ಹಸೆಮಣೆ ಏರಿದ್ರಾ 'ಗ್ರಾಮಾಯಣ' ಸಿನಿಮಾ ನಾಯಕಿ ಅಮೃತಾ ಅಯ್ಯರ್: ಸ್ಪಷ್ಟನೆ ನೀಡಿದ ಬಹುಭಾಷಾ ನಟಿ

ಬೆಂಗಳೂರು ಮೂಲದ ನಟಿ ಅಮೃತಾ ಅಯ್ಯರ್ ಕಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ 'ಬಿಗಿಲ್' ಸಿನಿಮಾದಲ್ಲಿ ಮಹಿಳಾ ಫುಟ್‌ಬಾಲ್ ಟೀಮ್ ಕ್ಯಾಪ್ಟನ್ ತೆಂಡ್ರಲ್ ಪಾತ್ರದಲ್ಲಿ ನಟಿಸಿ ಈ ಚೆಲುವೆ ಮೋಡಿ ಮಾಡಿದ್ದರು. ಕನ್ನಡದ 'ಗ್ರಾಮಾಯಣ' ಚಿತ್ರದಲ್ಲಿ ಅಮೃತಾ ವಿನಯ್ ರಾಜ್‌ಕುಮಾರ್ ಜೋಡಿಯಾಗಿ ನಟಿಸಿದ್ದಾರೆ. ಕಳೆದರಡು ದಿನಗಳಿಂದ ಅಮೃತಾ ಮದುವೆ ಆಗಿದೆ ಅನ್ನುವ ಗುಸುಗುಸು ಶುರುವಾಗಿತ್ತು. ಮದುಮಗಳ ವೇಷದಲ್ಲಿ ಈಕೆಯ ಕೆಲ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ಇದಕ್ಕೆ ಕಾರಣ.

ತಮಿಳು ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿ ಬೆಳೆದ ಅಮೃತಾ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಮಲಯಾಳಂನ 'ಪದ್ಮವ್ಯೂಹಂ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ ಮುಂದೆ ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ಬಣ್ಣ ಹಚ್ಚಿದ್ದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ತಮ್ಮ ಮದುವೆ ವಿಚಾರದ ಬಗ್ಗೆ ನಟಿ ಅಮೃತಾ ಸ್ಪಷ್ಟನೆ ಕೊಟ್ಟಿದ್ದಾರೆ. 'ವಣಕಂ ಡಾ ಮಾಪಿಳೈ' ಚಿತ್ರದ ಫೋಟೊಗಳು ಅದು ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಆಕೆಯ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಅಭಿಮಾನಿಗಳು "ಅಯ್ಯೋ ನಾನು ಒಂದು ಕ್ಷಣ ಶಾಕ್ ಆಗಿಬಿಟ್ಟೆ", 'ಈಗಲೇ ಮದುವೆ ಬೇಡ" ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.

'ವಣಕಂ ಡಾ ಮಾಪಿಳೈ' ಚಿತ್ರದಲ್ಲಿ ಅಮೃತಾ ಮದುವೆಯಾಗುವ ಸನ್ನಿವೇಶವೊಂದಿತ್ತು. ಆ ಫೋಟೊದಲ್ಲಿರುವ ವರನ ಫೋಟೊವನ್ನು ಕ್ರಾಪ್ ಮಾಡಿ ಬರೀ ಅಮೃತಾ ಫೊಟೊವನ್ನು ಯಾರೋ ಶೇರ್ ಮಾಡಿದ್ದಾರೆ. ಇದನ್ನು ನೋಡಿ ನಿಜವಾಗಿಯೂ ಅಮೃತಾ ಮದುವೆ ಆಗಿದೆ ಎಂದು ಕೆಲವರು ಅಂದುಕೊಂಡಿದ್ದರು. ಹಾಗಾಗಿ ಈ ಫೋಟೊಗಳು ಸಖತ್ ವೈರಲ್ ಆಗಿತ್ತು. ಆಕೆಯ ಸ್ನೇಹಿತೆಯರು ಶುಭಾಶಯ ಕೋರಲು ಶುರು ಮಾಡಿದ ಮೇಲೆ ಎಚ್ಚೆತ್ತುಕೊಂಡು ನಟಿ ಮದುವೆ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Actress Amritha Aiyer Opens Up On Wedding Rumours

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಲಿಂಗಾ' ಚಿತ್ರದಲ್ಲೂ ಹಳ್ಳಿ ಹುಡುಗಿಯಾಗಿ ಅಮೃತಾ ಪುಟ್ಟಪಾತ್ರದಲ್ಲಿ ನಟಿಸಿದ್ದರು. ತೆಲುಗಿನ '30 ರೋಜುಲ್ಲೋ ಪ್ರೇಮಿಂಚಡಂ ಎಲಾ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ವಿನಯ್ ರಾಜ್‌ಕುಮಾರ್ ಹಾಗೂ ಅಮೃತಾ ಒಂದೇ ಕಾಲೇಜಿನಲ್ಲಿ ಓದಿದವರು. ಆಕೆ ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ 'ಗ್ರಾಮಾಯಣ' ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದು ಈಕೆಯ ಚೊಚ್ಚಲ ಕನ್ನಡ ಸಿನಿಮಾ. ಶೀಘ್ರದಲ್ಲೇ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

More from Filmibeat

English summary
Actress Amritha Aiyer Opens Up On Wedding Rumours. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X