'ನಿನ್ನ ರೇಟ್ ಎಷ್ಟು?' ಎಂದ ಕಾಮುಕನಿಗೆ ಬುದ್ಧಿ ಕಲಿಸಿದ ಅಮಲಾ ಪೌಲ್

By Naveen

Recommended Video

ಅಮಲಾ ಪಾಲ್ ಮೇಲೆ ಲೈಂಗಿಕ ಕಿರುಕುಳ | Filmibeat Kannada

ಸಿನಿಮಾ ನಟಿಯರ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿರುವ ಪ್ರಕರಣ ಇತ್ತೀಚಿಗೆ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ ಕನ್ನಡದ ನಟಿ ಶೃತಿ ಹರಿಹರನ್ ತಮಗೆ ಆದ ಒಂದು ಬೇಸರದ ಘಟನೆಯನ್ನು ಹೇಳಿಕೊಂಡಿದ್ದರು. ಈಗ ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಅವರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.

ಅಮಲಾ ಪೌಲ್ ತಮಿಳು, ತೆಲುಗು, ಮಲೆಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಸ್ಟಾರ್ ನಟಿ. ಸುದೀಪ್ ಅವರ 'ಹೆಬ್ಬುಲಿ' ಸಿನಿಮಾದ ಮೂಲಕ ಅಮಲಾ ಪೌಲ್ ಕನ್ನಡಕ್ಕೆ ಕಾಲಿಟ್ಟರು. ಸದ್ಯ ಇಂತಹ ನಟಿ ಮೇಲೆ ಲೈಂಗಿಕ ಕಿರುಕುಳ ಆಗಿದೆ. ಈ ಘಟನೆಯಿಂದ ನೊಂದಿರುವ ಅಮಲಾ ಪೌಲ್ ಪೊಲೀಸ್ ಮೊರೆ ಹೋಗಿದ್ದರು. ಈಗ ಈ ನಟಿ ಮೇಲೆ ಕೆಟ್ಟದಾಗಿ ವರ್ತಿಸಿದ್ದ ಆ ಕಾಮುಕ ಅರೆಸ್ಟ್ ಆಗಿದ್ದಾನೆ. ಮುಂದೆ ಓದಿ...

ಡ್ಯಾನ್ಸ್ ಪ್ರಾಕ್ಟೀಸ್ ವೇಳೆ ಘಟನೆ

ಡ್ಯಾನ್ಸ್ ಪ್ರಾಕ್ಟೀಸ್ ವೇಳೆ ಘಟನೆ

ಮಲೇಶಿಯಾದಲ್ಲಿ ನಡೆಯುವ ಒಂದು ಕಾರ್ಯಕ್ರಮಕ್ಕಾಗಿ ನಟಿ ಅಮಲಾ ಪೌಲ್ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದು ಈ ವೇಳೆ ಅವರ ಮೇಲೆ ಇಂತಹ ಘಟನೆ ನಡೆದಿದೆ. ಡ್ಯಾನ್ಸ್ ಮಾಸ್ಟರ್ ಶ್ರೀಧರ್ ಅವರ ಸ್ಟೂಡಿಯೋದಲ್ಲಿ ಈ ಘಟನೆ ನಡೆದಿದೆ.

ಅಸಭ್ಯ ವರ್ತನೆ

ಅಸಭ್ಯ ವರ್ತನೆ

ಡ್ಯಾನ್ಸ್ ಪ್ರಾಕ್ಟೀಸ್ ಮಾಡುವ ವೇಳೆ ಅಲ್ಲಿಗೆ ಬಂದ 40 ವರ್ಷದ ಅಳಗೇಷನ್ ಎಂಬ ವ್ಯಕ್ತಿ ನಿನ್ನ ರೇಟ್ ಎಷ್ಟು? ಎಂದು ಹೇಳಿ ಅಮಲಾ ಪೌಲ್ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಚೆನೈನ ಪಾಂಡಿ ಬಜಾರ್ ಪೊಲೀಸ್ ಠಾಣೆಗೆ ಅಮಲಾ ದೂರು ನೀಡಿದ್ದಾರೆ.

ಘಟನೆ ಬಗ್ಗೆ ಅಮಲಾ ಪೌಲ್ ಮಾತು

ಘಟನೆ ಬಗ್ಗೆ ಅಮಲಾ ಪೌಲ್ ಮಾತು

ದೂರು ನೀಡಿದ ಬಳಿಕ ಘಟನೆಯ ಬಗ್ಗೆ ಮಾತನಾಡಿರುವ ಅಮಲಾ ಪೌಲ್ ''ಮಲೇಶಿಯಾದಲ್ಲಿ ನಡೆಯುವ ಒಂದು ಕಾರ್ಯಕ್ರಮಕ್ಕಾಗಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡುವ ವೇಳೆ ಅಲ್ಲಿಗೆ ಒಬ್ಬ ಬಂದು ನಿನ್ನೆ ರೇಟ್ ಎಷ್ಟು? ಎಂದು ಹೇಳಿದ. ನನಗೆ ಶಾಕ್ ಆಯ್ತು. ಅದಕ್ಕೆ ಕೂಡಲೇ ಪೊಲೀಸರಿಗೆ ದೂರು ನೀಡಿದೆ. ಒಬ್ಬ ನಟಿಗೆ ಈ ರೀತಿ ಆದರೆ ಸಾಮಾನ್ಯ ಹುಡುಗಿಯರ ಪರಿಸ್ಥಿತಿ ಏನು?'' ಎಂದು ಕೇಳಿದ್ದಾರೆ.

ಆರೋಪಿ ಬಂಧನ

ಆರೋಪಿ ಬಂಧನ

ಸದ್ಯ ನಟಿ ಅಮಲಾ ಪೌಲ್ ಗೆ ಕಿರುಕುಳ ನೀಡಿದ್ದ ಅಳಗೇಷನ್ ಎಂಬುವವನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

More from Filmibeat

English summary
South indian actress Amala Paul sexually harassed The by a 40 year old Chennai businessman at a dance studio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X