For Quick Alerts
  ALLOW NOTIFICATIONS  
  For Daily Alerts

  ಹಿಂದೂ ಸಂಪ್ರದಾಯದಂತೆ ಅಮಲಾ ಪೌಲ್ ಮದುವೆ

  By ಉದಯರವಿ
  |

  ಮಲ್ಲು ಬೆಡಗಿ ಅಮಲಾ ಪೌಲ್ ಅವರ ವಿವಾಹ ಸಂಭ್ರಮ ಹಿಂದೂ ಸಂಪ್ರದಾಯದಂತೆ ಗುರುವಾರ (ಜೂ.12) ಚೆನ್ನೈನಲ್ಲಿ ನೆರವೇರಿತು. ತಮಿಳಿನ ನಿರ್ದೇಶಕ ಎ.ಎಸ್.ವಿಜಯ್ ಅವರನ್ನು ವರಿಸಿದರು ಅಮಲಾ. ಇವರಿಬ್ಬರ ನಿಶ್ವಿತಾರ್ಥ ಮಾತ್ರ ಕ್ರೈಸ್ತ ಸಂಪ್ರದಾಯದಂತೆ ವಿಧಿವತ್ತಾಗಿ ಜೂ.7ರಂದು ನೆರವೇರಿತ್ತು.

  ಬಂಧು-ಮಿತ್ರರು, ಅತಿಥಿ ಅಭ್ಯಾಗರ ನಡುವೆ ಈ ಜೋಡಿ ನೂತನ ದಾಂಪತ್ಯಕ್ಕೆ ಅಡಿಯಿಟ್ಟರು. ಕಾಂಚೀಪುರಂ ರೇಶ್ಮೆ ಸೀರೆ ಉಟ್ಟಿದ್ದ ಅಮಲಾ ಪೌಲ್ ಎಲ್ಲರ ಕಣ್ಣುಕುಕ್ಕಿದರು. ಇನ್ನು ಮದುವೆ ಗಂಡು ವಿಜಯ್ ಅವರು ರೇಶ್ಮೆ ಪಂಚೆ ಹಾಗೂ ಬಿಳಿ ಷರ್ಟ್ ತೊಟ್ಟು ಮಿಂಚುತ್ತಿದ್ದರು. [ಅಮಲಾ ಪೌಲ್ ಮದುವೆ ಆಲ್ಬಂ]

  ತಮಿಳು ಚಿತ್ರರಂಗದ ತಾರೆಗಳಾದ ವಿಕ್ರಂ ಸೇರಿದಂತೆ ನಿರ್ದೇಶಕ ಬಾಲ ಮುಂತಾದ ಗಣ್ಯರು ಆಗಮಿಸಿ ನೂತನ ದಂಪತಿಗಳನ್ನು ಹಾರೈಸಿದರು. ಕ್ರೈಸ್ತ ಧರ್ಮಕ್ಕೆ ಸೇರಿದ ಅಮಲಾ ಪೌಲ್ ಹಾಗೂ ಹಿಂದೂ ಧರ್ಮಕ್ಕೆ ಸೇರಿರುವ ವಿಜಯ್ ಯಾರ ಮನಸ್ಸಿಗೂ ನೋವಾಗದಂತೆ ನಿಶ್ವಿತಾರ್ಥವನ್ನು ಕ್ರೈಸ್ತ ಸಂಪ್ರದಾಯದಂತೆ ಹಾಗೂ ಮದುವೆಯನ್ನು ಹಿಂದೂ ಸಂಪ್ರದಾಯಂತೆ ಮಾಡಿಕೊಂಡಿದ್ದಾರೆ. ಸ್ಲೈಡ್ ನಲ್ಲಿ ಮತ್ತಷ್ಟು ವಿವರಗಳು... [ಅಮಲಾ ಪೌಲ್ ಆರತಕ್ಷತೆ ಫೋಟೋಗಳು]

  ಮಾಂಗಲ್ಯಂ ತಂತು ನಾನೇನಾ...

  ಮಾಂಗಲ್ಯಂ ತಂತು ನಾನೇನಾ...

  ಪುರೋಹಿತರು ಮಂತ್ರ ಪಠಿಸುತ್ತಿದ್ದರೆ ಅಮಲಾ ಪೌಲ್ ಹಾಗೂ ವಿಜಯ್ ಹಾರ ಬದಲಾಯಿಸಿಕೊಂಡರು.

  ಗಟ್ಟಿಮೇಳ ಗಟ್ಟಿಮೇಳ

  ಗಟ್ಟಿಮೇಳ ಗಟ್ಟಿಮೇಳ

  ಗಟ್ಟಿಮೇಳ ಗಟ್ಟಿಮೇಳ ಎನ್ನುತ್ತಿದ್ದಂತೆ ಅಕ್ಷತೆ ಕಾಳು ಹಾಕಿ ನೂತನ ದಂಪತಿಗಳನ್ನು ಹಾರೈಸಿದರು.

  ತಾಳಿ ಕಟ್ಟುವ ಶುಭವೇಳೆ..

  ತಾಳಿ ಕಟ್ಟುವ ಶುಭವೇಳೆ..

  ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ..

  ಒಂದೇ ಒಂದು ಗ್ರೂಪ್ ಫೋಟೋ

  ಒಂದೇ ಒಂದು ಗ್ರೂಪ್ ಫೋಟೋ

  ಕ್ಯಾಮೆರಾಮೆನ್ ಸ್ಲೈಲ್ ಪ್ಲೀಸ್ ಎನ್ನುತ್ತಿದ್ದಂತೆ...

   ಚೆಂದುಟಿಯ ಪಕ್ಕದಲ್ಲಿ ತುಂಬ ಹತ್ತಿರ

  ಚೆಂದುಟಿಯ ಪಕ್ಕದಲ್ಲಿ ತುಂಬ ಹತ್ತಿರ

  ಚೆಂದುಟಿಯ ಪಕ್ಕದಲ್ಲಿ ತುಂಬ ಹತ್ತಿರ ನಿಂತು ಗುರಿಯಿಟ್ಟು ಕಾಡಿಗೆಯ ಬೊಟ್ಟಿಡಲಾ...

   ಮದುವೆ ಆಚಾರ ವಿಚಾರ ಸಂಪ್ರದಾಯ

  ಮದುವೆ ಆಚಾರ ವಿಚಾರ ಸಂಪ್ರದಾಯ

  ಮದುವೆ ಆಚಾರ ವಿಚಾರ ಸಂಪ್ರದಾಯದಲ್ಲಿ ಬಿಜಿಯಾಗಿರುವ ತಾರೆಗಳು...

  ಮಾವನಿಂದ ಸೊಸೆ ಹಣೆಗೆ ತಿಲಕ

  ಮಾವನಿಂದ ಸೊಸೆ ಹಣೆಗೆ ತಿಲಕ

  ವಿಜಯ್ ಅವರ ತಂದೆ ತನ್ನ ಸೊಸೆಯ ಹಣೆಗೆ ತಿಲಕ ಇಡುತ್ತಿರುವುದು...

  ಕೈಮುಗಿದು ಎಲ್ಲರಿಗೂ ವಂದನೆ

  ಕೈಮುಗಿದು ಎಲ್ಲರಿಗೂ ವಂದನೆ

  ಕೈಮುಗಿದು ಎಲ್ಲರನ್ನೂ ವಂದಿಸುತ್ತಿರುವ ಅಮಲ ಪೌಲ್

  ಸಮುದ್ರಕಣಿ, ವಿಕ್ರಂ ಜೊತೆಗೆ

  ಸಮುದ್ರಕಣಿ, ವಿಕ್ರಂ ಜೊತೆಗೆ

  ತಮಿಳು ಸೆಲೆಬ್ರಿಟಿಗಳ ಜೊತೆಗೆ ನೂತನ ದಂಪತಿಗಳು.

  ನಟ ವಿಕ್ರಂ ಜೊತೆಗೆ ನೂತನ ದಂಪತಿಗಳು

  ನಟ ವಿಕ್ರಂ ಜೊತೆಗೆ ನೂತನ ದಂಪತಿಗಳು

  ಇವರಿಬ್ಬರಿಗೆ ಬಹಳ ಆಪ್ತರಾಗಿರುವ ನಟ ವಿಕ್ರಂ ಕಾಣಿಸಿಕೊಂಡದ್ದು ಹೀಗೆ...

  ನನ್ನ ಪತಿ ತುಂಬಾ ರೋಮ್ಯಾಂಟಿಕ್

  ನನ್ನ ಪತಿ ತುಂಬಾ ರೋಮ್ಯಾಂಟಿಕ್

  ತನ್ನ ಪತಿಯ ಬಗ್ಗೆ ಮಾತನಾಡಿರುವ ಅಮಲಾ ಪೌಲ್, ವಿಜಯ್ ಬಗ್ಗೆ ನನಗೆ ಮಾತ್ರ ಗೊತ್ತಿರುವ ಸಂಗತಿ ಎಂದರೆ ಅವರಷ್ಟು ರೊಮ್ಯಾಂಟಿಕ್ ಮನುಷ್ಯ ಇನ್ಯಾರು ಯಾರೂ ಇಲ್ಲ ಎನ್ನುತ್ತಾರೆ.

  ಬಹಳ ಅಪರೂಪದ ಬ್ಲಡ್ ಗ್ರೂಪ್ ಅವರದು

  ಬಹಳ ಅಪರೂಪದ ಬ್ಲಡ್ ಗ್ರೂಪ್ ಅವರದು

  ಬಹಳ ಅಪರೂಪದ ಬ್ಲಡ್ ಗ್ರೂಪ್ ನವರಾದ ನನ್ನ ಪತಿ, ಆಪತ್ತಿನಲ್ಲಿರುವವರಿಗೆ ಅನೇಕ ಸಲ ರಕ್ತದಾನ ಮಾಡಿದ್ದಾರೆ ಎನ್ನುತ್ತಾರೆ ಅಮಲಾ.

  ಅತ್ತೆ ಮಾವನ ಮನಗೆದ್ದ ವಿಜಯ್

  ಅತ್ತೆ ಮಾವನ ಮನಗೆದ್ದ ವಿಜಯ್

  ವಿಜಯ್ ಅವರನ್ನು ಕೇಳದೆ ನನ್ನ ತಂದೆತಾಯಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ.

   ವಿಜಯ್, ಕುಟುಂಬಕ್ಕೆ ಮೊದಲ ಆದ್ಯತೆ

  ವಿಜಯ್, ಕುಟುಂಬಕ್ಕೆ ಮೊದಲ ಆದ್ಯತೆ

  ಮೊದಲು ಗಂಡ, ಕುಟುಂಬ, ಆ ಬಳಿಕಷ್ಟೇ ಚಿತ್ರರಂಗ.

  ಲವ್ ಸ್ಟೋರಿ ಮದುವೆಯಲ್ಲಿ ಎಂಡ್

  ಲವ್ ಸ್ಟೋರಿ ಮದುವೆಯಲ್ಲಿ ಎಂಡ್

  ಇಬ್ಬರೂ ಮೊದಲು ಲವ್ ಮಾಡುತ್ತಿದ್ದರು. ಬಳಿಕ ಗುರುಹಿರಿಯರನ್ನು ಒಪ್ಪಿಸಿ ಸಂಪ್ರದಾಯದಂತೆ ಮದುವೆಯಾದರು.

  English summary
  Actress Amala Paul and director Vijay have tied knot today (June 12) at Valliammai Hall MRC Centre, Chennai. The couple had exchanged rings recently in a church in Kochi, Kerala. They have married as per the Hindu customs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X