ದುಬಾರಿ ಬೈಕ್ ಏರಿ ಬಂದ ಕನ್ನಡ ನಟಿ: 'ರೇಸರ್' ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಹೆಚ್ಚಾಗಿ ಬರುತ್ತಿಲ್ಲ. ಪ್ಯಾನ್ ಇಂಡಿಯಾ ಹಾಗೂ ಕಮರ್ಷಿಯಲ್ ಸಿನಿಮಾ ಮಧ್ಯೆ ಇಂತಹ ಸಿನಿಮಾಗಳು ಕಣ್ಮರೆಯಾಗಿವೆ. ಆದ್ರೀಗ ಇಲ್ಲೊಂದು ತಂಡ ಮತ್ತೆ ನೈಜ ಘಟನೆಯನ್ನು ಆಧರಿಸಿದ ಸಿನಿಮಾವನ್ನು ತೆರೆಮೇಲೆ ತರುವುದಕ್ಕೆ ಹೊರಟಿದೆ. ಅದುವೇ 'ರೇಸರ್'.

ನಿರ್ಮಾಪಕ, ನಿರ್ದೇಶಕ ವಿಷ್ಣುಕಾಂತ್ ತಮ್ಮ ಪುತ್ರ ಭರತ್ ವಿಷ್ಣುಕಾಂತ್‌ರನ್ನು 'ರೇಸರ್' ಸಿನಿಮಾ ಮೂಲಕ ನಿರ್ದೇಶಕರನ್ನಾಗಿ ಪರಿಚಯ ಮಾಡುತ್ತಿದ್ದಾರೆ. ಭರತ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದರೂ, ನೈಜ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ.

Actress Akshita Satyanarayana looks stunning with a costly bike in the Racer movie

'ರೇಸರ್' ಬೈಕ್ ರೇಸಿಂಗ್ ಕುರಿತಾದ ಸಿನಿಮಾ ಆಗಿದ್ದು, ನೈಜ ಘಟನೆಯನ್ನು ಆಧರಿಸಿದೆ. ಸದ್ಯ ಸಿನಿಮಾ ಹೀರೊಯಿನ್ ಅನ್ನು ನಿರ್ದೇಶಕ ಭರತ್ ವಿಷ್ಣುಕಾಂತ್ ಇಂಟ್ರುಡ್ಯೂಸ್ ಮಾಡಿದ್ದಾರೆ. ಈ ಸಂಬಂಧ ಇತ್ತೀಚೆಗೆ ನಾಯಕಿಯ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ತೆಲುಗು ಸೀರಿಯಲ್ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ನಟಿ ಅಕ್ಷಿತಾ ಸತ್ಯನಾರಾಯಣ್. ಇದೇ ನಟಿ 'ರೇಸರ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅಕ್ಷಿತಾ ಸತ್ಯನಾರಾಯಣ್ ಮೂಲತಃ ಕನ್ನಡದವರೇ. ಮಾಡಲ್ ಕ್ಷೇತ್ರದಲ್ಲಿ ಅಕ್ಷಿತಾ ಬಹಳ ಜನಪ್ರಿಯರಾಗಿದ್ದಾರೆ. ಈಗ ನಾಯಕಿಯಾಗಿ ಯಶಸ್ಸು ಎದುರು ನೋಡುತ್ತಿದ್ದಾರೆ.

ಗ್ಯಾರೇಜ್‌ವೊಂದರಲ್ಲಿ ನಡೆದ ನೈಜ ಘಟನೆಯನ್ನು ಆಧಾರಾವಾಗಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಅದಕ್ಕೆ ಸಿನಿಮ್ಯಾಟಿಕ್ ಟಚ್ ಕೂಟ್ಟು ಸಿನಿಮಾ ಮಾಡಲಾಗುತ್ತಿದೆ. ಕನ್ನಡದಲ್ಲಿ ರೇಸ್ ಆಧರಿಸಿದ ಸಿನಿಮಾ ತೀರಾ ಕಡಿಮೆ. ಹೀಗಾಗಿ ಸಿನಿಮಾ ಮೇಲೆ ಚಿಕ್ಕದೊಂದು ಹೋಪ್ ಇದೆ.

'ರೇಸರ್' ಸಿನಿಮಾಗಾಗಿ ನಾಯಕಿ ಅಕ್ಷಿತಾ ಸತ್ಯನಾರಾಯಣ್ ಬೈಕ್ ರೇಸ್ ಕಲಿತಿದ್ದಾರಂತೆ. ಹೀಗಾಗಿ ಮೋಷನ್ ಪೋಸ್ಟರ್‌ನಲ್ಲಿ ದುಬಾರಿ ಬೆಲೆಯ ಬೈಕ್ ಏರಿ ಅಕ್ಷಿತಾ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಲುಕ್‌ಗೆ ಆರಂಭದಲ್ಲಿಯೇ ಓಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈ ಸಿನಿಮಾ ಅಕ್ಷಿತಾ ಬಬ್ಲಿ ಹುಡುಗಿಯಾಗಿ ಪಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಿನಿಮಾ ಈ ವರ್ಷದ ಆರಂಭದಲ್ಲಿಯೇ ಸೆಟ್ಟೇರಿತ್ತು. ಈಗಾಗಲೇ ಶೇ.35ರಷ್ಟು ಭಾಗ ಶೂಟಿಂಗ್ ಮುಗಿದಿದೆ. ಇದೇ ತಿಂಗಳ ಕೊನೆಯಲ್ಲಿ ಹಾಡುಗಳನ್ನು ಶೂಟ್ ಮಾಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದೇ ಸಿನಿಮಾ 'ಭಾಯ್' ಪಾತ್ರಕ್ಕಾಗಿ ಮಲಯಾಳಂ ಹಾಗೂ ಕನ್ನಡದ ಇಬ್ಬರು ಸ್ಟಾರ್‌ ನಟರನ್ನು ಚಿತ್ರತಂಡ ಅಪ್ರೋಚ್ ಮಾಡಿದೆಯಂತೆ.

'ರೇಸರ್' ಸಿನಿಮಾದಲ್ಲಿ ಸಂದೇಶ್ ಪ್ರಸನ್ನ ನಾಯಕನಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಬಾಲ ರಾಜ್ವಾಡಿ, ಕಾಮಿಡಿ ಕಿಲಾಡಿ ಸೂರಜ, ಸ್ವಾತಿ ಸೇರಿದಂತೆ ಹಲವು ಕನ್ನಡ ಕಲಾವಿದರು ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ, ಅರ್ಜುನ್ ಜನ್ಯ ಸಂಗೀತ ಈ ಸಿನಿಮಾಗಿದೆ.

More from Filmibeat

English summary
Actress Akshita Satyanarayana looks stunning with a costly bike in the Racer movie, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X