ನಟಿ ಅದಿತಿ ಪ್ರಭುದೇವ is in Love: ಸದ್ಯದಲ್ಲೇ ಮದುವೆ ಬಗ್ಗೆ ಮಾಹಿತಿ!

ನಟಿ ಅದಿತಿ ಪ್ರಭುದೇವ ಕನ್ನಡದ ಟಾಪ್‌ ನಟಿಯರಲ್ಲಿ ಒಬ್ಬರು. ಅದಿತಿ ಎಲ್ಲರಂತೆ ಅಲ್ಲ, ಆಕೆ ಕೊಂಚ ಡಿಫ್ರೆಂಟ್. ಇದು ಆಕೆಯ ನಿಜ ಜೀವನ ಮತ್ತು ಚಿತ್ರದಲ್ಲಿನ ಪಾತ್ರಗಳ ಮೂಲಕ ಅದು ಸಾಬೀತಾಗಿದೆ. ಸದಾ ಸಿನಿಮಾ, ಪಾತ್ರಗಳ ಮೂಲಕ ಸುದ್ದಿಯಲ್ಲಿ ಇರುತ್ತಿದ್ದ ಅದಿತಿ ಪ್ರಭುದೇವ ಈಗ ತಮ್ಮ ವೈಯಕ್ತಿಕ ಬದುಕಿನ ಮೂಲಕ ಸುದ್ದಿ ಆಗಿದ್ದಾರೆ.

ಸಿನಿಮಾ ತಾರೆಯರ ಮದುವೆ ಬಗ್ಗೆ ಎಲ್ಲರಿಗೂ ಸಹಜ ಕುತೂಹಲ ಇದ್ದೇ ಇರುತ್ತದೆ. ಅಂತೆಯೇ ನಟಿ ಅದಿತಿಗೂ ಸಾಕಷ್ಟು ಅಭಿಮಾನಿಗಳು, ಫಾಲೋಯರ್ಸ್ ಇದ್ದಾರೆ. ಅವರೆಲ್ಲರಿಗೂ ಈಗ ಸಿಹಿ ಸುದ್ದಿ ಕೊಟ್ಟಿದ್ದಾರೆ ನಟಿ ಅದಿತಿ ಪ್ರಭುದೇವ. ಅದಿತಿ ಸದ್ಯ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಅದಿತಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರ ಬಾಳ ಸಂಗತಿ ಆಗುವ ಹುಡುಗನನ್ನು ಅದಿತಿ ಪರಿಚಯಿಸಿದ್ದಾರೆ. ಆದರೆ ಅದು ಯಾರು ಎನ್ನುವ ಬಗ್ಗೆ ಪೋಸ್ಟ್‌ನಲ್ಲಿ ರಿವೀಲ್‌ ಮಾಡಿಲ್ಲ.

ಮದುವೆ ಬಗ್ಗೆ ಯೋಚಿಸಲು ತುಂಬಾ ಸಮಯ ಇದೆ: ಅದಿತಿ ಪ್ರಭುದೇವ!

ಮದುವೆ ಬಗ್ಗೆ ಯೋಚಿಸಲು ತುಂಬಾ ಸಮಯ ಇದೆ: ಅದಿತಿ ಪ್ರಭುದೇವ!

ನಟಿ ಅದಿತಿ ಪ್ರಭುದೇವ ತಮ್ಮ ಈ ಪ್ರೀತಿ ಮತ್ತು ಮದುವೆ ಬಗ್ಗೆ ಫಿಲ್ಮೀಬೀಟ್‌ ಜೊತೆಗೆ ಮಾತನಾಡಿದ್ದಾರೆ. "ಈ ಬಗ್ಗೆ ಹೆಚ್ಚಾಗಿ ಏನು ಹೇಳಲು ಇದು ಸಮಯ ಅಲ್ಲ. ಆದರೆ ಅವರೊಂದಿಗೆ ನಾನು ಕಮಿಟ್ ಆಗಿದ್ದೇನೆ. ಮದುವೆ ಬಗ್ಗೆ ಯೋಚಿಸಲು ಇನ್ನೂ ಸಾಕಷ್ಟು ಸಮಯ ಇದೆ. ಸದ್ಯಕ್ಕೆ ನಾನು ಅವರೊಂದಿಗೆ ಪ್ರೀತಿಯಲ್ಲಿ ಇದ್ದೇನೆ". ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡ ಅದಿತಿ!

ಭಾವಿ ಪತಿಯ ಜೊತೆಗಿರುವ ಫೋಟೊವನ್ನು ನಟಿ ಅದಿತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಕೆಂಪು ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ್ದಾರೆ. ಅದಿತಿ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಗನ ಜೊತೆಗೆ ಇರುವ ಫೋಟೊ ಹಾಕಿ " ಕನಸಿನಂತೆಯೇ ಕನಸು ನಿಜವಾಗಿದೆ" ಎಂದು ಬರೆದುಕೊಂಡಿದ್ದಾರೆ. ಅದಿತಿ ಕೊಟ್ಟಿರು ಈ ಕ್ಯಾಪ್ಷನ್‌ ಅವರು ಆಕೆಯ ಬಾಳ ಸಂಗಾತಿ ಆಗುವವರು ಇವರು ಎನ್ನುವುದನ್ನು ಹೇಳುತ್ತದೆ. ಹಾಗಾಗಿ ಸಾಕಷ್ಟು ಮಂದಿ ಈ ಜೋಡಿಗೆ ಕಮೆಂಟ್‌ ಮಾಡುವ ಮೂಲಕ ಶುಭ ಕೋರರಿದ್ದಾರೆ.

ಸದ್ಯಕ್ಕಿಲ್ಲ ಹುಟ್ಟಿಕೊಂಡಿರೋ ಪ್ರಶ್ನೆಗಳಿಗೆ ಉತ್ತರ!

ಸದ್ಯಕ್ಕಿಲ್ಲ ಹುಟ್ಟಿಕೊಂಡಿರೋ ಪ್ರಶ್ನೆಗಳಿಗೆ ಉತ್ತರ!

ಇನ್ನೂ ನಟಿ ಅದಿತಿ ಪ್ರಭುದೇವ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಅಂದರೆ ಅದಿತಿ ಅವರದ್ದು ಲವ್ ಮ್ಯಾರೇಜ್ ಅಥವಾ ಅರೇಂಜ್‌ ಮ್ಯಾರೇಜ್?, ಹುಡುಗನ ಹೆಸರೇನು?, ಆಕೆಯ ಭಾವಿ ಪತಿ ಏನ್‌ ಮಾಡ್ತಿದ್ದಾರೆ?, ಮದುವೆ ಯಾವಾಗ ಆಗ್ತಾರೆ?. ಈ ಎಲ್ಲಾ ಪ್ರಶ್ನೆಗಳಿಗೂ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಮದುವೆ ಬಗ್ಗೆ ಯೋಚಿಸಲು ಇನ್ನೂ ಸಾಕಷ್ಟು ಸಮಯ ಇದೆ ಎನ್ನುವುದನ್ನು ಮಾತ್ರ ಹೇಳಿದ್ದಾರೆ. ಅಂದರೆ ಸದ್ಯ ಮದುವೆ ಆಗಲಿರುವ ಹುಡುಗನ ಫೋಟೊ ಹಂಚಿಕೊಂಡಿರುವ ಅದಿತಿ ಮದುವೆ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡಲಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ಅದಿತಿ ಬ್ಯೂಸಿ!

ಸಾಲು ಸಾಲು ಚಿತ್ರಗಳಲ್ಲಿ ಅದಿತಿ ಬ್ಯೂಸಿ!

ಇನ್ನು ನಟಿ ಅದಿತಿ ಪ್ರಭುದೇವ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಕಿರುತೆರೆ ಮೂಲಕ ಬಣ್ಣ ಹಚ್ಚಿರುವ ನಟಿ ಅದಿತಿ ಪ್ರಭುದೇವ, ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟಿ. 2017ರಲ್ಲಿ ಧೈರ್ಯಂ ಚಿತ್ರದ ಮೂಲಕ ಅದಿತಿ ತಮ್ಮ ಬೆಳ್ಳಿ ಪರದೆಯ ಪಯಣ ಶುರು ಮಾಡಿದ್ದಾರೆ. ಇತ್ತೀಚೆಗೆ ಅದಿತಿ ಅಭಿನಯದ 'ಆನ' ಚಿತ್ರ ತೆರೆಕಂಡಿದೆ. ಇದನ್ನು ಬಿಟ್ಟು ಸದ್ಯ 10ಕ್ಕೂ ಹೆಚ್ಚು ಚಿತ್ರಗಳು ಅದಿತಿ ಅವರ ಕೈಯಲ್ಲಿ ಇವೆ.

More from Filmibeat

English summary
Actress Aditi Prabhudeva Is In Love: She Shared A picture With Her Fiance, Know Abput Her Marriege
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X