ಗುಡ್‌ ನ್ಯೂಸ್ ಕೊಟ್ಟ ನಟಿ ಅಮೂಲ್ಯ: ಸಂತಸದಲ್ಲಿ ಕುಟುಂಬ!

ಕನ್ನಡದ ಸಿನಿಮಾ ನಟಿ ಅಮೂಲ್ಯ ಸದ್ಯ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹಾಗಂತ ಅಮೂಲ್ಯ ಹೊಸ ಸಿನಿಮಾ ಮಾಡ್ತಿರಾ? ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ? ಮತ್ತೆ ಕಮ್ ಬ್ಯಾಕ್ ಮಾಡುತ್ತಾರ ಅಂತ ಅಂದುಕೊಳ್ಳಬೇಡಿ. ಯಾಕೆಂದರೆ ಇದು ಅದಕ್ಕಿಂತಲೂ ದೊಡ್ಡ ಸಿಹಿ ಸುದ್ದಿ.

ನಟಿ ಅಮೂಲ್ಯ ತಾಯಿ ಆಗುತ್ತಲಿದ್ದಾರೆ. ಇದುವೇ ಸದ್ಯ ಅಮೂಲ್ಯ ಕೊಟ್ಟಿರುವ ಸಿಹಿ ಸುದ್ದಿ. ಅಮೂಲ್ಯ ಮತ್ತು ಪತಿ ಜಗದೀಶ್ ಇನ್ನು ಕೆಲವೆ ತಿಂಗಳಲ್ಲಿ ಅಪ್ಪ-ಅಮ್ಮ ಆಗುತ್ತಾರೆ.

ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಮೂಲಕ ಅಮೂಲ್ಯ ರಿವೀಲ್ ಮಾಡಿದ್ದಾರೆ. ಇನ್ನು ಜಗದೀಶ್ ಅವರು ಕೂಡ ಟ್ವಿಟ್ಟರ್ ಮೂಲಕ ಈ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. 'ನಾವೀಗ ಕೇವಲ ಇಬ್ಬರಲ್ಲ' ಎಂಬ ಕ್ಯಾಪ್ಷನ್​ ಮೂಲಕ ಅಮೂಲ್ಯ ಸಿಹಿ ಸುದ್ದಿ ನೀಡಿದ್ದಾರೆ. ಈ ಗುಡ್​ ನ್ಯೂಸ್​ ನೀಡಲು ಅವರು ಮಾಡಿಸಿರುವ ಫೋಟೋಶೂಟ್​ ಗಮನ ಸೆಳೆಯುತ್ತಿದೆ.

ಅಮೂಲ್ಯಗೆ ತುಂಬಿದೆ 6 ತಿಂಗಳು: 3 ತಿಂಗಳಲ್ಲಿ ಕಂದನ ಆಗಮನ !

ಅಮೂಲ್ಯಗೆ ತುಂಬಿದೆ 6 ತಿಂಗಳು: 3 ತಿಂಗಳಲ್ಲಿ ಕಂದನ ಆಗಮನ !

ಅಮೂಲ್ಯ ಮತ್ತು ಜಗದೀಶ್ ತಾವು ತಂದೆ-ತಾಯಿ ಆಗುತ್ತಿದ್ದಾರೆ ಎನ್ನುವ ವಿಚಾರ ಹಂಚಿಕೊಳ್ಳತ್ತಿದ್ದಂತೆಯೇ ಶುಭಾಶಯದ ಮಹಾ ಪೂರವೇ ಹರಿದು ಬಂದಿದೆ. ಅವರ ಪೋಸ್ಟ್‌ಗೆ ಸಾಕಷ್ಟು ಜನ ಕಮೆಂಟ್ ಮಾಡಿ ಶುಭಾಶಯ ಕೋರಿದ್ದಾರೆ. ಅವರ ಅಭಿಮಾನಿಗಳು ಸೇರಿದಂತೆ ಸಿನಿಮಾ ಮಂದಿಯೂ ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.

ಇನ್ನು ಅಮೂಲ್ಯ ಅವರಿಗೆ ಈಗ 6 ತಿಂಗಳು ತುಂಬಿದೆ. ಇನ್ನೂ 3 ತಿಂಗಳ ಬಳಿಕ ಮನೆಗೆ ಕಂದನ ಆಗಮನ ಆಗಲಿದೆ.

ಜಗದೀಶ್‌ ಅವರಿಗೆ ಬೇಕಂತೆ ಹೆಣ್ಣು ಮಗು!

ಜಗದೀಶ್‌ ಅವರಿಗೆ ಬೇಕಂತೆ ಹೆಣ್ಣು ಮಗು!

ಈ ಸಂತಸವನ್ನು ನಟಿ ಅಮೂಲ್ಯ ಫಿಲ್ಮಿ ಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ. "ಜಗದೀಶ್‌ ಅವರಿಗೆ ಹೆಣ್ಣು ಮಗು ಅಂದರೆ ತುಂಬಾ ಇಷ್ಟ. ಅವರು ಹೆಣ್ಣು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈಗ 6 ತಿಂಗಳು ತುಂಬಿದೆ. ಮನೆಯಲ್ಲಿ ಎಲ್ಲರಿಗೂ ಇದು ದೊಡ್ಡ ಸಂಭ್ರಮ. ಈ ವಿಚಾರ ತಿಳಿಸಲೆಂದೇ ವಿಶೇಷವಾಗಿ ಫೋಟೊ ಶೂಟ್‌ ಮಾಡಿಸಿದ್ದೇವೆ" ಎಂದಿದ್ದಾರೆ ಅಮೂಲ್ಯ. ಆದರೆ ಪತಿ ಜಗದೀಶ್ ಅವರಿಗೆ ಹೆಣ್ಣು ಮಗು ಅಂದರೆ ಅಚ್ಚು- ಮೆಚ್ಚಂತೆ. ಹಾಗಾಗಿ ಅವರು ಮಾತ್ರ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಹುಟ್ಟೋ ಮಗುವಿನ ಹೆಸರಿನ ಬಗ್ಗೆ ಏನಂತಾರೆ ಅಮೂಲ್ಯ?

ಹುಟ್ಟೋ ಮಗುವಿನ ಹೆಸರಿನ ಬಗ್ಗೆ ಏನಂತಾರೆ ಅಮೂಲ್ಯ?

"ಇನ್ನೂ ಈಗ 6 ತಿಂಗಳು. ಹಾಗಾಗಿ ಈಗಲೇ ಮಗುವಿನ ಹೆಸರಿನ ಬಗ್ಗೆ ಯೋಚನೆ ಮಾಡಿಲ್ಲ. ಮಗು ಹುಟ್ಟಿದ ಬಳಿಕ ಈ ಬಗ್ಗೆ ಯೋಚನೆ ಮಾಡುತ್ತೇವೆ". ಎಂದು ನಟಿ ಅಮೂಲ್ಯ ಹೇಳಿದರು. ಸದ್ಯ ಅಮೂಲ್ಯ, ಜಗದೀಶ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ದಂಪತಿ ಇಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಮದುವೆ ಬಳಿಕ ಅಭಿನಯದಿಂದ ದೂರಾದ ಅಮೂಲ್ಯ!

ಮದುವೆ ಬಳಿಕ ಅಭಿನಯದಿಂದ ದೂರಾದ ಅಮೂಲ್ಯ!

ಚಿತ್ರರಂಗದಲ್ಲಿ​ ಬೇಡಿಕೆ ಇರುವಾಗಲೇ ಅಮೂಲ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಜಗದೀಶ್ ಅವರ ಜೊತೆ ಅಮೂಲ್ಯ 2017ರಲ್ಲಿ ಮದುವೆ ಆದರು. ಈಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

2017ರ ಬಳಿಕ ಅಮೂಲ್ಯ ಸಿನಿಮಾಗಳಿಂದ ದೂರಾಗಿದ್ದಾರೆ. 'ಮಾಸ್ತಿಗುಡಿ' ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸಿದ ಬಳಿಕ 'ಮುಗುಳು ನಗೆ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡರು. ನಂತರ ಯಾವುದೇ ಸಿನಿಮಾ ಮಾಡಿಲ್ಲ. ಕೆಲ ಸಮಯ ರಾಜಕೀಯ ಚಟುವಚಿಕೆಗಳಲ್ಲಿಯೂ ಅಮೂಲ್ಯ ಭಾಗಿ ಆಗಿದ್ದರು. ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದು ಇನ್ನೂ ಕೆಲ ವರ್ಷವಂತರೂ ಅಮೂಲ್ಯ ಅವರನ್ನು ಸಿನಿಮಾಗಳಲ್ಲಿ ನೋಡಿವ ನಿರೀಕ್ಷೆ ಮಾಡುವಂತಿಲ್ಲ.

More from Filmibeat

English summary
Actress Amulya Jagadish Gives Good News, Announce Her Pregnancy, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X