'RX ಸೂರಿ'ಯ ಆಕಾಂಕ್ಷಾ ಕುರುಡಿ ಆಗಿದ್ದು ಯಾರಿಗಾಗಿ?
'RX ಸೂರಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಆಕಾಂಕ್ಷಾ ಆ ಸಿನಿಮಾದ ಬಳಿಕ 'ಜಲ್ಸಾ' ಚಿತ್ರವನ್ನು ಮಾಡಿದ್ದರು. ಆಮೇಲೆ ಮತ್ಯಾವ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ. ಇದೀಗ ಆಕಾಂಕ್ಷಾಗೆ ಒಂದು ಒಳ್ಳೆಯ ಅವಕಾಶ ಹುಡುಕಿಕೊಂಡು ಬಂದಿದೆ. ಹೌದು, ಆಕಾಂಕ್ಷಾ ತಮ್ಮ ಮುಂದಿನ ಚಿತ್ರದಲ್ಲಿ ಕುರುಡಿಯ ಪಾತ್ರವನ್ನು ನಿರ್ವಹಿಸುವ ಚಾನ್ಸ್ ಸಿಕ್ಕಿದ್ದು, ತಮ್ಮ ಅಭಿನಯ ಸಾಮರ್ಥ್ಯವನ್ನ ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಾಗಿದೆ.
ಅಂದ್ಹಾಗೆ, ಇದು 'ಕರ್ವ' ನಿರ್ದೇಶನ ಮಾಡಿದ್ದ ನವನೀತ್ ಅವರ ಮೂರನೇ ಸಿನಿಮಾ. ತಮ್ಮ ಹೊಸ ಸಿನಿಮಾದ ಪಾತ್ರಕ್ಕಾಗಿ ನಾಯಕಿಯ ಹುಡುಕಾಟದಲ್ಲಿದ್ದ ನಿರ್ದೇಶಕರು ಈಗ ಆಕಾಂಕ್ಷಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇದೊಂದು ಮಹಿಳಾ ಪ್ರಧಾನ ಹಾರರ್-ಥ್ರಿಲ್ಲರ್ ಸಿನಿಮಾವಾಗಿದ್ದು, ಇಡೀ ಸಿನಿಮಾ ಊಟಿಯಲ್ಲಿ ಶೂಟಿಂಗ್ ಮಾಡುವ ಪ್ಲಾನ್ ನಿರ್ದೇಶಕರದ್ದಾಗಿದೆಯಂತೆ. ಸಿನಿಮಾದಲ್ಲಿ ನಾಯಕಿಯೇ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಆರ್ ಜೆ ರೋಹಿತ್ ಚಿತ್ರದ ಒಂದು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
More from Filmibeat
English summary
Kannada Actress Akanksha will play a Blind Girl role in her next movie. The Movie Directed By Navneeth Fame Of 'Karva'


Click it and Unblock the Notifications











