ನೀಲಿ ಬಣ್ಣದ ಗೌನ್‌ ತೊಟ್ಟು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ ಅಮೂಲ್ಯ!

ನಟಿ ಅಮೂಲ್ಯ ತಾಯಿಯಾಗುತ್ತಿದ್ದಾರೆ. ಈ ಸಂತಸದ ವಿಚಾರವನ್ನು ಕೆಲ ತಿಂಗಳ ಹಿಂದಷ್ಟೆ ಹಂಚಿಕೊಂಡಿದ್ದ ಅಮೂಲ್ಯ ಬಹಳ ಅದ್ಧೂರಿಯಾಗಿ ಸೀಮಂತ ಕೂಡ ಮಾಡಿಕೊಂಡಿದ್ದರು. ಮೊದಲಿಗೆ ಅಮೂಲ್ಯ ಜಗದೀಶ್ ಕುಟುಂಬಸ್ಥರು ಸೇರಿ ಬಹಳ ಗ್ರ್ಯಾಂಡ್‌ ಆಗಿ ಸೀಮಂತ ಮಾಡಿದ್ದರು, ನಂತರ ಈಡೀ ಸ್ಯಾಂಡಲ್‌ವುಡ್ ಮಂದಿ ಸೇರಿ ಅಮೂಲ್ಯಾರಾ ಸೀಮಂತ ನೆರವೇರಿಸಿದ್ದರು. ಇದೀಗ ಅಮೂಲ್ಯ ತನ್ನ ಬೇಬಿ ಬಂಬ್ ಫೋಟೋಶೂಟ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಬೇಬಿಬಂಪ್ ಫೋಟೊಗಳು ವೈರಲ್ ಆಗುತ್ತಿದ್ದು, ಬಹಳ ಸುಂದರವಾಗಿ ಮೂಡಿಬಂದಿದೆ.

ಅಮೂಲ್ಯ ಪತಿ ಜಗದೀಶ್ ಜೊತೆ ಬೇಬಿ ಶವರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.ಈ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ನೀಲಿ ಬಣ್ಣದ ಡ್ರೆಸ್ ಧರಿಸಿ, ನೀರಿನ ನಡುವೆ ಹೂವಿನ ಉಯ್ಯಾಲೆಯ ಮೇಲೆ ಕುಳಿತು ಅಮೂಲ್ಯ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಸುಂದರವಾದ ಫೋಟೋಗಳು ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಅಲ್ಲದೇ ಜ್ಯೂನಿಯರ್ ಅಮೂಲ್ಯರನ್ನು ನೋಡಲು ಎಲ್ಲರೂ ಕುತೂಹಲದಿಂದ ಕಾಯುವಂತಾಗಿದೆ.

ಕಳೆದ ಕೆಲ ತಿಂಗಳ ಹಿಂದಷ್ಟೆ ಸಿಹಿ ಸುದ್ದಿ ನೀಡಿದ್ದ ಅಮೂಲ್ಯಾ ತಾನು ತಾಯಿ ಆಗುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಪತಿ ಜಗದೀಶ್ ಮತ್ತು ಅಮೂಲ್ಯ ಫೋಟೋ ಶೂಟ್ ಮಾಡಿಸಿ ಅದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ಅಮೂಲ್ಯ ವಿವಾಹದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಅವರು ಸದಾ ಆಕ್ಟೀವ್ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗಿರುತ್ತಾರೆ. ಹಾಗಾಗಿ ಅವರ ಸಂತಸದ ಕ್ಷಣಗಳನ್ನು ಅಭಿಮಾನಿಗಳು ಕೂಡ ಸಂಭ್ರಮಿಸುತ್ತಾರೆ.

Actress Amulya Baby Bump Photo Shoot

ಅಮೂಲ್ಯ ಅವರು 7 ತಿಂಗಳ ಗರ್ಭಿಣಿ ಆಗಿದ್ದಾಗ ಸೀಮಂತ ಶಾಸ್ತ್ರವನ್ನು ಕುಟುಂಬಸ್ಥರು ನೆರೆವೇರಿಸಿದ್ದರು. ನಟಿ ಅಮೂಲ್ಯ ಅವರು ಕೆಂಪು ಮತ್ತು ಗೋಲ್ಡನ್ ಬಣ್ಣದ ರೇಷ್ಮೆ ಸೀರೆಯುಟ್ಟು ಕಂಗೊಳಿಸಿದ್ದರು. ​ಈ ಸೀಮಂತ ಶಾಸ್ತ್ರದಲ್ಲಿ ಅಮೂಲ್ಯ ಮನೆಯವರು ಹಾಗೂ ಗಂಡನ ಮನೆಯವರು ಸೇರಿದಂತೆ ಆಪ್ತರು, ಸ್ನೇಹಿತರು ಭಾಗಿ ಆಗಿದ್ದರು. ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎಲ್ಲರ ಸಮ್ಮುಖದಲ್ಲಿ ಸೀಮಂತ ಕಾರ್ಯ ಸುಸೂತ್ರವಾಗಿ ನೆರವೇರಿತ್ತು.

Actress Amulya Baby Bump Photo Shoot

ಇನ್ನು ಸ್ಯಾಂಡಲ್‌ವುಡ್‌ ಸ್ನೇಹಿತರಿಗಾಗಿ ಕೂಡ ಅಮೂಲ್ಯ ಜಗದೀಶ್ ಕೆಲ ದಿನಗಳ ಹಿಂದೆ ಪಾರ್ಟಿ ಮಾಡಿದ್ದಾರೆ. ಅಮೂಲ್ಯ ಅವರು ಚಿತ್ರರಂಗದ ಸ್ನೇಹಿತರೊಂದಿಗೆ ತಮ್ಮ ಬೇಬಿ ಶವರ್ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಬಹುತೇಕ ಕನ್ನಡದ ಸಿನಿಮಾ ತಾರೆಯರು ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಮೂಲ್ಯ ಅವರ ಕುಟುಂಬ ಕೂಡ ಭಾಗಿ ಆಗಿತ್ತು. ನಟಿ ಅಮೂಲ್ಯ ಅವರು ತಮ್ಮ ಬೇಬಿ ಶವರ್ ಕಾರ್ಯಕ್ರಮದಲ್ಲಿ ಗೊಂಬೆಯಂತೆ ಕಂಗೊಳಿಸಿದ್ದಾರೆ. ಅಮೂಲ್ಯ ಮನೆಯವರು ಮಾಡಿದ್ದ ಸೀಮಂತ ಕಾರ್ಯದಲ್ಲಿ ರೇಷ್ಮೆ ಸೀರೆಯುಟ್ಟು ಕಂಗೊಳಿಸಿದ್ದರು. ಆದರೆ ಈ ಬೇಬಿ ಶವರ್ ಕಾರ್ಯಕ್ರಮದಲ್ಲಿ ಅಮೂಲ್ಯ ಅವರು ತಿಳಿ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಜೊತೆಗೆ ಪಾರ್ಟಿ ಥೀಮ್ ಹಲವು ಬಣ್ಣಗಳಿಂದ ಕೂಡಿತ್ತು. ಬಲೂನ್ ಮತ್ತು ಹೂವುಗಳಿಂದ ವೇದಿಕೆ ಅಲಂಕಾರಗೊಂಡಿತ್ತು.

Actress Amulya Baby Bump Photo Shoot

ಈಗ ಬೇಬಿ ಬಂಪ್ ಫೋಟೋ ಶೂಟ್ ಕೂಡ ಬಹಳ ಸುಂದರವಾಗಿ ಮೂಡಿಬಂದಿದ್ದು, ಅಭಿಮಾನಿಗಳು ಅಮೂಲ್ಯ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಕುಟುಂಬಸ್ಥರು ಚಿತ್ರರಂಗದ ಗಣ್ಯರು ಕೂಡ ಅಮೂಲ್ಯಾಗೆ ಹೆರಿಗೆ ಸುಗಮವಾಗಿ ಆಗಲಿ ಎಮದು ಹರಸುತ್ತಿದ್ದಾರೆ.

More from Filmibeat

English summary
Actress Amulya Baby Bump Photo shoot goes viral on social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X