ್ ಅವರು ಅದಿತಿ ಕುಟುಂಬಕ್ಕೆ ಸ್ನೇಹಿತರಾಗಿದ್ದರು. ಹಾಗಾಗಿ ಕುಟುಂಬಸ್ಥರೆ ಅದಿತಿಗೆ ಯಶಸ್‌ ಅವರನ್ನು ಮದುವೆ ಮಾಡಲು ನಿರ್ಧರಿಸಿದ್ದಾರೆ. ಯಶಸ್ ಕಾಫಿ ತೋಟದ ಮಾಲಿಕ ಮತ್ತು ಬಿಲ್ಡರ್.

ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದ ನಿಶ್ಚಿತಾರ್ಥ!

ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದ ನಿಶ್ಚಿತಾರ್ಥ!

ಮದುವೆ ಬಗ್ಗೆ ಮಾತು ಕಥೆ ಆಗುತ್ತಲೇ ಈ ಜೋಡಿಯ ನಿಶ್ಚಿತಾರ್ಥ ಕೂಡ ನೆರವೇರಿದೆ. ಡಿಸೆಂಬರ್ 26ರಂದು ನಟಿ ಅದಿತಿ ಮತ್ತು ಯಶಸ್ ಎಂಗೇಜ್‌ಮೆಂಟ್‌ ನೆರವೇರಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಈ ಜೋಡಿ ಉಂಗುರ ಬದಲಿಸಿಕೊಂಡಿದೆ. ಇಷ್ಟು ದಿನ ಯಾರನ್ನೂ ಲವ್‌ ಮಾಡುತ್ತಾ ಇರಲಿಲ್ಲ. ಆದರೆ ಈಗ ಅವರನ್ನು ಖಂಡಿತಾ ಲವ್‌ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಅದಿತಿ.

ನಿಶ್ಚಿತಾರ್ಥದ ಬಳಿಕ ಶೂಟಿಂಗ್‌ಗೆ ಮರಳಿದ ಅದಿತಿ!

ನಿಶ್ಚಿತಾರ್ಥದ ಬಳಿಕ ಶೂಟಿಂಗ್‌ಗೆ ಮರಳಿದ ಅದಿತಿ!

ನಟಿ ಅದಿತಿ ಪ್ರಭುದೇವ ನಿಶ್ಚಿತಾರ್ಥ ಅಂತ ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡಿಲ್ಲ. ಒಂದು ದಿನದ ನಿಶ್ಚಿತಾರ್ಥದ ಬಳಿಕ ಮತ್ತೆ ಶೂಟಿಂಗ್‌ಗೆ ವಾಪಸ್‌ ಆಗಿದ್ದಾರೆ. ಸದ್ಯ 'ಜಮಾಲಿ ಗುಡ್ಡ'ದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಎಂಗೇಜ್‌ಮೆಂಟ್ ಆದ ಮರುದಿನವೇ ಅದಿತಿ ಶೂಟಿಂಗ್‌ಗೆ ಮರಳಿದ್ದಾರೆ. ಇನ್ನೂ ಮದುವೆ ಬಗ್ಗೆ ಸದ್ಯಕ್ಕೆ ಯೋಚನೆ ಮಾಡಿಲ್ಲ. ಅದಕ್ಕಿನ್ನೂ ಸಾಕಷ್ಟು ಸಮಯ ಬೇಕಿದೆ ಎಂದು ಅದಿತಿ ಹೇಳಿಕೊಂಡಿದ್ದಾರೆ.

More from Filmibeat

English summary
Actress Aditi Prabhudeva Getting Arranged Marriage with Her Dream Boy,Know About Her Marriege,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X