»   »  ಸಿನಿಪ್ರೇಮಿಗಳ ನಿದ್ದೆ ಕೆಡಿಸಲು ಬಂದ ಮತ್ತೋರ್ವ 'ಸಾನ್ವಿ'

ಸಿನಿಪ್ರೇಮಿಗಳ ನಿದ್ದೆ ಕೆಡಿಸಲು ಬಂದ ಮತ್ತೋರ್ವ 'ಸಾನ್ವಿ'

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಾಯಕಿ ರಶ್ಮಿಕಾ ಮಂದಣ್ಣ ಅವರನ್ನ ನೋಡಿದ ಚಿತ್ರಪ್ರೇಮಿಗಳು ಮೊದಲ ನೋಟದಲ್ಲೇ ಬೌಲ್ಡ್ ಆಗಿದ್ದರು. ಆ ಸಾನ್ವಿ ಪಾತ್ರದ ಮೇಲಂತೂ ಅದೇಷ್ಟೂ ಬಾರಿ ಲವ್ ಆಗೋಯ್ತೋ ಗೊತ್ತಿಲ್ಲ. ಆಗಿನಿಂದ ಯುವಕರೆಲ್ಲಾ 'ಬೆಳಗೆದ್ದು ಯಾರ ಮುಖವಾ ನಾನು ನೋಡಲಿ' ಎನ್ನುತ್ತಾ ರಶ್ಮಿಕಾ ಬಗ್ಗೆ ಚಿಂತೆ ಮಾಡ್ತಿದ್ರು. ಅಷ್ಟರ ಮಟ್ಟಿಗೆ ಸಾನ್ವಿ ಪಾತ್ರ ಮತ್ತು ಸಾನ್ವಿ ಪಾತ್ರಧಾರಿ ರಶ್ಮಿಕಾ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದ್ದರು.

ಈಗ ಸಾನ್ವಿ ಬಗ್ಗೆ ಏನಪ್ಪಾ ವಿಷ್ಯ ಅಂತ ಯೋಚನೆ ಮಾಡ್ತಿದ್ದೀರಾ. ಇದೇ ರೀ, ಕನ್ನಡಕ್ಕೆ ಮತ್ತೋರ್ವ ಸಾನ್ವಿ ಸಿಕ್ಕಿದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನೀವು ನೋಡಿದ ಸಾನ್ವಿಯಂತೆ ಈಕೆ ಕೂಡ ಕಾಣಿಸುತ್ತಿದ್ದು, ಒಂದು ಕ್ಷಣ ಆಶ್ಚರ್ಯವಾಗುವುದಂತೂ ಸತ್ಯ.

ಸೆಟ್ಟೇರಿದೆ ಹಾಸ್ಯದ ಜೊತೆಗೆ ಫಿಲಾಸಫಿ ಹೇಳುವ 'ಆದಿ ಪುರಾಣ'

Actress Ahalya Suresh Looking Like Rashmika Mandanna

ಅದೇ ಕಣ್ಣು, ಅದೇ ನಗು, ಅದೇ ಕನ್ನಡಕ, ಅದೇ ಕಾಸ್ಟ್ಯೂಮ್ಸ್, ಅದೇ ಸ್ಟೈಲ್......ಅಬ್ಬಾ ಥೇಟ್ ರಶ್ಮಿಕಾ ಮಂದಣ್ಣ ಅವರಂತೆ ಜೆರಾಕ್ಸ್ ಮಾಡಿದಾಗ ಇದ್ದಾರೆ.

Actress Ahalya Suresh Looking Like Rashmika Mandanna

ಹೆಸರು ಅಹಲ್ಯಾ ಸುರೇಶ್. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ನವನಟಿ. ಇತ್ತೀಚೆಗಷ್ಟೆ ಸೆಟ್ಟೇರಿದ 'ಆದಿಪುರಾಣ' ಚಿತ್ರದ ನಾಯಕಿ. 'ಆದಿಪುರಾಣ'ದ ಜೊತೆಗೆ ಆರ್‌.ಆರ್.ಮೇಕರ್ಸ್ ನಿರ್ಮಾಣ ಮಾಡುತ್ತಿರುವ 'ಭರವಸೆ' ಚಿತ್ರದಲ್ಲೂ ಅಹಲ್ಯಾ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.

Actress Ahalya Suresh Looking Like Rashmika Mandanna

ಅಂದ್ಹಾಗೆ, 'ಆದಿ ಪುರಾಣ' ಚಿತ್ರವನ್ನ ಮೋಹನ್ ಕಾಮಾಕ್ಷಿ ನಿರ್ದೇಶನ ಮಾಡುತ್ತಿದ್ದು, ಶಶಾಂಕ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮೋಕ್ಷ ಕುಶಾಲ್ ಮತ್ತು ಅಹಲ್ಯಾ ಸುರೇಶ್ ಜೋಡಿಯಾಗಿದ್ದಾರೆ. ಮೆಲೋಡಿ, ಪ್ರೀತಿಯ ಕಿತಾಬು ಚಿತ್ರಗಳಿಗೆ ಬಂಡವಾಳ ಹಾಕಿದ್ದ ಶಮಂತ್ ಕೆ ರಾವ್ ಆದಿ ಪುರಾಣ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

English summary
Kannada Actress Ahalya Suresh Selected Heroine For Kannada Movie AdiPurana. The Movie Directed By Mohan Kamakshi, and Features Shashank, Moksha Kushal And Ahalya Suresh

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada