ಮದುವೆ ನಂತರ ಹೊಸ ಸಿನಿಮಾ ಒಪ್ಪಿಕೊಂಡ ಐಂದ್ರಿತಾ ರೇ

ನಟಿ ಐಂದ್ರಿತಾ ರೇ ಮದುವೆ ನಂತರ ಯಾವ ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ನೀಡಿರಲ್ಲಿಲ. ನವರಸ ನಾಯಕ ಜಗ್ಗೇಶ್ ಗೆ ನಾಯಕಿಯಾಗಿ 'ಮೇಲ್ಕೋಟೆ ಮಂಜ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಐಂದ್ರಿತಾ ಆ ನಂತರ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದರು. ರ್ಯಾಂಬೋ-2 ಚಿತ್ರದಲ್ಲಿ ಒಂದು ಹಾಡಿನಲ್ಲಿ ಮಿಂಚಿದ್ದ ಐಂದ್ರಿತಾ ರೇ ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಪರಿಸರ ಕಾಳಜಿ ಮತ್ತು ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳ ದಾಹತೀರಿಸುವ ಕೆಲಸದಲ್ಲಿ ನಿರತಾಗಿರುವ ಐಂದ್ರಿತಾ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಆದ್ರೀಗ ಆ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಹೌದು ಮನಸಾರೆ ನಟಿ ಈಗ ನೆನಪಿರಲಿ ಪ್ರೇಮ್ ಗೆ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ.

ನೆನಪಿರಲಿ ಪ್ರೇಮ ಅಭಿನಯದ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಚಿತ್ರದಲ್ಲಿ ನಾಯಕಿಯಾಗಿ ಆಂಡಿ ಮಿಂಚುತ್ತಿದ್ದಾರೆ. ವಿಭಿನ್ನವಾದ ಸಿನಿಮಾ ಕತೆಯನ್ನು ಆಯ್ಕೆ ಮಾಡಿಕೊಂಡಿರುವ ಪ್ರೇಮ್ 25ನೇ ಸಿನಿಮಾಗೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಮುಂದೆ ಓದಿ..

ಮದುವೆ ನಂತರ ಐಂದ್ರಿತಾ ಮೊದಲ ಸಿನಿಮಾ

ಮದುವೆ ನಂತರ ಐಂದ್ರಿತಾ ಮೊದಲ ಸಿನಿಮಾ

ಐಂದ್ರಿತಾ ರೇ ಇತ್ತೀಚಿಗೆ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಕನ್ನಡದ ‘ಗರುಡ' ಚಿತ್ರದಲ್ಲಿ ಅಭಿನಯಿಸಿರುವ ಆಂಡಿ ಆ ಸಿನಿಮಾ ಇನ್ನು ರಿಲೀಸ್ ಆಗಬೇಕಿದೆ. ಆ ನಂತರ ದಿಗಂತ್ ಪತ್ನಿ ಯಾವ ಕನ್ನಡ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಡಿಸೆಂಬರ್ ನಲ್ಲಿ ನಟ ದಿಗಂತ್ ಜೊತೆ ಹಸೆಮಣೆ ಏರಿದ್ದ ಐಂದ್ರಿತಾ ಆ ನಂತರ ತನ್ನದೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಮದುವೆ ನಂತರ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಆಂಡಿ ಈಗ ಮೊದಲ ಸಿನಿಮಾಗೆ ಬಣ್ಣ ಹಚ್ಚುತ್ತಿದ್ದಾರೆ. ‘ಪ್ರೇಮಂ ಪೂಜ್ಯಂ' ಸಿನಿಮಾ ಮೂಲಕ ನೆನಪಿರಲಿ ಪ್ರೇಮ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರೇಮ್-ಆಂಡಿ ಜೋಡಿಯ ಮೂರನೇ ಸಿನಿಮಾ

ಪ್ರೇಮ್-ಆಂಡಿ ಜೋಡಿಯ ಮೂರನೇ ಸಿನಿಮಾ

‘ಪ್ರೇಮಂ ಪೂಜ್ಯಂ' ನೆನಪಿರಲಿ ಪ್ರೇಮ್ ಮತ್ತು ಐಂದ್ರಿತಾ ಅಭಿನಯದ ಮೂರನೇ ಸಿನಿಮಾ. ಮೊದಲು ‘ಅತೀ ಅಪರೂಪ' ಸಿನಿಮಾದಲ್ಲಿ ಒಟ್ಟಿಗೆ ಡ್ಯುಯೆಟ್ ಹಾಡಿದ್ದ ಈ ಜೋಡಿ ಆ ನಂತರ ‘ಚೌಕ' ಚಿತ್ರದ ಮೂಲಕ ಎರಡನೇ ಬಾರಿಗೆ ಒಂದಾಗಿದ್ದರು. ಈ ಚಿತ್ರದಲ್ಲಿ ರೆಟ್ರೋ ಶೈಲಿಯಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ಪ್ರೇಮ್ ಮತ್ತು ಆಂಡಿ ಈಗ ‘ಪ್ರೇಮಂ ಪೂಜ್ಯಂ' ಚಿತ್ರದ ಮೂಲಕ ಮತ್ತೆ ಒಂದಾಗಿರುವುದು ವಿಶೇಷ.

ನಾಲ್ಕು ಶೇಡ್ ನಲ್ಲಿ ಪ್ರೇಮ್ ಮಿಂಚಿಂಗ್

ನಾಲ್ಕು ಶೇಡ್ ನಲ್ಲಿ ಪ್ರೇಮ್ ಮಿಂಚಿಂಗ್

25ನೇ ಸಿನಿಮಾ ವಿಭಿನ್ನವಾಗಿರಬೇಕೆಂದು ಅಳೆದು ತೂಗಿ ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ಪ್ರೇಮ್, ಇತ್ತಿಚಿಗಷ್ಟೆ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ನೆನಪಿರಲಿ ಪ್ರೇಮ್ ಈ ಚಿತ್ರದಲ್ಲಿ ನಾಲ್ಕು ಶೇಡ್ ನಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರಂತೆ. ಪ್ರೇಮ್ ಅವರ ಉಳಿದೆಲ್ಲಾ ಸಿನಿಮಾಗಳಿಗಿಂತ ಈ ಸಿನಿಮಾ ವಿಭಿನ್ನವಾಗಿರಲಿದ್ದು ರೆಗ್ಯುಲರ್‌ ಫಾರ್ಮೆಟ್ ಚಿತ್ರಗಳಿಗಿಂತ ಹೊರಗಿರುವ ಸಿನಿಮಾ ಇದಾಗಿದಿಯಂತೆ. ಇನ್ನು ಕಾಮಿಡಿ, ಲವ್‌ ಸೆಂಟಿಮೆಂಟ್ ಫ್ಯಾಮಿಲಿ ಸೆಂಟಿಮೆಂಟ್ ಎಲ್ಲವು ಈ ಚಿತ್ರದಲ್ಲಿ ಇದೆಯಂತೆ. ಇದೆಲ್ಲದರ ಜೊತೆಗೆ ವಿಶೇಷವಾದ ಸಂದೇಶ ಕೂಡ 'ಪ್ರೇಮಂ ಪೂಜ್ಯಂ' ಚಿತ್ರದ ಮೂಲಕ ನೀಡಲಿದ್ದಾರೆ.

ಪ್ರೇಮಂ ಪೂಜ್ಯಂಗೆ ಯುವ ನಿರ್ದೇಶಕ

ಪ್ರೇಮಂ ಪೂಜ್ಯಂಗೆ ಯುವ ನಿರ್ದೇಶಕ

ಪ್ರೇಮ್ 25ನೇ ಸಿನಿಮಾ ವಿಭಿನ್ನವಾಗಿರಬೇಕೆಂದು ತನ್ನ ಸಿನಿ ಜೀವನದ ಬಹುಮುಖ್ಯವಾದ ಚಿತ್ರದ ಜವಬ್ದಾರಿಯನ್ನು ಹೊಸ ನಿರ್ದಶಕನ ಕೈಗೆ ವಹಿಸಿದ್ದಾರೆ. ಯುವ ಪ್ರತಿಭೆ ರಾಘವೇಂದ್ರ ‘ಪ್ರೇಮ್ ಪೂಜ್ಯಂ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ 'ಪ್ರೇಮಂ ಪೂಜ್ಯಂ' ಚಿತ್ರದ ಮೇಲೆ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದು ನಾಲ್ಕು ಶೇಡ್ ನಲ್ಲಿ ಪ್ರೇಮ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

More from Filmibeat

English summary
Actress Aindrita Ray who married Diganth in December is back in action. The actress roped in as the heroine for Prems new film 'Premam Poojyam'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X