ಅವಳಿ ಮಕ್ಕಳ ತಾಯಿ ಅಮೂಲ್ಯ ಹೇಗಿದ್ದಾರೆ? ನಟಿಯ ಹೊಸ ಗ್ಲಾಮರ್ ಲುಕ್ ನೋಡಿದ್ರಾ?
ಸ್ಯಾಂಡಲ್ವುಡ್ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಸದ್ಯ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ಬಳಿಕ ಸಿನಿಮಾ ರಂಗದಿಂದ ಅಮೂಲ್ಯ ಅಂತರ ಕಾಯ್ದು ಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಮೂಲ್ಯ ಸುದ್ದಿ ಆಗಿದ್ದರು.
ನಟಿ ಅಮೂಲ್ಯ ಸೊಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಹಾಗಾಗಿ ತಮ್ಮ ಜೀವನದ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲೇ ಅಮೂಲ್ಯ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
ಮಕ್ಕಳಾದ ಬಳಿಕ ನಟಿ ಅಮೂಲ್ಯ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಅಮೂಲ್ಯ ಹೇಗಿದ್ದಾರೆ ಎನ್ನುವುದನ್ನು ಸ್ವತಃ ಅಮೂಲ್ಯ ರಿವೀಲ್ ಮಾಡಿದ್ದಾರೆ. ತಾಯಿ ಅಮೂಲ್ಯ ಮತ್ತೆ ಗ್ಲಾಮರ್ ಗೊಂಬೆಯಂತೆ ಮಿಂಚಿದ್ದಾರೆ. ಅಮೂಲ್ಯ ಹೊಸ ಲುಕ್ ಫೋಟೋಗಳು ವೈರಲ್ ಆಗಿವೆ.

ತಾಯಿಯಾದ ಬಳಿಕ ಅಮೂಲ್ಯ ಹೇಗಿದ್ದಾರೆ?
ಸಿನಿಮಾ ನಟಿಯರು ಮದುವೆ, ಮಕ್ಕಳು ಅಂತ ಬ್ಯುಸಿ ಆದ ಬಳಿಕ ಎಷ್ಟೋ ವರ್ಷಗಳು ಕಾಣೆಯಾಗಿ ಬಿಡುತ್ತಾರೆ. ಮತ್ಯಾವಾಗೋ ಎಂಟ್ರೊ ಕೊಡ್ತಾರೆ. ಆದರೆ ನಟಿ ಅಮೂಲ್ಯ ಹೆಚ್ಚು ಸಮಯ ತೆಗೆದುಕೊಂಡಿಲ್ಲ. ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ ಈಗಲೂ ಹಾಗೆ ಇದ್ದಾರೆ. ಗ್ಲಾಮರ್ ಗೊಂಬೆಯಂತೆ ಕಾಣಿಸುವ ಅಮೂಲ್ಯ ಹೊಸ ಫೋಟೋಶೂಟ್ ಮಾಡಿಸಿ, ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಅಮೂಲ್ಯ ಗ್ಲಾಮರ್ ಲುಕ್!
ಹಸಿರು ಬಣ್ಣದ ಡ್ರೆಸ್‌ಕೊಟ್ಟು ಅಮೂಲ್ಯ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಅಮೂಲ್ಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮಕ್ಕಳಾದ ಬಳಿಕವೂ ಇಷ್ಟೋಂದು ಗ್ಲಾಮರಸ್ ಆಗಿ ಕಾಣಿಸುವ ಅಮೂಲ್ಯ ಕಮ್ ಬ್ಯಾಕ್ ಯಾವಾಗ ಎಂದು ಪ್ರಶ್ನೆ ಮಾಡುತ್ತಾ ಇದ್ದಾರೆ. ಇನ್ನು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಅಮೂಲ್ಯ ಇನ್ನೂ ಕೆಲವು ವರ್ಷ ಮಕ್ಕಳ ಪೋಷಣೆಯಲ್ಲೇ ತೊಡಗಿರುವ ಸಾಧ್ಯತೆ ಇದೆ. ಆ ಬಳಿಕ ಅಮೂಲ್ಯ ಮತ್ತೆ ಬಣ್ಣ ಹಚ್ಚಬಹುದೇನೋ.

ನಟಿಯಾಗಿ ಯಶಸ್ಸು ಕಂಡ ಅಮೂಲ್ಯ!
'ಚೆಲುವಿನ ಚಿತ್ತಾರ' ಚಿತ್ರದ ಮೂಲಕ ನಾಯಕಿಯಾದ ನಟಿ ಅಮೂಲ್ಯ, ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಎಂದು ಖ್ಯಾತಿ ಗಳಿಸಿದ್ದಾರೆ. ಇನ್ನು ಬಾಲ ನಟಿಯಾಗಿಯೂ ಅಮೂಲ್ಯ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಾಯಕಿ ಆದ ಬಳಿಕವೂ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ನಟಿ ಅಮೂಲ್ಯ ಕಮ್‌ಬ್ಯಾಕ್!
2017ರಲ್ಲಿ ಜಗದೀಶ್ ಅವರನ್ನು ಮದುವೆಯಾದ ಅಮೂಲ್ಯ, ಚಿತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದಾರೆ. ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯಂ, ಗಜಕೇಸರಿ ಸೇರಿದಂತೆ ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಅಮೂಲ್ಯ ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಬರುತ್ತಾರಾ ನೋಡಬೇಕಿದೆ.


Click it and Unblock the Notifications











