'ರಾಬರ್ಟ್'ನಲ್ಲಿ ಮೈಸೂರು ಹುಡುಗಿ: ಯಾರೀ ಸುಂದರಿ?

'ರಾಬರ್ಟ್' ಸಿನಿಮಾದ ತಾರ ಬಳಗ ಹೆಚ್ಚಾಗುತ್ತಲೇ ಇದೆ. ಇದೀಗ ಚಿತ್ರತಂಡಕ್ಕೆ ಮತ್ತೊಬ್ಬ ನಾಯಕಿಯ ಆಗಮನವಾಗಿದೆ. ನಟಿ ಐಶ್ವರ್ಯ ಪ್ರಸಾದ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಭದ್ರಾವತಿ ಬೆಡಗಿ ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದಾರೆ. ಅವರ ಆಯ್ಕೆ ನಂತರ ಮತ್ತೆರಡು ನಟಿಯರು ಸಿನಿಮಾ ತಂಡವನ್ನು ಸೇರಿಕೊಂಡರು. 'ಪಂಚತಂತ್ರ' ಚಿತ್ರದ ನಾಯಕಿ ಸೋನಾಲ್ ಹಾಗೂ ತೇಜಸ್ವಿನಿ ಪ್ರಕಾಶ್ ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆಗಿತ್ತು. ಈ ನಾಯಕಿಯರ ನಂತರ ಮತ್ತೊಬ್ಬ ನಾಯಕಿ ಚಿತ್ರತಂಡಕ್ಕೆ ಎಂಟ್ರಿ ಆಗಿದ್ದಾರೆ. ವಿಶೇಷ ಅಂದರೆ, ಈ ನಾಲ್ಕು ನಾಯಕಿಯರ ಕನ್ನಡದವರೇ ಆಗಿದ್ದಾರೆ.

ಬಹು ದೊಡ್ಡ ತಾರ ಬಳಗ 'ರಾಬರ್ಟ್' ಸಿನಿಮಾ ಹೊಂದಿದೆ. ಇದೀಗ ಐಶ್ವರ್ಯ ಪ್ರಸಾದ್ ಸಹ ಚಿತ್ರತಂಡದ ಭಾಗವಾಗಿದ್ದಾರೆ. ದರ್ಶನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಅದೃಷ್ಟ ಅವರಿಗೆ ಸಿಕ್ಕಿದೆ.

ಮೈಸೂರಿನ ಹುಡುಗಿ ಐಶ್ವರ್ಯ ಪ್ರಸಾದ್

ಮೈಸೂರಿನ ಹುಡುಗಿ ಐಶ್ವರ್ಯ ಪ್ರಸಾದ್

ಐಶ್ವರ್ಯ ಪ್ರಸಾದ್ ಮೈಸೂರಿನ ಹುಡುಗಿ. ಇಂದು (ಜನವರಿ 26) ಅವರ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ಅವರನ್ನು ಸ್ವಾಗತ ಮಾಡಿದೆ. ಈ ರೀತಿ ಬರ್ತ್ ಡೇ ಗೆ ಶುಭಾಶಯ ತಿಳಿಸಿದ್ದಾರೆ. ಐಶ್ವರ್ಯ ಈಗಾಗಲೇ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಇಂತಹ ದೊಡ್ಡ ಅವಕಾಶ ಮೊದಲ ಬಾರಿಗೆ ಸಿಕ್ಕಿದೆ.

ಫೆಮಿನಾ ಮಿಸ್ ಇಂಡಿಯಾ ಬ್ಯೂಟಿ

ಫೆಮಿನಾ ಮಿಸ್ ಇಂಡಿಯಾ ಬ್ಯೂಟಿ

ಐಶ್ವರ್ಯ ಪ್ರಸಾದ್ ಮಿಸ್ ಮೈಸೂರು ವಿನ್ನರ್ ಆಗಿದ್ದಾರೆ. ಅಲ್ಲದೆ, ಫೆಮಿನಾ ಮಿಸ್ ಇಂಡಿಯಾ 2017ರ ಸ್ಪರ್ಧಿಗಳ ಪೈಕಿ ಒಬ್ಬರಾಗಿದ್ದರು. ಐಶ್ವರ್ಯ ಪ್ರಸಾದ್ ನೋಡಲು ಬಾಲಿವುಡ್ ನಟಿ ಮೌನಿ ರಾಯ್ ರೀತಿ ಕಾಣುತ್ತಾರೆ. ಹಾಗಾಗಿ ಅನೇಕರು ಅವರಿಗೆ ಹೋಲಿಕೆ ಮಾಡುತ್ತಾರೆ. ಇದು ಖುಷಿಯ ವಿಷಯವಾದರೂ, ತನ್ನ ನಟನೆಯ ಮೂಲಕ ಗುರುತಿಸಿಕೊಳ್ಳಲು ಐಶ್ವರ್ಯ ಇಷ್ಟ ಪಡುತ್ತಾರೆಂತೆ.

'ಶಾರ್ದೂಲ' ಹಾಗೂ 'ಪಡ್ಡೆಹುಲಿ' ಚಿತ್ರಗಳು

'ಶಾರ್ದೂಲ' ಹಾಗೂ 'ಪಡ್ಡೆಹುಲಿ' ಚಿತ್ರಗಳು

ಈಗಾಗಲೇ ಐಶ್ವರ್ಯ ಪ್ರಸಾದ್ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ನಟನೆಯ ಅನುಭವ ಹೊಂದಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನದ 'ಶಾರ್ದೂಲ' ಅವರ ಮೊದಲ ಸಿನಿಮಾ. ಶ್ರೇಯಸ್ ಮಂಜು ಚೊಚ್ಚಲ ಸಿನಿಮಾ 'ಪಡ್ಡೆಹುಲಿ'ಯಲ್ಲಿಯೂ ಐಶ್ವರ್ಯ ಕಾಣಿಸಿಕೊಂಡಿದ್ದರು. ಈ ಚಿತ್ರಗಳ ನಂತರ ಈಗ 'ರಾಬರ್ಟ್' ಅವರ ಕೈಗೆ ಸಿಕ್ಕಿದೆ.

'ರಾಬರ್ಟ್' ಚಿತ್ರೀಕರಣ ಮುಗಿದಿದೆ

'ರಾಬರ್ಟ್' ಚಿತ್ರೀಕರಣ ಮುಗಿದಿದೆ

'ರಾಬರ್ಟ್' ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಹೀಗಾಗಿ ಈಗ ಐಶ್ವರ್ಯ ಪ್ರಸಾದ್ ರನ್ನು ಸ್ವಾಗತ ಮಾಡಿದ್ದು, ಗೊಂದಲ ಎನಿಸಬಹುದು. ಆದರೆ, ಇಂದು ಅವರ ಹುಟ್ಟುಹಬ್ಬ ಇದ್ದು, ಇಂದೇ ಅವರ ಹೆಸರುನ್ನು ಘೋಷಣೆ ಮಾಡಲಾಗಿದೆ. 'ರಾಬರ್ಟ್' ದರ್ಶನ್ ನಟನೆಯ ಸಿನಿಮಾ. ತರುಣ್ ಸುಧೀರ್ ನಿರ್ದೇಶನ ಹಾಗೂ ಉಮಾಪತಿ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Kannada actress Aishwarya Prasad will be playing a role in Roberrt Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X