For Quick Alerts
  ALLOW NOTIFICATIONS  
  For Daily Alerts

  ಅರಮನೆ ನಗರಿಯಲ್ಲಿ ಆರಂಭವಾಯಿತು ಅದಿತಿ ಪ್ರಭುದೇವ ಹೊಸ ಚಿತ್ರ

  |

  ಅರಮನೆ ನಗರಿ ಮೈಸೂರಿನ ಕೋಟೆ ವಿನಾಯಕ ದೇವಸ್ಥಾನದಲ್ಲಿ ಅದಿತಿ ಪ್ರಭುದೇವ ನಟನೆಯ ಹೊಸ ಚಿತ್ರದ ಮುಹೂರ್ತ ನೆರವೇರಿದೆ. ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ನಾಯಕ ನಾಯಕಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರವನ್ನು ಉದ್ಯಮಿ ವಿ.ಚಂದ್ರು ನಿರ್ಮಿಸುತ್ತಿದ್ದಾರೆ. ಹಾಗೂ ನವ ನಿರ್ದೇಶಕ ಜೀವ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಚಿತ್ರದ ಮೊದಲ ದೃಶ್ಯಕ್ಕೆ ನಿರ್ಮಾಪಕ ವಿ.ಚಂದ್ರು ಆಕ್ಷನ್ ಹೇಳಿ ಚಾಲನೆ ನೀಡಿದ್ದು, ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಕ್ಯಾಮೆರಾಗೆ ಚಾಲನೆ ನೀಡಿದ್ದಾರೆ.

  ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಚಿತ್ರವಾಗಿದ್ದು, ಕಥೆಯಲ್ಲಿ ಅದಿತಿ ಪಾತ್ರ ತುಂಬ ವಿಭಿನ್ನವಾಗಿದೆಯಂತೆ. ಈ ಕಾರಣಕ್ಕಾಗಿ ಸಿನಿಮಾವನ್ನು ಒಪ್ಪಿಕೊಂಡಿರುವ ಅದಿತಿ ಈ ಚಿತ್ರದಲ್ಲಿ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕ ಪವನ್ ತೇಜ್ ಕೂಡ ವಿಭಿನ್ನಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಮಾತನಾಡಿದ ಅದಿತಿ " ನಿರ್ದೇಶಕ ಜೀವ ಅವರು ಹೇಳಿದ ಕಥೆ ಇಷ್ಟವಾಯಿತು. ಒಂದೇ ಹಂತದಲ್ಲಿ ಈ ಚಿತ್ರೀಕರಣ ನಡೆಯಲಿದೆ. ಮುಂಚಿನಿಂದಲೂ ನನಗೆ ಈ ತರಹ ಪಾತ್ರ ಮಾಡಬೇಕೆಂದು ಆಸೆಯಿತ್ತು. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ" ಎಂದಿದ್ದಾರೆ.

  ಚಿತ್ರದ ಟೈಟಲ್ಇನ್ನು ನಿಗದಿ ಆಗಿಲ್ಲ. ಆದಷ್ಟು ಬೇಗ ಟೈಟಲ್ ರಿವೀಲ್ ಮಾಡಲಿದೆ ಚಿತ್ರತಂಡ.ಸಿನಿಮಾದ ಶೂಟಿಂಗ್ ನಲವತ್ತೈದು ದಿನ ನಡೆಯಲ್ಲಿದ್ದು, ಒಂದೇ ಹಂತದ ಚಿತ್ರೀಕರಣ ಮಾಡಲು ತಂಡ ತಯಾರಿ ಮಾಡಿದೆ. ಮೈಸೂರು, ರಾಜಸ್ಥಾನ್ ಸೇರಿ ಮುಂತಾದ ಕಡೆ ಚಿತ್ರೀಕರಣ ನಡೆಯಲ್ಲಿದ್ದು, ಪ್ರವೀಣ್ ಸಂಗೀತ ನಿರ್ದೇಶನದಲ್ಲಿ ನಾಲ್ಕು ಹಾಡುಗಳು ಸಿನಿಮಾದಲ್ಲಿ ಇರಲಿದೆ.

  ಇನ್ನುಳಿದಂತೆ ಮೇಘಶ್ರೀ, ನಾಗಾರ್ಜುನ, ಹನುಮಂತೇಗೌಡ, ರಂಜಿತ್, ನವೀನ್ ಪಡೀಲ್ ಹಾಗೂ ಸಾಕಷ್ಟು ಕಿರುತೆರೆ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಾಯಿಸತೀಶ್ ಈ ಚಿತ್ರದ ಛಾಯಾಗ್ರಹಣ, ಮಾಸ್ ಮಾದ, ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ.

  Actress Aditi Prabhudeva has signed a new film

  ಸದ್ಯ ಅದಿತಿ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇವರ ಕೈಯಲ್ಲಿ ಈಗ ತ್ರಿಬಲ್ ರೈಡಿಂಗ್, ಮಾಫಿಯಾ, ಅದೊಂದಿತ್ತು ಕಾಲ, ಓಲ್ಡ್‌ ಮಂಕ್, ಟಪೋರಿ,ಮತ್ತು ದಿಲ್‌ಮಾರ್ ಸಿನಿಮಾಗಳಿವೆ. ಬಿಡುವಿಲ್ಲದೇ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರೋ ಅದಿತಿ ಡೆಡಿಕೇಟೆಡ್ ನಟಿ ಎಂದು ಚಿತ್ರತಂಡಗಳಿಂದ ಪ್ರಸಂಶೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈಗ ಹೊಸ ಚಿತ್ರ ಕೂಡ ಅದಿತಿ ಸಿನಿಮಾ ಪಟ್ಟಿ ಸೇರಿಕೊಂಡಿದ್ದು, ಚಿತ್ರದ ಮತ್ತಷ್ಟು ಅಪ್‌ಡೇಟ್ಸ್‌ಗಳಿಗಾಗಿ ಫಿಲ್ಮಿಬೀಟ್ ಓದಿ.

  English summary
  Actress Aditi Prabhudeva has given the green signal to new film. The film muhurtha has been done recently. And Aditi is very happy about her role in this film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X