For Quick Alerts
  ALLOW NOTIFICATIONS  
  For Daily Alerts

  ಒಲ್ಲೆ ಎನ್ನುತ್ತಾ ರಾಜಕೀಯದಲ್ಲಿ ಮೊದಲ ಹೆಜ್ಜೆ ಇಟ್ಟೇ ಬಿಟ್ಟರು ಅಮೂಲ್ಯ

  By Pavithra
  |
  ರಾಜಕೀಯದಲ್ಲಿ ಮೊದಲ ಹೆಜ್ಜೆ ಇಟ್ಟೇ ಬಿಟ್ಟರು ಅಮೂಲ್ಯ | Filmibeat Kannada

  ರಾಜರಾಜೇಶ್ವರಿ ನಗರದ ಮಾಜಿ ನಗರ ಪಾಲಿಕೆ ಸದಸ್ಯರಾದ ರಾಮಚಂದ್ರ ಅವರ ಮನೆ ಸೊಸೆ ಆಗಿರುವ ನಟಿ ಅಮೂಲ್ಯ ರಾಜಕೀಯ ಕ್ಷೇತ್ರಕ್ಕೆ ಬರುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ನಂತರ "ಇಲ್ಲ ನಾನು ಸಿನಿಮಾರಂಗದಲ್ಲೇ ಮುಂದುವರೆಯುತ್ತೇನೆ" ಎಂದಿದ್ದರು ಅಮೂಲ್ಯ. ಆದರೆ ಯಾರಿಗೂ ಗೊತ್ತಾಗದೆ ಅಮ್ಮು ರಾಜಕೀಯದಲ್ಲಿ ಮೊದಲ ಹೆಜ್ಜೆ ಇಟ್ಟೇ ಬಿಟ್ಟಿದ್ದಾರೆ.

  ಚುನಾವಣೆಗೆ ಇನ್ನ ಕೆಲವೇ ತಿಂಗಳುಗಳು ಬಾಕಿ ಇವೆ. ಮಾವನ ಪರವಾಗಿ ಪ್ರಚಾರ ಮಾಡುವುದರ ಜೊತೆಗೆ ಹಲವರ ಮಧ್ಯೆ ವಿಭಿನ್ನವಾಗಿ ನಿಲ್ಲಬೇಕು ಅನ್ನುವ ನಿರ್ಧಾರ ಮಾಡಿರುವಂತಿದೆ. ಇದೇ ಕಾರಣಕ್ಕೆ ಅಮೂಲ್ಯ ರಾಜಕೀಯದಲ್ಲಿ ಪ್ರಾರಂಭ ಮಾಡಿರುವ ಮೊದಲ ಕೆಲಸ ಸಮಾಜಸೇವೆ.

  'ವನಿತಾ ವಿಕಾಸ್' ಎನ್ನುವ ಹೆಸರಿನಲ್ಲಿ ಸಂಸ್ಥೆಯನ್ನ ಹುಟ್ಟುಹಾಕಿ ಈ ಮೂಲಕ ಮಹಿಳೆಯ ಏಳಿಗೆಗೆ ಶ್ರಮಿಸಲು ಸ್ಯಾಂಡಲ್ ವುಡ್ ನ ಗೋಲ್ಡನ್ ಗರ್ಲ್ ತಯಾರಿ ಮಾಡಿಕೊಂಡಿದ್ದಾರೆ. 'ವನಿತಾ ವಿಕಾಸ್' ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಅಮೂಲ್ಯ ತೆಗೆದುಕೊಂಡಿದ್ದು ಈ ಬಗ್ಗೆ ಇನ್ ಸ್ಟಾಗ್ರಾಂ ನಲ್ಲಿ ಹೇಳಿಕೊಂಡಿದ್ದಾರೆ.

  ಇತ್ತೀಚಿಗಷ್ಟೇ ರಾಮಚಂದ್ರ ಅವರು ಸೊಸೆ ತಮ್ಮ ಪರವಾಗಿ ಪ್ರಚಾರ ಮಾಡುತ್ತಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ರಾಮಚಂದ್ರ ಅವರು ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಇವರ ಆಪ್ತರಾಗಿರುವ ಶಿಲ್ಪಾ ಗಣೇಶ್ ಕೂಡ ಅದೇ ಪಕ್ಷದಿಂದ ಚುನಾವಣೆಗೆ ನಿಲ್ಲಲು ತಯಾರಿ ನಡೆಸಿದ್ದಾರೆ.

  English summary
  Kannada actress amulya has taken her first step in politics. amulya has start Vanitha Vikas foundation for women empowerment in raja rajeshwari nagar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X