'ಓಲ್ಡ್ ಮಂಕ್' ಹಿಡಿದು ಬರ್ತಿದ್ದಾರೆ ಸ್ಯಾಂಡಲ್ ವುಡ್ ಶ್ಯಾನೆ ಟಾಪ್ ನಟಿ
Recommended Video
ಸ್ಯಾಂಡಲ್ ವುಡ್ ನ ಶ್ಯಾನೆ ಟಾಪ್ ನಟಿ ಅದಿತಿ ಪ್ರಭುದೇವ ಈಗ ಓಲ್ಡ್ ಮಂಕ್ ಹಿಡಿದು ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಅಂದ್ರೆ ಅದಿತಿ ಕುಡುಕಿ ಆಗ್ಬಿಟ್ರಾ ಅಂತ ಅಂದ್ಕೋಬೇಡಿ. ಅದಿತಿ ಓಲ್ಡ್ ಮಂಕ್ ಹಿಡಿದು ಬರ್ತಿರೋದು ಸಿನಿಮಾದಲ್ಲಿ. 'ಓಲ್ಡ್ ಮಂಕ್' ಅದಿತಿ ಪ್ರಭುದೇವ ಅಭಿನಯದ ಹೊಸ ಸಿನಿಮಾ.
ಹೌದು, ಸ್ಯಾಂಡಲ್ ವುಡ್ ನಲ್ಲಿ ಓಲ್ಡ್ ಮಂಕ್ ಹೆಸರಿನಲ್ಲಿ ಸಿನಿಮಾ ಬರ್ತಿದ್ದಾರೆ ಎನ್ನುವ ಸುದ್ದಿ ಕೇಳಿದ್ದೀರಿ. ಈ ಸಿನಿಮಾಗೆ ಈಗ ನಾಯಕಿ ಸಿಕ್ಕಿದ್ದು, ಅದಿತಿ ಪ್ರಭುದೇವ ಆಯ್ಕೆಯಾಗಿದ್ದಾರೆ. ನಿರ್ದೇಶಕ ಮತ್ತು ನಟ ಶ್ರೀನಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರದಲ್ಲಿ ನಾಯಕನಾಗಿ ಶ್ರೀನಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಅದಿತಿ ಪಕ್ಕಾ ಸಂಪ್ರದಾಯಸ್ತ ಕುಟುಂಬದ ಹೆಣ್ಣುಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಈಗಾಗಲೆ ಅದಿತಿ ಮತ್ತು ಶ್ರೀನಿ ದಯಾಳ್ ಪದ್ಮನಾಬ್ ನಿರ್ದೇಶನದ ರಂಗನಾಯಕಿ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಈಗ ಎರಡನೇ ಬಾರಿ ಇಬ್ಬರು ಒಟ್ಟಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ.

ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯಲ್ಲಿ ನಿರವಾಗಿದೆ. ಅದಿತಿ ಪ್ರಭುದೇವ ಸದ್ಯ ಜಗ್ಗೇಶ್ ನಾಯಕನಾಗಿ ಅಭಿನಯಿಸುತ್ತಿರುವ ತೋತಾಪುರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಚಾಂಪಿಯನ್ ಸಿನಿಮಾದಲ್ಲೂ ನಿರತರಾಗಿದ್ದಾರೆ.


Click it and Unblock the Notifications











