'ರಂಗನಾಯಕಿ'ಯಾದ ನಟಿ ಅದಿತಿ ಪ್ರಭುದೇವ
ನಟಿ ಅದಿತಿ ಪ್ರಭುದೇವ ಒಂದರ ನಂತರ ಒಂದು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಹೊಸ ಹೀರೋಗಳ ಜೊತೆಗೆ ಮಾತ್ರವಲ್ಲದೆ ಜಗ್ಗೇಶ್ ಅವರ ಜೊತೆಗೆ 'ತೋತಾಪುರಿ' ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.
ತಮ್ಮ ಸಿನಿಮಾ ಜರ್ನಿಯಲ್ಲಿ ಅದಿತಿ ಇದೀಗ ಮೊದಲ ಬಾರಿಗೆ ಅವರು ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಿದ್ದಾರೆ. ಅದಿತಿ 'ರಂಗನಾಯಕಿ' ಆಗಲು ಸಿದ್ಧರಾಗಿದ್ದಾರೆ. 'ರಂಗನಾಯಕಿ' ಎಂಬ ಹೊಸ ಸಿನಿಮಾದ ನಾಯಕಿಯಾಗಿ ಅತಿಧಿ ಆಯ್ಕೆ ಆಗಿದ್ದಾರೆ.
'ರಂಗನಾಯಕಿ' ಹೆಸರು ಕೇಳಿದ ತಕ್ಷಣ ಪುಟ್ಟಣ್ಣ ಕಣಗಾಲ್ ಅವರ ಚಿತ್ರ ನೆನಪಾಗುತ್ತದೆ. ಆದರೆ, ಆ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲವಂತೆ. ಒಬ್ಬ ಸಿಟಿ ಹುಡುಗಿ ಹೇಗೆ ತನಗೆ ಆಗುವ ಅನ್ಯಾಯದ ವಿರುದ್ಧ ಹೋರಾಡುತ್ತಾರೆ ಎನ್ನುವುದು ಈ ಸಿನಿಮಾದ ಕಥೆಯಾಗಿದೆ.

ಮಹಿಳಾ ಸಬಲೀಕರಣದ ಬಗ್ಗೆ ಸಿನಿಮಾದ ಕಥೆ ಇದ್ದು, ದಯಾಳ್ ಪದ್ಮನಾಭನ್ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.
'ಬಜಾರ್' ಸಿನಿಮಾದ ನಂತರ 'ತೋತಾಪುರಿ', 'ಸಿಂಗ' ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ.
English summary
Actress Aditi Prabhudeva will be playing female lead in 'Ranganayaki' kannada movie.


Click it and Unblock the Notifications