ಹೊಸ ವರ್ಷಕ್ಕೆ ನಟಿ ಅದಿತಿ ಪ್ರಭುದೇವ ಕ್ಯೂಟ್ ಗಿಫ್ಟ್: ಮನೆಯಲ್ಲೇ ಸುಲಭವಾಗಿ ಈ ಬನಾನಾ ಕೇಕ್ ಮಾಡಿ ಸವಿಯಿರಿ
ಹೊಸ ವರ್ಷಕ್ಕೆ ಕಾಲಿಟ್ಟಾಗಿದೆ. ಸಂಭ್ರಮ ಎಲ್ಲೇಡೆ ಮುಗಿಲು ಮುಟ್ಟಿದೆ. ಹಲವು ಮಂದಿ ಹಲವು ರೀತಿಯಲ್ಲಿ ಈ ಹೊಸ ವರ್ಷವನ್ನು ವೆಲ್‌ಕಂ ಮಾಡುತ್ತಿದ್ದಾರೆ. ಹೊಸ ವರ್ಷದಲ್ಲಿ ಕೇಕ್‌ಗೆ ಸಕತ್ ಡಿಮ್ಯಾಂಡ್ ಇರುತ್ತದೆ. ಆದರೆ, ಮನೆಯಲ್ಲಿಯೇ ಮಾಡಿದ ಕೇಕ್ ನಿಮಗೂ ನಿಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹಾಗಾದರೇ ನಿಮಗೊಂದು ಸಿಂಪಲ್ ರೆಸಿಪಿ ಇಲ್ಲಿದೆ.
ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಅದಿತಿ ಪ್ರಭುದೇವ ಹೊಸ ವರ್ಷಕ್ಕೆ ಒಂದು ಸಿಂಪಲ್ ಆದ ಕೇಕ್ ರೆಸಿಪಿ ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿವಿಧ ರೆಸಿಪಿಗಳನ್ನು ಹಂಚಿಕೊಳ್ಳುತ್ತಾರೆ. ಈಗ ನ್ಯೂ ಇಯರ್ ಅನ್ನು ವೆಲ್‌ಕಂ ಮಾಡಲು ಸಕತ್ ಆಗಿರುವ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದಾದ ಬನಾನಾ ವಾಲ್‌ನಟ್ ಕೇಕ್ ರೆಸಿಪಿ ಶೇರ್ ಮಾಡಿದ್ದಾರೆ.

ಬನಾನಾ ವಾಲ್‌ನಟ್ ಕೇಕ್ ಮಾಡುವುದು ಹೇಗೆ...?
ನಟಿ ಅದಿತಿ ಪ್ರಭುದೇವ ಸ್ಯಾಂಡಲ್ವುಡ್‌ನಲ್ಲಿ ಸಕತ್ ಬ್ಯುಸಿ ಆಗಿದ್ದಾರೆ. ಇದರ ನಡುವೆಯೂ ಆಕೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವು ರೆಸಿಪಿ ಶೇರ್ ಮಾಡುತ್ತಾರೆ. ಈಗ ಹೊಸ ವರ್ಷಕ್ಕೆ ಬನಾನಾ ವಾಲ್‌ನಟ್ ಕೇಕ್ ರೆಸಿಪಿ ಹಂಚಿಕೊಂಡಿದ್ದಾರೆ. ಇದರ ಪ್ರಕಾರ ಮೊದಲಿಗೆ ಒಂದು ಮೌಲ್ಡ್‌ಗೆ ಸ್ವಲ್ಪ ಬೆಣ್ಣೆ ಸವರಬೇಕು. ನಂತರ ಅದರ ಮೇಲೆ ಸ್ವಲ್ಪ ಮೈದಾ ಹಿಟ್ಟು ಚುಮುಕಿಸಬೇಕು. ಅದರ ಮೇಲೆ ಪೇಪರ್ ಇಟ್ಟು ಮೌಲ್ಡ್ ರೆಡಿ ಮಾಡಿ ಇಟ್ಟುಕೊಳ್ಳಬೇಕು.
ಇದಾದ ನಂತರ ಕೇಕ್ ಮಿಕ್ಸ್ ತಯಾರು ಮಾಡಿಕೊಳ್ಳಬೇಕು ಅದಕ್ಕೆ ಒಂದು ಬೌಲ್‌ನಲ್ಲಿ ನಾಲ್ಕು ಚೆನ್ನಾಗಿ ಹಣ್ಣಾದ ನಾಳೆ ಹಣ್ಣುಗಳನ್ನು ಹಾಕಿ ನೀಟಾಗಿ ಸ್ಮ್ಯಾಷ್ ಮಾಡಿಕೊಳ್ಳಬೇಕು. ಸ್ಮ್ಯಾಷ್ ಮಾಡಿದ ಬಾಳೆಹಣ್ಣಿಗೆ ಬಿಳಿ ಸಕ್ಕರೆ ಪುಡಿ ಹಾಕಬೇಕು. ಇನ್ನೊಂದು ಕಪ್ ಬ್ರೌನ್ ಶುಗರ್ ಹಾಕಬೇಕು. ಬ್ರೌನ್ ಶುಗರ್ ಇಲ್ಲ ಎಂದರೆ ಮತ್ತೊಂದು ಕಪ್ ಸಕ್ಕರೆ ಪುಡಿ ಬಳಸಬಹುದು. ಈ ಮಿಶ್ರಣಕ್ಕೆ ಕರಗಿಸಿದ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಮೊಟ್ಟೆ ಇಷ್ಟಪಡುವವರು ಈ ವೇಳೆ ಎರಡು ಮೊಟ್ಟೆ ಹಾಕಿ ಮಿಕ್ಸ್ ಮಾಡಬಹುದು.

ಇದಾದ ನಂತರ ಇದಕ್ಕೆ ಹುರಿದು ಪುಡಿ ಮಾಡಿದ ಒಂದು ಬಟ್ಟಲು ಬಾದಾಮಿ ಪುಡಿಯನ್ನು ಬೆರೆಸಬೇಕು. ನಂತರ ಜರಡಿ ಹಿಡಿದು ಒಂದು ಬಟ್ಟಲು ಮೈದಾ ಹಾಕಬೇಕು. ಒಂದು ಚಮಚ ಬೇಕಿಂಗ್ ಪೌಡರ್ ಮತ್ತು ಕಾಲು ಚಮಚ ಬೇಕಿಂಗ್ ಸೋಡಾ ಮತ್ತು ಒಂದೆರಡು ಹನಿ ವೆನಿಲಾ ಎಸೆನ್ಸ್ ಹಾಕಿ ಮಿಕ್ಸ್ ಮಾಡಬೇಕು. ಮಿಶ್ರಣ ಗಟ್ಟಿ ಎನಿಸಿದರೇ ಸ್ವಲ್ಪ ಹಾಲು ಬಳಸಬಹುದು. ಇವುಗಳ ನಂತರ ಕೇಕ್‌ನ ಮೇನ್ ಪದಾರ್ಥ ವಾಲ್‌ನಟ್ ಅನ್ನು ಸ್ವಲ್ಪ ಹುರಿದು ಕಟ್ ಮಾಡಿ ಇದಕ್ಕೆ ಬೆರೆಸಬೇಕು.
ಇನ್ನು ಈ ಮಿಶ್ರಣವನ್ನು ಮೊದಲೇ ರೆಡಿ ಮಾಡಿಕೊಂಡ ಮೌಲ್ಡ್‌ಗೆ ಹಾಕಿ, ಚೆನ್ನಾಗಿ ಮೌಲ್ಡ್‌ನ ಟ್ಯಾಪ್ ಮಾಡಿ ಸೆಟ್ ಮಾಡಿಕೊಳ್ಳಬೇಕು. ನಂತರ ಇದನ್ನು 180 ಸೆಲ್ಸಿಯಸ್‌ನಲ್ಲಿ 5 ರಿಂದ 10 ನಿಮಿಷ ಪ್ರೀ ಹೀಟೆಡ್ ಆಗಿರುವ ಅವನ್‌ನಲ್ಲಿ ಇಡಬೇಕು ಬರೋಬ್ಬರಿ ಐವತ್ತೈದು ನಿಮಿಷ ಅಂದರೆ ಒಂದು ಗಂಟೆ ಇಡಬೇಕು. ಆಮೇಲೆ ಅದನ್ನು ಹೊರ ತೆಗೆದು ಆರಲು ಬಿಡಬೇಕು. ಸರಿಯಾಗಿ ಬೆಂದಿದೆಯೇ ಎಂದು ನೋಡಲು ಟೂತ್‌ಪಿಕ್ ಸಹಾಯ ಪಡೆಯಬಹುದು. ನಂತರ ಕೇಕ್ ಅನ್ನು ಕಟ್ ಮಾಡಿ ಹೊಸ ವರ್ಷವನ್ನು ಮತ್ತಷ್ಟು ಸಿಹಿಯಾಗಿ ಸಂಭ್ರಮಿಸಬಹುದು.


Click it and Unblock the Notifications