ಮಕ್ಕಳು ನೀಡಿದ ಅಪರೂಪದ ಉಡುಗೊರೆ ಕಂಡು ಬೆರಗಾದ ಅರ್ಜುನ್ ಸರ್ಜಾ
Recommended Video

ಸಾಮಾನ್ಯವಾಗಿ ಅಪ್ಪ ಅಮ್ಮ ಮಕ್ಕಳಿಗೆ ಗಿಫ್ಟ್ ನೀಡುತ್ತಾರೆ. ಕೆಲವೊಮ್ಮೆ ಮಕ್ಕಳು ತಂದೆ ತಾಯಿಗೆ ಸಣ್ಣ ಉಡುಗೊರೆ ನೀಡಿದರೂ ಅವರಿಗೆ ಆಗುವ ಖುಷಿ ಅಷ್ಟಿಷ್ಟಲ್ಲ. ಈಗ ನಟ ಅರ್ಜುನ್ ಸರ್ಜಾ ಸಹ ಈಗ ತುಂಬ ಸಂತಸದಲ್ಲಿ ಇದ್ದಾರೆ.
ನಟ ಅರ್ಜುನ್ ಸರ್ಜಾ ಅವರ ಹುಟ್ಟುಹಬ್ಬ ಇತ್ತೀಚಿಗಷ್ಟೆ ಇತ್ತು. ಈ ಬಾರಿಯ ಹುಟ್ಟುಹಬ್ಬಕ್ಕೆ ಅವರ ಇಬ್ಬರು ಹೆಣ್ಣು ಮಕ್ಕಳು ಪ್ಲಾನ್ ಮಾಡಿ ಒಂದು ಅಪರೂಪದ ಗಿಫ್ಟ್ ನೀಡಿದ್ದರು. ಅದು ಏನ್ ಗೊತ್ತೆ ಒಂದು ಹಸು.

ಕಾರು, ಮನೆ, ಬಂಗಾರದ ಬದಲು ಪ್ರೀತಿಯ ಅಪ್ಪನಿಗೆ ಸರ್ಜಾ ಪುತ್ರಿಯರು ಒಂದು ಹಸುವನ್ನು ಗಿಫ್ಟ್ ಆಗಿ ನೀಡಿದರು. ಗುಜರಾತಿನಿಂದ ಈ ಹಸುವನ್ನು ತೆಗೆದುಕೊಂಡು ಬರಲಾಗಿತ್ತು. ಮಕ್ಕಳ ಉಡುಗೊರೆ ನೋಡಿ ಒಂದು ಕ್ಷಣ ಸರ್ಜಾ ಬೆರಗಾದರು. ಹಸು ನೋಡುತ್ತಾ 'ಬ್ಯೂಟಿಫುಲ್ ಹಸು' ಎಂದು ಅದರ ಜೊತೆ ಆಟವಾಡಿದರು.
ಅಪ್ಪನಿಗೆ ಉಡುಗೊರೆ ನೀಡಿದ ಕ್ಷಣದ ಫೋಟೋವನ್ನ ನಟಿ ಐಶ್ವರ್ಯ ಅರ್ಜುನ್ ಇಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಐಶ್ವರ್ಯ 'ಪ್ರೇಮ ಬರಹ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.


Click it and Unblock the Notifications











